ಮುಕ್ತಿನಾಥ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಶಂಕರಲಿಂಗ್ ಮಹಾಸ್ವಾಮಿಗಳು

ಹುಮನಾಬಾದ್:ಡಿ.25: ಸಮೀಪದ ಧುಮ್ಮನಸೂರು ಗ್ರಾಮದ ಹೆಳವ ಸಮಾಜದ ಬಸವ ಮುಕ್ತಿನಾಥ ಮಠದಲ್ಲಿ ಸೋಮವಾರ ಮುಕ್ತಿನಾಥ ಶರಣರ ಜಯಂತಿ ಸರಳವಾಗಿ ಆಚರಿಸಲಾಯಿತು.

ಧುಮ್ಮನಸೂರ ಮುಕ್ತಿನಾಥ ಮಠದ ಶಂಕರಲಿಂಗ್ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಸಮಾಜದ ಜನ ಶರಣರ, ಸಂತರ, ಮಹಾನ ಪುರುಷರ ವಿಚಾರಧಾರೆಗಳು ಮತ್ತು ಅವರು ನಮಗಾಗಿ ಕೊಟ್ಟಂತಹ ತತ್ವ ಆದರ್ಶಗಳನ್ನು ಮೈಗೊಂಡಿಸಿಕೊಂಡು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದರು.

ಆಧುನಿಕ ಯುಗದಲ್ಲಿ ಸಮಾಜದ ಯುವಕರು ಶರಣರು, ಸಂತರು ಹೇಳುವ ಸತ್ಸಂಗದಿಂದ ಮನ ಶುದ್ದಿಗೊಳಿಸುವುದರ ಜತೆಗೆ ಮೂಢನಂಬಿಕೆ ಮೌಢ್ಯಚಾರಾಣೆಗಳಿಂದ ಹೊರಬಂದು ಸಮಾಜಕ್ಕೆ, ದೇಶಕ್ಕೆ ಒಳ್ಳೆಯದನ್ನು ಮಾಡುವಂತಹ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಶರಣ ಸಾಹಿತ್ಯ ಪರಿಷತ ತಾಲ್ಲೂಕು ಅಧ್ಯಕ್ಷ ನಿವೃತ್ತ ಪ್ರಾಂಶುಪಾಲ ಮಹಾದೇವಪ್ಪಾ ಉಪ್ಪಿನ ಮಾತನಾಡಿ 12ನೇ ಶತಮಾನದಲ್ಲಿ ಶರಣರು, ಮಹಿಳೆಯರಿಗೆ ಸಮಾನ ಹಕ್ಕನ್ನು ನೀಡಿ, ಜಾತಿ, ವರ್ಗ, ವರ್ಣ ರಹಿತ ಸಮಾಜ ನಿರ್ಮಾಣಕ್ಕಾಗಿ. ಶ್ರಮಿಸಿದ್ದಾರೆ, ಸಮಾಜ ಯುವ ಜನಾಂಗ ಶರಣ, ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಉನ್ನತ ಶಿಕ್ಷಣ ಕಲಿತು ಸಮಾಜಕ್ಕೆ ಮಾದರಿ ಯಾಗಬೇಕು, ಎಂದು ಸಲಹೆ ನೀಡಿದರು.

ಸಾಹಿತಿ ಸುನೀತಾ ಚನ್ನಬಸವ ಬಿಕ್ಲೆ, ವಿಶೇಷ ಉಪನ್ಯಾಸ ನೀಡಿದರು. ನರಸಪ್ಪಾ ಜಮಾದಾರ್ ಅಧ್ಯಕ್ಷತೆ ವಹಿಸಿದರು. ವಲಯ ಅರಣ್ಯ ಅಧಿಕಾರಿ ಬಸವರಾಜ ಡಾಂಗೆ, ಯುವ ಬ್ರಿಗೇಡ್ ವಿಭಾಗ ಸಂಚಾಲಕ ಲಕ್ಷ್ಮಿಕಾಂತ ಹಿಂದೋಡ್ಡಿ, ಕಲಬುರಗಿ ಅಖಿಲ ಕರ್ನಾಟಕ ಹೆಳವ ಸಮಾಜದ ಪ್ರಧಾನ ಕಾರ್ಯದರ್ಶಿ ಅಶೋಕ ದೇಗಲ್ಮಡಿ, ಅಖೀಲ ಕರ್ನಾಟಕ ಹೆಳವಾ ಸಮಾಜದ ಔರಾದ್ ಅಧ್ಯಕ್ಷ ನಾಗನಾಥ ಹೇಳವಾರ, ಯಾದಗೀರ ಅಧ್ಯಕ್ಷ ಡಾ.ಹಣಮಂತ ಹೆಳವರ ಹಳಿಸಾಗರ, ಶ್ರೀಕಾಂತ ಪಾಟೀಲ, ಜಯಸಾಗರ ನಿಂಬೂರ, ಗದಗ ವೀರೇಶ್ವರ ಪುಣ್ಯಾಶ್ರಮದ ಅಶೋಕ ದೇಗಲಮಡಿ, ವೀರಭದ್ರಪ್ಪಾ ಹಡಪದ, ಕಲ್ಲಪ್ಪಾ ಸಜ್ಜನಶೆಟ್ಟಿ ಇದ್ದರು.