ಮುಕ್ತಾಯ ಸಮಾರಂಭ


ಧಾರವಾಡ,ಮೇ.24: ಧಾರವಾಡ ಕ್ರಿಕೆಟ್ ಅಕಾಡೆಮಿ ವತಿಯಿಂದ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭವನ್ನು ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಹುರಕಡ್ಲಿ ಅಜ್ಜ ಕಾನೂನು ಮಹಾವಿದ್ಯಾಲಯದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಗೌರವಾಧ್ಯಕ್ಷ ಎಸ್.ಎಮ್.ಅಗಡಿ, ಅಧ್ಯಕ್ಷ ಶಿವಲಿಂಗ ನೀಲಗುಂದ ಮತ್ತು ಹೈಕೋರ್ಟಿನ ವಕೀಲರಾದ ಗುರುರಾಜಆರ್.ತುರಮುರಿ ಭಾಗವಹಿಸಿದ್ದರು. ಪಾಲಕರಾದ ರೇವಯ್ಯ ಹಿರೇಮಠ, ನೀಲಮ್ಮ .ಎಚ್. ಮಾತನಾಡಿ ಕೋಚ್ ಜಗದೀಶ Àಸಾಲಟ್ಟಿ ಇವರ ಕಾರ್ಯ ವೈಖರಿ ಕೊಂಡಾಡಿದರು, ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳಿಗೆ ಶಾರೀರಿಕ ಕಸರತ್ತಿನ ಅವಶ್ಯಕತೆಯಿದೆ ಇಂತಹ ಅಕಾಡೆಮಿಗಳು ಹೆಚ್ಚು ಕಾರ್ಯ ರೂಪಕ್ಕೆ ಬರಬೇಕೆಂದರು.
ಧಾರವಾಡ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾದ ಶಿವಲಿಂಗ ನೀಲಗುಂದ ಮಾತನಾಡಿದರು. ಆರೋಗ್ಯ ಕಾಪಾಡಿಕೊಳ್ಳುವದು ಮುಖ್ಯವೆಂದರು. ಎಸ್.ಎಮ್ ಅಗಡಿ ಶುಭ ಹಾರೈಸಿದರು.
ಅಕಾಡೆಮಿಯ ಕೋಚ್ ಜಗದೀಶ ಸಸಾಲಟ್ಟಿ ಮಕ್ಕಳ ಸಾಧನೆ ಬಗ್ಗೆ ಹೇಳಿ ಅಕಾಡೆಮಿಯ ತರಬೇತಿಗೆ ಆಯ್ಕೆಯಾದ ಕುಮಾರಿ ರೂಹಿ ಮತ್ತು ಬಿಡಿಕರ ರವರನ್ನು ಕೊಂಡಾಡಿದರು. ಅಕಾಡೆಮಿ ಮಕ್ಕಳು ಪ್ರಾರಂಭದಲ್ಲಿ ಸ್ವಾಗತ ಮತ್ತು ಪ್ರಾರ್ಥನೆಗೈದರು, ನಿರೂಪಣೆಯನ್ನು ತ್ರಿಶಾ ಹಳ್ಳೂರ ಮಾಡಿದರು ಮತ್ತು ವಂದನಾರ್ಪಣೆಯನ್ನು ಅಪೂರ್ವಾ ಹೊಸವಕ್ಕಲ ನಡೆಸಿ ಕೊಟ್ಟರು.