ಮುಕ್ತಿಧಾಮದಲ್ಲಿ ಕಲ್ಯಾಣ ಮಂಟಪ ಲೋಕಾರ್ಪಣೆ

ಬೀದರ್: ಮಾ.7:ಶ್ರೀ ಕ್ಷೇತ್ರ ಮುಕ್ತಿಧಾಮ ಮಠ ಮಾಧವ ನಗರ, ಬೀದರ್ ನಲ್ಲಿ ಶ್ರೀ ಶಿವಾನಂದ ಶಿವಾಚಾರ್ಯ ಕಲ್ಯಾಣ ಮಂಟಪ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾದ ಶ್ರೀ ಸೂರ್ಯಕಾಂತ್ ನಾಗಮಾರಪಳ್ಳಿ ಅವರು ಭಾಗವಹಿಸಿದರು.
ನೆರೆದ ಬೀದರ್ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು ಕರೆದರೆ ಬರುವವನು ಶ್ರೀ ಮಹಾದೇವನು, ಮಹಾದೇವನ ಲಿಂಗದಿಂದ ಉದ್ಭವಿಸಿದ ಮಹಾಪುರುಷರು ಶ್ರೀ ಜಗದ್ಗುರು ರೇಣುಕಾಶರ್ಯರು, ಮಹಾ ಮುನಿಗಳಾದ ಶ್ರೀ ಅಗಸ್ಯ ಮಹರ್ಷಿಗಳಿಗೆ ಲಿಂಗ ಉಪದೇಶ ಮಾಡಿದವರು ಶ್ರೀ ಜಗದುರು ರೇಣುಕಾಚಾರ್ಯರು, ಇದೆ ರೀತಿಯಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿಲಿರ್ಂಗದ ಪರಂಪರೆಯಿಂದ ಬಂದ ಪಂಚ ಮಠಗಳು ನಮ್ಮದು ಮತ್ತು ಶಿವಾಚಾರ್ಯ ಪರಂಪರೆ. ಇಂತಹ ಪರಂಪರೆಯ ಸತ್ಪುರುಷರು ಶ್ರೀ ಶಿವಾನಂದ ಶಿವಾಚಾರ್ಯರು. ಸತ್ಪುರುಷರ ಸ್ಪರ್ಶ ಮತ್ತು ಸಾನಿಧ್ಯ ಎಲ್ಲರ ಬದುಕು ಬಂಗಾರವಾಗುತ್ತದೆ ಮತ್ತು ಎಲ್ಲರಿಗು ಒಳಿತು ಮಾಡುತ್ತದೆ ಎಂದು ಹೇಳಿದರು.
ಕೋವಿಡ್ ಲಾಕ್‍ಡೌನ್‍ನಿಂದ ಕೆಲಸ ಕಳೆದುಕೊಂಡ ಸಾವಿರಾರು ಪರಿವಾರಗಳಿಗೆ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್‍ನಿಂದ ಫುಟ್ ಕಿಟ್ ವಿತರಿಸಲಾಗಿದೆ. ವಿವಿಧ ಇಲಾಖೆಗಳ ಸಿಬ್ಬಂದಿಗೆ ಮಾಸ್ಕ್ ವಿತರಣೆ ಮಾಡಲಾಗಿದೆ. ಬೀದರ್ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಾಗ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿದೆ.
ಸರಕಾರದ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನವನ್ನು ಜನ ಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವ ಮಹತ್ವದ ಕಾರ್ಯವನ್ನು ಫೌಂಡೇಶನ್ ಮಾಡುತ್ತಿದೆ. ಸಾಮಾಜಿಕ ಭದ್ರತಾ ಯೋಜನೆಗಳನ್ನು, ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ಸವಲತ್ತುಗಳನ್ನು ಮನೆ ಮನೆಗೆ ತೆರಳಿ, ಅರ್ಹರ ದಾಖಲೆಗಳನ್ನು ಅಪ್‍ಲೋಡ್ ಮಾಡಿ, ಮಂಜೂರಾತಿ ಪತ್ರಗಳನ್ನು ತಲುಪಿಸಲಾಗುತ್ತಿದೆ. ಸಾವಿರಾರು ಜನರನ್ನು ಆಯುಷ್ಮಾನ್ ಭಾರತ ಯೋಜನೆ ವ್ಯಾಪ್ತಿಗೆ ಸೇರಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಷ. ಬ್ರ. ಶ್ರೀ ಶಿವಾನಂದ ಶಿವಾಚಾರ್ಯ, ಶ್ರೀ ಷಣ್ಮುಖಯ್ಯ ಸ್ವಾಮಿ, ಶ್ರೀ ಶಿವಶರಣಪ್ಪ ವಾಲಿ, ಶ್ರೀ ಬಾಬುರಾವ ಪಸರ್ಗೆ, ಶ್ರೀ ಚನ್ನಬಸವಯ್ಯ ಸ್ವಾಮಿ, ಶ್ರೀ ವಿಠ್ಠಲ ರೆಡ್ಡಿ, ಶ್ರೀ ಮಂಜುನಾಥ್ ಬಿರಾದಾರ್, ಶ್ರೀ ಶಾಂತಲಿಂಗ ಸವಲಗಿ, ಶ್ರೀ ಉದಯ್ ಕುಮಾರ್ ಜವಳೇ, ಶ್ರೀ ಶಿವುಕುಮಾರ್ ಬಿರಾದಾರ್ ಮತ್ತು ಇತರರು ಉಪಸ್ಥಿತರಿದ್ದರು.