ಮುಕ್ತ ಹಾಗೂ ನ್ಯಾಯ ಸಮ್ಮತ ಮತದಾನಕ್ಕಾಗಿ ಸಕಲ ಸಿದ್ಧತೆ 

ದಾವಣಗೆರೆ.ಮಾ.೩೦; ಜಿಲ್ಲೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ 240 ಮತಗಟ್ಟೆಗಳು ಇದ್ದು, ಒಟ್ಟು 1,89,991 ಮತದಾರರು ಇದ್ದಾರೆ ಎಂದು ದಾವಣಗೆರೆ ಉಪ ವಿಭಾಗಾಧಿಕಾರಿಗಳು ಹಾಗೂ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಯಾಗಿರುವ ದುರ್ಗಾಶ್ರೀ. ಎನ್ ತಿಳಿಸಿದರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ 94,829 ಪುರುಷ ಮತದಾರರು, 92,836 ಮಹಿಳಾ ಮತದಾರರು ಇದ್ದಾರೆ ಎಂದು ಹೇಳಿದರುವಿಶೇಷ ವಿಕಲಚೇತನ ಮತದಾರರು 2570 ಇದ್ದು ಇದರಲ್ಲಿ ಪುರುಷರು 1613 ಮಹಿಳೆಯರು 957 ಜನ ಇದ್ದಾರೆ. ಇದಲ್ಲದೆ ಸರ್ವಿಸ್ ವೋಟರ್ಸ್ ಗಳು 120 ಜನ ಇದ್ದಾರೆ ಅಲ್ಲದೆ 52 ಜನ ಬಂದಿದ್ದ ವಿಐಪಿ ಗಳು ಇದ್ದಾರೆ ಎಂದು ಮಾಹಿತಿ ನೀಡಿದರು.80 ವರ್ಷಕ್ಕೂ ಮೇಲ್ಪಟ್ಟ 3816 ಮತದಾರರಿದ್ದು, ಎಲ್ಲ ಮತಗಟ್ಟೆಗಳನ್ನು ಮುಕ್ತ ಹಾಗೂ ನ್ಯಾಯ ಸಮ್ಮತ ಮತದಾನಕ್ಕಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು ಸಹಾಯಕ ಚುನಾವಣಾಧಿಕಾರಿ ಹಾಗೂ ದಾವಣಗೆರೆ ತಾಲ್ಲೂಕು ತಹಶಿಲ್ದಾರರ ಡಾ.ಎಂ.ಬಿ.ಅಶ್ವಥ್ ಮಾತನಾಡಿ, ಮಾಯಕೊಂಡ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಅಕ್ರಮ ನಡೆಯದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.