ಮುಖ್ಯಗುರುಗಳ ವಿರುದ್ದ ಸೂಕ್ತ ಕ್ರಮಕ್ಕೆ ಆಗ್ರಹ

ಕೆಂಭಾವಿ:ಜ.17:ಸರಕಾರದ ಆದೇಶವಿದ್ದರೂ ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸದ ಪಟ್ಟಣದ ಸಮೀಪ ದೋರನಹಳ್ಳಿ ಪ್ರಾಥಮಿಕ ಶಾಲೆಯ ಮುಖ್ಯಗುರುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಅವರು, ಎರಡ್ಮುರು ವರ್ಷಗಳಿಂದ ಶಾಲೆಯ ಮುಖ್ಯಗುರು ಉದ್ದೇಶಪೂರ್ವಕವಾಗಿಯೆ ಸಿದ್ಧರಾಮೇಶ್ವರ ಜಯಂತಿಗೆ ಗೈರಾಗುತ್ತಿದ್ದಾರೆ. ಅಡುಗೆ ಸಿಬ್ಬಂದಿ ಮುಖಾಂತರ ಭಾವಚಿತ್ರಕ್ಕೆ ಪೂಜೆ ಮಾಡಿಸಿರುತ್ತಾರೆ. ಕಳೆದ ವರ್ಷವೂ ಈ ಕುರಿತು ಮನವಿ ಸಲ್ಲಿಸಲಾಗಿತ್ತು. ಆದರೆ ಯಾವದೆ ಕ್ರಮ ಕೈಗೊಂಡಿರಲಿಲ್ಲ. ಕಳೆದ ಹದಿನೈದು ದಿನದ ಹಿಂದೆಯೆ ಮುಖ್ಯಗುರುಗಳ ಗಮನಕ್ಕೆ ಜಯಂತಿ ಕುರಿತು ತರಲಾಗಿದ್ದರೂ ಮತ್ತೆ ಗೈರಾಗಿದ್ದಾರೆ. ಉದ್ದೇಶಪೂರ್ವಕವಾಗಿ ಜಯಂತಿಗೆ ಆಗಮಿಸಿದ ಮುಖ್ಯಗುರುಗಳ ವಿರುದ್ಧ ಇಲಾಖಾ ತನಿಖೆ ಕೈಗೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಸಿದ್ದಪ್ಪ ಭೋವಿ ವಡ್ಡರ, ರಾಮಯ್ಯ ಆಲ್ಹಾಳ, ಬಸವರಾಜ ಭೋವಿ ಕೆಂಭಾವಿ, ರಮೇಶ, ಯಂಕಪ್ಪ, ಭೀಮು, ಭೀಮಪ್ಪ ಆಲ್ಹಾಳ ಸೇರಿದಂತೆ ಅನೇಕರಿದ್ದರು.