ಮುಕ್ತ ಸಂಚಾರ ನೀಡಲು ಆಗ್ರಹ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಸೆ15: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಕ್ರಾಂತಿಕಾರಕ ಗ್ಯಾರಂಟಿಗಳನ್ನು ನೀಡಿ ಅಭೂತಪೂರ್ವ ಸಾಧನೆ ಮಾಡಿದೆ. ಕಳೆದ ನಾಲ್ಕು ತಿಂಗಳಿನಿಂದ ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ರಾಜ್ಯಾದ್ಯಂತ ಸಂಚರಿಸಲು ಮುಕ್ತ ಅವಕಾಶ ನೀಡಿದೆ ವೇಗಧೂತ ಹವಾ ನಿಯಂತ್ರಿತ ಬಸುಗಳಲ್ಲಿ ಮಾತ್ರ ಹೊರತುಪಡಿಸಿ ಉಳಿದಂತೆ ಯಾವುದೇ ಕರಾರುಗಳು ಇಲ್ಲ. ಆದರೆ ರಾಜ್ಯದಲ್ಲಿ ಅಂಗವಿಕಲರಿಗೆ ಕಿಲೊಮಿಟರ್ ಮಿತಿ ಗೊಳಿಸಿ ಸಂಚರಿಸಲು ಅವಕಾಶ ನೀಡಿದೆ ಅಂಗವಿಕಲರು ಪ್ರತಿನಿತ್ಯವೂ ಬಸ್ಸುಗಳಲ್ಲಿ ಸಂಚರಿಸುವುದಿಲ್ಲ.
ವೇಗದೂತ ಬಸ್ಸುಗಳಲ್ಲಿ ಅಂಗವಿಕಲರಿಗೆ ಅನುಮತಿ ನಿರಾಕರಿಸಲಾಗಿದೆ ಇದು ಅಂಗವಿಕಲರಿಗೆ ನೋವಿನ ಸಂಗತಿ ಎಂದು ಶಿರಹಟ್ಟಿ ತಾಲೂಕ ಆಸರೆ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಫಕೀರೇಶ ಮ್ಯಾಟಣ್ಣನವರ್ ಹೇಳಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಮಹಿಳೆಯರಿಗೆ ಆಧಾರ್ ಕಾರ್ಡ್ ತೋರಿಸಿ ಸಂಚರಿಸಲು ಮುಕ್ತ ಅವಕಾಶ ನೀಡಲಾಗಿದೆ ಅದರಂತೆಯೇ ಅಂಗವಿಕಲರಿಗೂ ಸಹ ಆಧಾರ್ ಕಾರ್ಡ್ ತೋರಿಸಿ ರಾಜ್ಯದ್ಯಂತ ಸಂಚರಿಸಲು ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರಿಗೆ ಒತ್ತಾಯಿಸಿದ್ದಾರೆ.
ಈ ಹಿಂದೆ ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅಂಗವಿಕಲರಿಗೆ ಮುಕ್ತ ಬಸ್ ಸಂಚಾರದ ಅವಕಾಶವನ್ನು ನೀಡಿದ್ದರು ಈಗ ಕಾಂಗ್ರೆಸ್ ಸರ್ಕಾರ ಮಾನವೀಯ ದೃಷ್ಟಿಯಿಂದ ಅಂಗವಿಕಲರಿಗೆ ಆಧಾರ್ ಕಾರ್ಡ್ ಮುಖಾಂತರ ಸಂಚರಿಸಲು ಮುಕ್ತ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.