ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ಚಿಂತನೆ-ಡಾ.ಹರೀಶ್

ಡಿಸೆಂಬರಿಂದ ರಾಯಚೂರು ವಿ.ವಿ ತರಗತಿ ಆರಂಭ
ರಾಯಚೂರು ನ ೯ :- ರಾಯಚೂರು ವಿಶ್ವ ವಿದ್ಯಾಲಯ ತರಗತಿಗಳನ್ನು ಡಿಸೆಂಬರ್ ತಿಂಗಳಲ್ಲಿ ಆರಂಭಿಸಲು ನಿರ್ಧರಿಸಿದ್ದು, ಇದಕ್ಕೆ ರಾಜ್ಯ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರನ್ನು ಆಹ್ವಾನಿಸಲು ಚಿಂತನೆ ನಡೆದಿದೆ ಎಂದು ಉಪ ಕುಲಪತಿ ಪ್ರೋ.ಹರೀಶ್ ರಾಮಸ್ವಾಮಿ ಅವರು ಹೇಳಿದರು.
ಅವರಿಂದ ವಿಶ್ವ ವಿದ್ಯಾಲಯದಲ್ಲಿ ವರ್ಷದ ಪ್ರಗತಿ ಬಗ್ಗೆ ಮಾಹಿತಿ ನೀಡಿದ ಅವರು ಕಳೆದ ವರ್ಷ ವಿಶ್ವ ವಿದ್ಯಾಲಯ ಘೋಷಣೆ ನಂತರ ಅನೇಕ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಡಿಸೆಂಬರ್ ತಿಂಗಳಿಂದ ತರಗತಿ ಆರಂಭಕ್ಕೆ ಉದ್ದೇಶಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಮತ್ತು ಉನ್ನತ ಶಿಕ್ಷಣ ಸಚಿವರನ್ನು ಆಹ್ವಾನಿಸಲು ಚಿಂತನೆ ನಡೆದಿದೆ. ವಿಶ್ವ ವಿದ್ಯಾಲಯ ಅಭಿವೃದ್ಧಿಗೆ ೨೯೧ ಕೋಟಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ರಾಜ್ಯ ಮಟ್ಟದಲ್ಲಿ ಚರ್ಚೆ ನಡೆದಿದೆ.
ಕಳೆದ ಬಜೆಟ್‌ನಲ್ಲಿ ಘೋಷಿಸಿದ ೫೦ ಲಕ್ಷ ರೂ ಅನುದಾನ ಇನ್ನು ಬಿಡುಗಡೆಗೊಂಡಿಲ್ಲ. ಹಂತ ಹಂತವಾಗಿ ಬಿಡುಗಡೆಗೊಳ್ಳಲಿದೆ. ಒಟ್ಟು ನಾಲ್ಕು ಹಂತಗಳಲ್ಲಿ ಈ ಅನುದಾನ ಬಿಡುಗಡೆಗೊಳ್ಳಲಿದೆ ಎಂದ ಅವರು ಪ್ರಸ್ತುತ ವಿವಿಯಲ್ಲಿ ಎರಡು ಲ್ಯಾಬ್ ನಿರ್ಮಿಸಲಾಗಿದ್ದು, ಸಲಕರಣೆಗಳಿಗಾಗಿ ೩೦ ಲಕ್ಷ ರೂ ಅನುದಾನ ಅಗತ್ಯವಿದೆ. ಕೇಂದ್ರ ಸರಕಾರ ಜಾರಿಗೆ ತಂದ ನೂತನ ಶಿಕ್ಷಣ ನೀತಿ ಜಾರಿಗೆ ಸಂಬಂಧಿ ತಾಲೂಕಿಗೆ ಒಂದು ಕಾಲೇಜ್ ಆಯ್ಕೆ ಮಾಡಿಕೊಂಡು ಕಲಿಕೆ ಪ್ರಕ್ರಿಯೆ ನಡೆಸಲಾಗುತ್ತದೆ. ವಿಶ್ವ ವಿದ್ಯಾಲಯದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕ ಅನುಮತಿ ಪ್ರಸ್ತಾವಣೆ ಕಳುಹಿಸಲಾಗಿದೆ. ಪ್ರಸ್ತುತ ೬೩ ಹುದ್ದೆಗಳಿಗೆ ಹೊರ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಪರವಾನಿಗೆ ನೀಡಲಾಗಿದೆ
ಈ ಸಂದರ್ಭದಲ್ಲಿ ಕುಲ ಸಚಿವರಾದ ವಿಶ್ವನಾಥ, ಯರ್ರಿಸ್ವಾಮಿ ಅವರು ಉಪಸ್ಥಿತರಿದ್ದರು.