ಮುಖ್ಯನಾಲೆ ಒಡೆದ ಸ್ಥಳಕ್ಕೆ ಸಂಸದ ರಾಜಾ ಅಮರೇಶ್ವರ ನಾಯಕ ಭೇಟಿ

?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಕೆಬಿಜೆಎನಲ್ ಅಧಿಕಾರಿಗಳಿಗೆ ತರಾಟೆ
ಲಿಂಗಸುಗೂರು.ಸೆ.೨೦- ನಾರಾಯಣಪುರ ಬಲದಂಡೆ ಮುಖ್ಯನಾಲೆ ಹಾಗೂ ೭(ಎ), ವಿತರಣಾ ನಾಲೆ ಒಡೆದ ಸ್ಥಳಕ್ಕೆ ಸಂಸದ ರಾಜಾ ಅಮರೇಶ್ವರ ನಾಯಕ ನೀರಾವರಿ ಇಲಾಖೆ ಅಧಿಕಾರಿ, ಇಂಜಿನಿಯರ್‌ಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ ನೀರಾವರಿ ಇಲಾಖೆ ಕಾರ್ಯವೈಖರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬಲದಂಡೆ ಮುಖ್ಯನಾಲೆ ೩೫ ಕಿ.ಮೀ ಹಾಗೂ ವಿತರಣಾ ನಾಲೆ ಸಂಖ್ಯೆ ೦೭(ಎ)ರಲ್ಲಿ ನಾಲೆ ಒಡೆದ ಸ್ಥಳಗಳಿಗೆ ಸಹಾಯಕ ಆಯುಕ್ತ ರಾಹುಲ್ ಸಂಕನೂರು ಸೇರಿದಂತೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ ಸಂಸದರು, ಬಲದಂಡೆ ನಾಲೆ ಆಧುನೀಕರಣ ವೇಳೆ ಗುತ್ತಿಗೆದಾರರು ನಾಲೆಯ ಪಕ್ಕದ ಹೊಲಗಳ ನೀರು ಹರಿದು ಹೋಗುವ ಮಾರ್ಗಗಳನ್ನು ಮುಚ್ಚಿದ್ದರಿಂದ ಮಳೆ ನೀರು ಜಮೀನಿಗೆ ನುಗ್ಗಿವೆ ೦೮ ಎಕರೆ ಬೆಳೆ ಜಲಾವೃತಗೊಂಡಿದೆ. ವಾಸ ಮಾಡುವ ಮನೆ ನೀರಿನಲ್ಲಿ ಮುಳಗಿ ನಾಲ್ಕಾರು ದಿನಗಳ ಆಹಾರ ಇಲ್ಲದಂಗ್ ಆಗಿತ್ತು. ಬೆಳೆ ಸಂಪೂರ್ಣ ಹಾಳಾಗಿದೆ. ಇವರು ಆಡುವ ಆಟಕ್ಕೆ ಏನು ಮಾಡಬೇಕು ಎಂದು ರಂಗಪ್ಪ ಬಡಿಗೇರ ಸಂಸದ ರಾಜಾ ಅಮರೇಶ್ವರ ನಾಯಕರ ಮುಂದೆ ಅಳಲು ತೊಡಿಕೊಂಡ ತಕ್ಷಣವೇ ಬೆಳೆನಷ್ಟವಾದ ರೈತರಿಗೆ ಪರಿಹಾರ ನೀಡಬೇಕೆಂದು ಸಹಾಯಕ ಆಯುಕ್ತ ರಾಹುಲ್ ಸಂಕನೂರವರಿಗೆ ಸೂಚಿಸಿದರು.
ಮುಖ್ಯನಾಲೆಯ ಅಕ್ಕಪಕ್ಕದಲ್ಲಿ ಶೇಖರಣೆಗೊಳ್ಳುವ ಮಳೆ ನೀರು ಹರಿದು ಹೋಗಲು ಸಮಪರ್ಕ ವ್ಯವಸ್ಥೆ ಮಾಡಿಲ್ಲ ಪರಿಣಾಮ ರೈತರ ಹೊಲಗಳಿಗೆ ನೀರು ನುಗ್ಗಿ ಹತ್ತಾರು ಎಕರೆ ಬೆಳೆ ಹಾನಿಯಾಗಿದೆ. ಹೀಗಾದರೆ ರೈತರು ಹೇಗೆ ಬದುಕಬೇಕು. ಮಳೆ ನೀರು ಹರಿದು ಹೋಗುವ ಮಾರ್ಗಗಳ ಮುಚ್ಚಿದ್ದರಿಂದ ಮಳೆ ನೀರು ನಾಲೆ ನುಗ್ಗಿದ್ದೆ ಗುಣಮಟ್ಟದ ಕಾಮಗಾರಿ ಕೈಗೊಂಡಲ್ಲಿ ಕಳಪೆ ನಿರ್ಮಿಸಿದೆಡೆ ಕಿತ್ತು ಹೋಗಿದೆ. ಕಾಮಗಾರಿ ನಿರ್ಮಾಣ ಹಂತದಲ್ಲೆ ಹೀಗಾದರೇ ಹೇಗೆ?.. ರೈತರಿಗೆ ಆಗಿರುವ ನಷ್ಟ ಯಾರು ಭರಿಸಬೇಕು ಎಂದು ನೀರಾವರಿ ಇಲಾಖೆ ಅಧಿಕಾರಿಗಳನ್ನು ಸಂಸದರು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ರಾಜಾ ಸೋಮನಾಥ ನಾಯಕ, ಗಜೇಂದ್ರ ನಾಯಕ, ಪವನ ಕುಲಕರ್ಣಿ, ಅಮರೇಶ ರತ್ನಗಿರಿ, ಕೆಬಿಜೆಎನ್‌ಎಲ್‌ನ ಅಧೀಕ್ಷಕ ಅಭಿಯಂತರ ಸಂಜೀವ ಕುಮಾರ, ಇಇ ಶಂಕರ ಕಿಮಾವತ್, ಎಇಇ ಮಲ್ಲಿಕಾರ್ಜುನಗೌಡ, ಜೆಇ ಬೈಲಪ್ಪ ಸೇರಿದಂತೆ ಇದ್ದರು.