ಮುಕ್ತಾ ಶ್ರೀನಿವಾಸ ಪ್ರಭುಗೆ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ

ಸಂಜೆವಾಣಿ ವಾರ್ತೆ

ದಾವಣಗೆರೆ.ಜು.೯; ಅಂತರಾಷ್ಟಿçÃಯ ಯೋಗ ದಿನಾಚರಣೆ ಪ್ರಯುಕ್ತ ಇತ್ತೀಚಿಗೆ ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟ ಹಾಗೂ ಲಯನ್ಸ್ ಕ್ಲಬ್ ಸಂಯುಕ್ತಾಶ್ರದಯಲ್ಲಿ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ಹಮ್ಮಿಕೊಂಡಿದ್ದು ಯೋಗ ಸಾಧಕಿ ಶ್ರೀಮತಿ ಮುಕ್ತಾ ಶ್ರೀನಿವಾಸ ಪ್ರಭುರವರು ಪ್ರಥಮ ಬಹುಮಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ.ಯೋಗ ಗುರುಗಳಾದ ವೈದ್ಯಶ್ರೀ ಚನ್ನಬಸವಣ್ಣನವರು, ಡಾ. ಲಕ್ಷಿö್ಮà ಶ್ರೀನಿವಾಸ ಗುರುಜೀ, ಅಂತರಾಷ್ಟಿçÃಯ ಯೋಗ ತೀರ್ಪುಗಾರರಾದ ಅನಿಲ್ ರಾಯ್ಕರ್, ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್, ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ.ಶಂಕರಗೌಡ, ಯೋಗ ಒಕ್ಕೂಟದ ಗೌರವ ಅಧ್ಯಕ್ಷರಾದ ಬಿ.ಸಿ.ಉಮಾಪತಿ, ಪ್ರಧಾನ ಕಾರ್ಯದರ್ಶಿ ಡಾ. ಯು.ಸಿದ್ದೇಶ್, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎಸ್.ಆರ್.ನಾಗಭೂಷಾಣ್‌ರಾವ್, ಶ್ರೀ ಸಿದ್ದಿ ವಿನಾಯಕ ಯೋಗ ಕೇಂದ್ರದ ಪದಾಧಿಕಾರಿಗಳು, ಯೋಗ ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.ದಾವಣಗೆರೆಯ ಗೌಡ ಸಾರಸ್ವತ ಸಮಾಜ ಸೇರಿದಂತೆ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ, ಸರ್ವ ಸದಸ್ಯರು ಪದಾಧಿಕಾರಿಗಳು ಶ್ರೀಮತಿ ಮುಕ್ತಾ ಶ್ರೀನಿವಾಸ ಪ್ರಭುರವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.