ಮುಖವಾಡ ಇಲ್ಲದವನು ಟ್ರೇಲರ್​ ಅನಾವರಣ

ಶೀರ್ಷಿಕೆ ಮೂಲಕವೇ ಕುತೂಹಲ ಮೂಡಿಸುವ ‘ಮುಖವಾಡ ಇಲ್ಲದವನು 84 ಚಿತ್ರದ ಟ್ರೇಲರ್​‌ ಅನಾವರಣಗೊಂಡಿದೆ.
ಹೊಸಬರ ತಂಡದ ಶ್ರಮಕ್ಕೆ ನಿರ್ದೇಶಕ ರವಿ ಶ್ರೀವತ್ಸ ಮತ್ತು ವೇಣುಗೋಪಾಲ್​ ಅತಿಥಿಯಾಗಿ ಆಗಮಿಸಿ ಶುಭ ಹಾರೈಸಿದ್ದಾರೆ.
ಗಣಪತಿ ಪಾಟೀಲ್​ ಬೆಳಗಾವಿ ಚಿತ್ರಕ್ಕೆ ಬಂಡವಾಳ ಹೂಡಿದ್ದು ನ್ಯೂಜಿಲೆಂಡ್​ನಲ್ಲಿ ವಾಸವಾಗಿದ್ದಾರೆ. ‘ಮುಖವಾಡ ಇಲ್ಲದವನು 84’ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿರುವ ಇಡೀ ತಂಡ, ಬಿಡುಗಡೆಯ ಸಿದ್ಧತೆ ಮಾಡಿಕೊಳ್ಳುತ್ತಿದೆ.
ನಿರ್ಮಾಪಕ‌ಗಣಪತಿ‌ ಅವರು , ಎರಡು ವರ್ಷದ ಹಿಂದೆ ಶಿವಕುಮಾರ್ ಪರಿಚಯ. ಸಿನಿಮಾ ಮಾಡುವ ಬಗ್ಗೆ ನಿರ್ಧಾರ ಅಂತಿಮವಾಗುತ್ತಿದ್ದಂತೆ, ಒಂದೇ ವಾರದಲ್ಲಿ ಶೂಟಿಂಗ್​ ತಯಾರಿ ನಡೆಸಿ 40 ದಿನದಲ್ಲಿ ಚಿತ್ರೀಕರಣವನ್ನೂ ಮುಗಿಸಿದೆವು. ತುಂಬ ವಿಭಿನ್ನ ಶೈಲಿಯ ಸಿನಿಮಾ ಇದು. ಡೈಲಾಗ್​ಗಳಲ್ಲಿ ತುಂಬ ಅರ್ಥವಿದೆ‘ ಎಂದರು.


ಶಿವಕುಮಾರ್ ಕಡೂರು ನಿರ್ದೇಶನದ ಜತೆಗೆ ಮುಖ್ಯಭೂಮಿಕೆಯಲ್ಲಿಯೂ ನಟಿಸಿದ್ದಾರೆ. ‘ನಾಲ್ಕು ವರ್ಷ ಸಾಧುಗಳ ಸಂಗ ಮಾಡಿ ಆಧ್ಯಾತ್ಮ, ವೈರಾಗ್ಯದ ಮೊರೆ ಹೋಗಿದ್ದೆ. ಆ ವೇಳೆಯಲ್ಲಿ ಮುಖವಾಡ ಇಲ್ಲದವನು ಎಂಬ ಪುಸ್ತಕವನ್ನೂ ಬರೆದಿದ್ದೆ. ಸಾಧು ಸಂತರಿಂದ ಕಲಿತದ್ದನ್ನೇ ಇದೀಗ ಸಿನಿಮಾ ಮಾಡಿದ್ದೇನೆ. ಸುವರ್ಣಮುಖಿ, ಬನ್ನೇರುಘಟ್ಟ, ಚಿಕ್ಕಮಗಳೂರು, ಬೆಳಗಾವಿ, ಅಂಬೂಲಿ ಸೇರಿ ಹಲವೆಡೆ ಚಿತ್ರೀಕರಣ ಮಾಡಿದ್ದೇವೆ’ ಎಂದರು.
ಕಾವ್ಯಾ ಗೌಡ, ರಚನಾ, ಸೊನಾಲಿ ರಾಯ್​ ಮತ್ತು ಹರೀಶ್​ ಸಾರಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ದುರ್ಗಾ ಪ್ರಸಾದ್​ ಸಂಗೀತ, ಡಾ. ಮಹಾರಾಜಾ ಹಿನ್ನೆಲೆ ಸಂಗೀತ, ಮಧು ಆರ್ಯ ಕ್ಯಾಮರಾ ಕೆಲಸ ಮಾಡಿದ್ದಾರೆ.
ಸೆನ್ಸಾರ್‌ನಿಂದ ಯುಎ ಪ್ರಮಾಣ ಪತ್ರ ಪಡೆದುಕೊಂಡಿರುವ ಈ ಸಿನಿಮಾ ಡಿಸೆಂಬರ್​ ವೇಳೆಗೆ ಬಿಡುಗಡೆಯಾಗುವ ಸಾದ್ಯತೆಗಳಿವೆ.