ಮುಕ್ತ ವಿಶ್ವವಿದ್ಯಾಲಯದ ಕೋರ್ಸುಗಳ ಸದುಪಯೋಗಪಡಿಸಿಕೊಳ್ಳಿ

ಕಲಬುರಗಿ:ಆ.17: ಉನ್ನತ ಶಿಕ್ಷಣ ಎಲ್ಲರಿಗು, ಎಲ್ಲೆಡೆ ಎಂಬ ಧ್ಯೇಯವಾಕ್ಯದೊಂದಿಗೆ 1996ರಲ್ಲಿ ಪ್ರಾರಂಭವಾದ, ನ್ಯಾಕ್‍ನಿಂದ ಎ+ ಗ್ರೇಡ್ ಹೊಂದಿರುವ ‘ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ’ವು ರಾಜ್ಯ ಮತ್ತು ದೇಶದಲ್ಲಿ ತನ್ನದೇ ಆದ ಖ್ಯಾತಿಯನ್ನು ಹೊಂದಿದೆ. ರಾಜ್ಯದಲ್ಲಿರುವ ಪ್ರಾದೇಶಿಕ ಕಚೇರಿ, ಅಧ್ಯಯನ ಕೇಂದ್ರಗಳ ಮೂಲಕ ಮುಕ್ತ ಶೈಕ್ಷಣಿಕ ಪದ್ಧತಿಯ ಮೂಲಕ ಸ್ನಾತಕ, ಸ್ನಾತಕೋತ್ತರ ಮತ್ತು ಪಿಎಚ್.ಡಿ ಕೋರ್ಸಗಳನ್ನು ಹೊಂದಿದ್ದು, ಇಸದರ ಸದುಪಯೋಗವನ್ನು ಮಾಡಿಕೊಳ್ಳುವಂತೆ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಸಂಗಮೇಶ ಹಿರೇಮಠ ಹೇಳಿದರು.

    ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಬುಧವಾರ ಅವರು ಕೆಎಸ್‍ಓಯು ಶೈಕ್ಷಣಿಕ ಕಾರ್ಯಕ್ರಮಗಳ ಕಿರುಹೊತ್ತಿಗೆಯನ್ನು ವಿತರಿಸಿ ನಂತರ ಅವರು ಮಾಹಿತಿ ನೀಡಿದರು.
  ನಮ್ಮ ವಿಶ್ವವಿದ್ಯಾಲಯದಲ್ಲಿ ಬಿ.ಎ, ಬಿ.ಕಾಂ, ಬಿಬಿಎ, ಬಿಸಿಎ, ಬಿ.ಲಿಬ್,ಐ.ಎಸ್ಸಿ, ಬಿ.ಎಸ್ಸಿ(ಆನರ್ಸ್), ಬಿ.ಎಸ್.ಡಬ್ಲೂ, ಬಿ.ಎಸ್ಸಿ, ಎಂ.ಎ, ಎಂ.ಕಾಂ, ಎಂ,ಬಿ.ಎ, ಎಂ.ಎಸ್ಸಿ, ಎಂ.ಲಿಬ್.ಐ.ಎಸ್ಸಿ, ಎಂ.ಸಿ.ಎ, ಎಂ.ಎಸ್.ಡಬ್ಲೂ, ಸ್ನಾತಕೋತ್ತರ ಸರ್ಟಿಫಿಕೇಟ್ ಮತ್ತು ಡಿಪ್ಲೋಮಾ ಕೋರ್ಸುಗಳು, ಪಿಎಚ್.ಡಿ, ಕೌಶಲ್ಯ ಅಭಿವರದ್ಧಿ ಕೋರ್ಸುಗಳು ಲಭ್ಯವಿದ್ದು, ಆಸಕ್ತರು ಸದುಪಯೋಗವನ್ನು ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿರುವ ಪ್ರಾದೇಶಿಕ ಕಚೇರಿಯನ್ನು ಸಂಪಕಿಸಲು ತಿಳಿಸಿದರು.

ಈ ಸಂದರ್ಭದಲ್ಲಿ ಕೆಎಸ್‍ಓಯುನ ಸಿಬ್ಬಂದಿ ಪವನಕುಮಾರ ಕುಲಕರ್ಣಿ, ಕಾಲೇಜಿನ ಉಪನ್ಯಾಸಕರಾದ ರವೀಂದ್ರಕುಮಾರ ಬಟಗೇರಿ, ಶರಣಮ್ಮ ಭಾವಿಕಟ್ಟಿ, ನಯಿಮಾ ನಾಹಿದ್, ಶಂಕ್ರೆಪ್ಪ ಹೊಸದೊಡ್ಡಿ, ಎಚ್.ಬಿ.ಪಾಟೀಲ್, ಪ್ರಕಾಶ ಪಾಟೀಲ್, ರೇಣುಕಾ ಚಿಕ್ಕಮೇಟಿ, ರಂಜಿತಾ ಠಾಕೂರ, ಸಮೀನಾಬೇಗಂ, ಸಿದ್ದಮ್ಮ, ನಾಗಮ್ಮ, ಸಾಹೇಬಗೌಡ ಪಾಟೀಲ, ಪ್ರ.ದ.ಸ ನೆಸರ ಎಂ.ಬೀಳಗಿಮಠ, ದ್ವಿ.ದ.ಸ ರಾಮಚಂದ್ರ ಚವ್ಹಾಣ, ಸೇವಕ ಭಾಗಣ್ಣ ಹರನೂರ್ ಹಾಗೂ ವಿದ್ಯಾರ್ಥಿಗಳು ಇದ್ದರು.