ಮುಕ್ತ ಮತದಾನ ಮಾಡಿ : ಪಥಸಂಚಲನದ  ಮೂಲಕ ಜಾಗೃತಿ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ. 6 : – ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಿಮಿತ್ತ ಮೇ 10ರಂದು ನಡೆಯುವ ಮುಕ್ತ ಮತದಾನ ಪ್ರಕ್ರಿಯೆಯು  ಶಾಂತಿಯುತವಾಗಿ ನಡೆಯಲು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ತುಕಡಿ ಪಡೆ ಪಥಸಂಚಲನ ನಡೆಸಿ ಮತದಾರರೇ ದೈರ್ಯದಿಂದ ಮುಕ್ತವಾಗಿ ಮತದಾನ ಮಾಡಿ ನಾವಿದ್ದೇವೆ ಎಂದು ಮತದಾರರಲ್ಲಿ ಧೈರ್ಯ ತುಂಬುವ ಜಾಗೃತಿ ಜಾಥಾದ ಪಥಸಂಚಲನ ನಡೆಸಿದರು.
ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಾದ ಶಿವಪುರ ಹಾಗೂ ಬಂಡೆ ಬಸಾಪುರ ತಾಂಡಾ ಗ್ರಾಮಗಳಲ್ಲಿ ಸುಮಾರು 90ಕ್ಕೂ ಹೆಚ್ಚು ಇಂಡೋ ಟಿಬೆಟಿಯೆನ್ ಬಾರ್ಡರ್ ಪೊಲೀಸ್ ಪಡೆಯ ತುಕಡಿಯೊಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಕೂಡ್ಲಿಗಿ ಡಿವೈಎಸ್ ಪಿ ಮಲ್ಲೇಶಪ್ಪ ಮಲ್ಲಾಪುರ, ಕೂಡ್ಲಿಗಿ ಸಿಪಿಐ ವಸಂತ ವಿ ಅಸೋದೆ ಹಾಗೂ ಕೂಡ್ಲಿಗಿ ಪಿಎಸ್ಐ ಧನುಂಜಯ ಇವರುಗಳ ನೇತೃತ್ವದಲ್ಲಿ ಪಥಸಂಚಲನ ನಡೆಸಿ ಯಾವುದೇ ಮತದಾರರು ಪ್ರಜಾಪ್ರಭುತ್ವದ ಸಂವಿಧಾನದ ಮತದಾನದ ಹಕ್ಕನ್ನು ಯಾವುದೇ ಮುಜುಗರ, ಅಂಜಿಕೆ, ಹಾಗೂ ಹೆದರಿಕೆಯಿಂದ ಮತದಾನ ಮಾಡದೇ ಇರಬೇಡಿ ಮುಕ್ತ ಮತದಾನವನ್ನು ನೀವು ತಪ್ಪದೆ ಚಲಾಯಿಸಿ ನಿಮ್ಮ ಜೊತೆ ನಾವಿರುತ್ತೇವೆ ಶಾಂತಿಯುತ ಮತದಾನ ನಮ್ಮೆಲ್ಲರದಾಗಿರಲಿ ಎಂದು ಮತದಾರರಲ್ಲಿ  ಧೈರ್ಯ ತುಂಬುವ ಪಥಸಂಚಲನದ ಜಾಗೃತಿ ಜಾಥಾ ನಡೆಸಲಾಯಿತು.