(ಸಂಜೆವಾಣಿ ವಾರ್ತೆ)
ಹುಮನಾಬಾದ್:ಮೇ.31: ಬಿಜೆಪಿ ಮುಖಂಡರ ಹಾಗೂ ಕಾರ್ಯಕರ್ತರ ಶ್ರಮದಿಂದಲೇ ಹುಮನಾಬಾದ್ ಕ್ಷೇತ್ರದಲ್ಲಿ ಬಿಜೆಪಿ ಗೆಲವು ಸಾಧಿಸಲು ಸಾಧ್ಯವಾಗಿದೆ ಎಂದು ಶಾಸಕ ಡಾ. ಸಿದ್ದು ಪಾಟೀಲ್ ಹೇಳಿದರು.
ತಾಲೂಕಿನ ಮಾಣಿಕ ನಗರ ಗ್ರಾಮದ ಹೊರ ವಲಯದ ಮಾಣಿಕ್ಯ ಸೌಧದಲ್ಲಿ ಬಿಜೆಪಿ ಮಂಡಲ ವತಿಯಿಂದ ಆಯೋಜಿಸಿದ್ದ ಕಾರ್ಯಕರ್ತರ ಅಭಿನಂದನಾ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಎಲ್ಲಾ ಹಿರಿಯರು, ಮಾರ್ಗದರ್ಶಕರು, ಸಹೋದರರು, ಕಾರ್ಯಕರ್ತರು, ಮಾತೆಯರು, ಸಹೋದರಿಯರು, ತೋರಿದ ಪ್ರೀತಿ ಅಭಿಮಾನಕ್ಕೆ ನಾನು ಸದಾ ಚಿರ ಋಣಿಯಾಗಿದ್ದೇನೆ. ಎಲ್ಲರ ಆಶೋತ್ತರಗಳನ್ನು ಈಡೇರಿಸಲು ನಿರಂತರವಾಗಿ ಹುಮನಾಬಾದ ಅಭಿವೃದ್ದಿಗಾಗಿ ಶ್ರಮಿಸುತ್ತೇನೆ ಎಂದು ಹೇಳಿದ್ದರು.
ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ, ಬಿಎಸ್‍ಎಸ್‍ಕೆ ಅಧ್ಯಕ್ಷ ಸುಭಾಷ ಕಲ್ಲೂರ, ಜಿಲ್ಲಾಧ್ಯಕ್ಷ ಶಿವಾನಂದ ಮಂಠಳಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಕಾರ್ಜುನ ಕುಂಬಾರ, ಬಸವರಾಜ ಆರ್ಯ, ಪದ್ಮಾಕರ ಪಾಟೀಲ, ಮಂಡಲದ ಅಧ್ಯಕ್ಷ ಪ್ರಭಾಕರ ನಾಗರಾಳೆ, ಗಜೇಂದ್ರ ಕನಕಟಕರ್, ಸಂತೋಷ ಪಾಟೀಲ, ಸುನೀಲ ಪಾಟೀಲ, ಮಂಡಲದ ಮಹಿಳಾ ಮೋರ್ಚಾ ಅಧ್ಯಕ್ಷೆ ಉಷಾರಾಣಿ ರೆಡ್ಡಿ, ಶಿವಕುಮಾರ ತೀರ್ಥ, ಗಿರೀಶ ಪಾಟೀಲ, ರವಿ ಹೊಸ್ಸಳ್ಳಿ, ಅಭಿಮನ್ಯು ನಿರಗುಡಿ, ಮಧುಕರ ಹಿಲಾಲಪೂರ, ಪ್ರವೀಣ ರಾಜಪೂರೆ, ವಿನಾಯಕ್ ಮಂಡಾ, ಸೂರ್ಯಕಾಂತ ಮಠಪತಿ, ಶಿವಶಂಕರ ತರನಳ್ಳಿ, ಅನಿಲ ಪಸಾರ್ಗಿ, ರೇವಣಪ್ಪಾ ಹೂಗಾರ, ನಾರಾಯಣ ರಾಂಪೂರೆ, ವೈಜಿನಾಥ ಪಾಟೀಲ, ಗಿರೀಶ ತುಂಬಾ, ನಾಗಭೂಷಣ ಸಂಗಮ್, ಇದ್ದರು.