ಮುಕ್ತ ನ್ಯಾಯೋಚಿತ ಚುನಾವಣೆ ಜರುಗಿಸಲು ಅಗತ್ಯವಾದ ಎಲ್ಲ ಕ್ರಮ


ಧಾರವಾಡ,ಮಾ.24: ಒಟ್ಟು 1719 ರೌಡಿ ಜನರ ಪೈಕಿ 1355 ಜನರ ಮೇಲೆ ಮುಂಜಾಗೃತ ಕ್ರಮ ಜರುಗಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಒಟ್ಟು 88 ವಲ್ನರೇಬಲ್ ಪ್ರದೇಶಗಳನ್ನು ಗುರುತಿಸಲಾಗಿದ್ದು, ಚುನಾವಣಾ ಅಪರಾಧಗಳಲ್ಲಿನ ಆರೋಪಿತರ ಮೇಲೆ ಸಿ.ಆರ್.ಪಿ.ಸಿ. ಅಡಿಯಲ್ಲಿ ಮುಂಜಾಗೃತ ಕ್ರಮ ಜರುಗಿಸಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಅವಳಿನಗರ ವಾಪ್ತಿಯಲ್ಲಿನ 88 ವಲ್ನರೇಬಲ್ ಪ್ರದೇಶಗಳಲ್ಲಿ ಭಯಪಡಿಸುವ ಅಥವಾ ಅನಗತ್ಯ ಪ್ರಭಾವ ಬಿರುವ ಒಟ್ಟು 12 ವ್ಯಕ್ತಿಗಳನ್ನು ಗುರುತಿಸಿದ್ದು ಅವರ ಮೇಲೆ ಸಿ.ಆರ್.ಪಿ.ಸಿ ಅಡಿಯಲ್ಲಿ ಮುಂಜಾಗೃತ ಕ್ರಮ ಜರುಗಿಸಲಾಗಿದೆ. ದೈಹಿಕ ಅಪರಾಧ ಪ್ರಕರಣಗಳಿಗೆ ಸಂಭಂದಿಸಿದ ಜಾಮೀನು ರಹೀತ ವಾರೆಂಟುಗಳನ್ನು ಜಾರಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಒಟ್ಟು 955 ಪರವಾಣಿಗೆ ಹೊಂದಿದ ಆಯುಧಗಳಿದ್ದು, ಅವುಗಳಲ್ಲಿನ 726 ಆಯುಧಗಳನ್ನು ಜಮಾ ಮಾಡಿಕೊಳ್ಳಲಾಗಿದೆ. ಉಳಿದವುಗಳನ್ನು ಮಾರ್ಚ್25, 2024 ರ ಒಳಗಾಗಿ ಜಮಾ ಮಾಡಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆ ಬಂದೋಬಸ್ತಗಾಗಿ ಸಿ.ಐ.ಎಸ್.ಎಫ್. ಒಂದು ಕಂಪನಿ ಹುಬ್ಬಳ್ಳಿ-ಧಾರವಾಡ ನಗರಕ್ಕೆ ಬಂದಿದ್ದು, ಪ್ರತಿ ದಿನ ಒಂದೊಂದು ಠಾಣೆಗಳಲ್ಲಿನ ವಲ್ನರೇಬಲ್ ಪ್ರದೇಶಗಳಿಗೆ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ಭೇಟಿ ನೀಡಿ ರೂಟ್ ಮಾರ್ಚ ಮಾಡಿ ಜನರಲ್ಲಿ ಆತ್ಮ ವಿಶ್ವಾಸ ಮತ್ತು ದೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ
ಚುನಾವಣೆಗೆ ಸಂಭಂದಿಸಿದಂತೆ ಮತ್ತು ಮತದಾನದ ದಿನ ಮತಗಟ್ಟೆಗಳ ಭದ್ರತೆ ಕುರಿತು ಸಿಬ್ಬಂದಿಗಳ ನಿಯೋಜನೆ ಕುರಿತು ತಯಾರಿ ಮಾಡಿಕೊಳ್ಳಲಾಗಿದೆ. ಮುಕ್ತ ಮತ್ತು ನ್ಯಾಯೋಚಿತ ಚುನಾವಣೆ ಜರುಗಿಸುವ ಕುರಿತು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಹಾನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.