ಮುಖ್ಯಗುರು ಬಲವಂತರಾವ ಪಾಂಡ್ರೆ ರವರ ಬಿಳ್ಕೋಡಗೆ

ಬೀದರ:ಜೂ.11:ಇತ್ತಿಚ್ಚಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈಲೂರನ ಮುಖ್ಯಗುರುಗಳಾಗಿದ ಬಲವಂತರಾವ ಪಾಂಡ್ರೆ ರವರು ವಯೋ ನಿವೃತ್ತಿ ಹೊಂದಿದ ಪ್ರಯುಕ್ತ ಎಸ್.ಡಿ.ಎಂ.ಸಿ ಮೈಲೂರ ವತಿಯಿಂದ ಅದ್ದೂರಿ ಸನ್ಮಾನ ಮಾಡಿ ಬಿಳ್ಕೋಡಲಾಯಿತ್ತು ಬಿಳ್ಕೋಡಗೆ ಸಮಾರಂಭ ಉದ್ದೇಶಿಸಿ ಎಸ್.ಡಿ.ಎಂ.ಸಿ ಅಧ್ಯಕ್ಷ ಮಹೇಶ ಗೋರನಾಳಕರ್ ಮಾತನಾಡಿ ಬಲವಂತರಾವ ಪಾಂಡ್ರೆ ಸರ್ ರವರು ಉತ್ತಮ ಸೇವೆ ಸಲ್ಲಿಸಿ ಶಿಕ್ಷಕ ಹುದ್ದೆಗೆ ಗೌರವ ಹೆಚ್ಚಿಸಿದ್ದಾರೆ ಸದಾಕ್ರೀಯಾಶೀಲರಾದ ಇವರು ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದು ಶಿಕ್ಷಣ ಇಲಾಖೆಗೆ ಕೀರ್ತಿ ತಂದಿದಾರೆ ಇವರ ಉತ್ತಮ ಸೇವೆ ಪರಿಗಣಿಸಿ ವಿವಿಧ ಸಂಘ ಸಂಸ್ಥೆಗಳು ಸನ್ಮಾನಿಸಿವೆ ಇವರು ನಮ್ಮ ಮೈಲೂರ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿರುವುದು ಅತಿವ ಸಂತಸ ತಂದಿದೆ ಎಂದು ತಿಳಿಸಿ ಪಾಂಡ್ರೆ ದಂಪತಿಗಳಿಗೆ ಶಾಲು ಹೋದಿಸಿ ,ಪೇಟ ತೊಡಿಸಿ ಅದ್ದೂರಿ ಸನ್ಮಾನ ಮಾಡಿ ವಯೋನಿವೃತಿ ಜೀವನ ಯಶಸ್ವಿಯಾಗಲೇಂದು ಶುಭಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಲವಂತರಾವ ಪಾಂಡ್ರೆ ರವರು ಮಕ್ಕಳಿಗೆ ಪಾಠ ಮಾಡುವ ಹುದ್ದೆ ಸಿಕ್ಕಿದು ನನ್ನ ಪಾಲಿನ ಸೌಭಾಗ್ಯ ನನ್ನ ಅಧಿಕಾರದ ಅವಧಿಯಲ್ಲಿ ಸಹಾಯ ಸಹಕಾರ ನೀಡಿದ ಎಸ್.ಡಿ.ಎಂ.ಸಿ ಮತ್ತು ಶಿಕ್ಷಕ ಶಿಕ್ಷಕಿಯರು ಹಾಗೂ ಮಕ್ಕಳಿಗೆ ಚಿರರುಣಿಯಾಗುವೆ ಎಂದು ನುಡಿದರು.

ಕನ್ಯ ಪ್ರೌಢ ಶಾಲೆಯ ಮುಖ್ಯಗುರು ರಾಘವೇಂದ್ರ ಕುಲಕರ್ಣಿ, ಶಿಕ್ಷಕರಾದ ದೇವಿಪ್ರಸಾದ ಕಲಾಲ್, ಸಂಜುಕುಮಾರ ಚಾಲಕ್, ಹಾವಯ್ಯ ಸ್ವಾಮಿ, ನಾಗನಾಥ ಬಿರಾದರ್, ವಿಜಯಕುಮಾರ ಸಾಗರ, ಶ್ರಾವಣ ಜನವಾಡಾ ಸರ್ ಹಾಗೂ ಶಿಕ್ಷಕಿಯರು ಮಕ್ಕಳು ಪಾಂಡ್ರೆ ರವರಿಗೆ ಸನ್ಮಾನಿಸಿ ಸಿಹಿ ತಿನಿಸಿ ಶುಭಕೋರಿ ಬಿಳ್ಕೋಟ್ಟರು.

ಈ ಸಂದರ್ಭದಲ್ಲಿ ಕನ್ಯ ಪ್ರೌಢ ಶಾಲೆ ಹಾಗೂ ಸ.ಹಿ.ಪ್ರಾ.ಶಾಲೆಯ ಶಿಕ್ಷಕ ಶಿಕ್ಷಕಿಯರು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು