ಬೀದರ್:ಜೂ.26: ಭಾರತೀಯ ಜನತಾ ಪಾರ್ಟಿಯ ಕಾರ್ಯಾಲಯದಲ್ಲಿ ಜನಸಂಘದ ಸಂಸ್ಥಾಪಕ ಡಾ. ಶ್ಯಾಮಪ್ರಸಾದ ಮುಖರ್ಜಿಯವರ 70ನೇ ಬಲಿದಾನ ದಿವಸವನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಡಾ.ಶ್ಯಾಮಪ್ರಸಾದ ಮುಖರ್ಜಿಯವರ ಜೀವನಿ ಮೇಲೆ ಜಿಲ್ಲಾ ಭಾಜಪಾ ಅಧ್ಯಕ್ಷರಾದ ಶಿವಾನಂದ ಮಂಠಾಳಕರ ಅವರು ಮಾತನಾಡಿ, ಡಾ.ಶ್ಯಾಮಪ್ರಸಾದ ಮುಖರ್ಜಿಯವರು ಸಾಯುವವರೆಗೆ ಎಕ ದೇಶ ಮೇ ದೋ ವಿಧಾನ, ದೋ ನಿಶಾನ, ದೋ ಪ್ರಾಧಾನ, ನಹೀ ಚಲೆಗಾ, ನಹೀ ಚಲೆಗಾ ಎಂಬ ಘೋಷಣೆಯನ್ನು ಕೂಗುತ್ತಾ 370 ಮತ್ತು 35ಎ ವಿರುದ್ಧ ಹೋರಾಟ ಮಾಡಿದರು ಎಂದು ಸ್ಮರಿಸಿದರು. ಈ ಸಂದರ್ಭದಲ್ಲಿ ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ, ಭಾಜಪಾ ನಾಯಕರಾದ ರಾಜಶೇಖರ ನಾಗಮೂರ್ತಿ, ಸೋಮನಾಥ ಪಾಟೀಲ, ರಾಜಕುಮಾರ ನೆಮತಾಬಾದ, ಸುಧಾಕರ ವಿಶ್ವಕರ್ಮ, ರಾಜು ಭಂಡರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.