ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ ವಾಮಾಚಾರ ನಡೆಸಿರುವ ಶಂಕೆ

ಮೈಸೂರು,ಸೆ.13:- ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ ವಾಮಾಚಾರ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದಲ್ಲಿ ವಾಮಾಚಾರ ನಡೆದಿದೆ ಎನ್ನಲಾಗುತ್ತಿದ್ದು, ಕತ್ತರಿಸಿದ ಕೋಳಿ ತಲೆ, ಕಾಲು, ಕುಂಕುಮ, ಕೂದಲು, ಬಳೆಚೂರು ಜೊತೆಗೆ ಫೆÇೀಟೋವನ್ನು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರ ಕೊಠಡಿಯಲ್ಲಿ ಹಾಕಲಾಗಿದೆ.
ಹಿಂದೆ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೆಚ್ ಒಡಿ ತೇಜಸ್ವಿ ನವಿಲೂರು ಕಚೇರಿಯಲ್ಲಿ ಇವೆಲ್ಲ ಕಂಡು ಬಂದಿದೆ. ಆರು ತಿಂಗಳ ಹಿಂದೆ ತೇಜಸ್ವಿ ಹೆಚ್ ಒಡಿ ಸ್ಥಾನದಿಂದ ಬದಲಾಗಿದ್ದರು. ಈ ನಡುವೆ ಕೊಠಡಿ ಹೊಸ ಹೆಚ್ ಒಡಿ ಸುಪರ್ದಿಯಲ್ಲಿತ್ತು. ಇದೀಗ ಸಹೋದ್ಯೋಗಿಗಳು ಹಿಂದಿನ ಹೆಚ್ ಒಡಿ ಫೆÇೀಟೋ ಹರಿದು, ವಾಮಾಚಾರ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ವಾಮಾಚಾರಕ್ಕೆ ಒಳಗಾದ ಅಧ್ಯಾಪಕ ತೇಜಸ್ವಿ ಅವರು ದೂರು ನೀಡಿದ್ದಾರೆ. ಕಳೆದ ಆರು ತಿಂಗಳ ಹಿಂದೆಯೇ ತೇಜಸ್ವಿ ಅವರು ಕೊಠಡಿ ಕೀ ನೀಡಿದ್ದು, ಆರು ತಿಂಗಳ ಬಳಿಕ ಕೊಠಡಿಗೆ ಬಂದಾಗ ವಿಷಯ ಬೆಳಕಿಗೆ ಬಂದಿದೆ.