ಮುಕುಟ ಸಪ್ತಮಿ ಕಾರ್ಯಕ್ರಮ

ಚನ್ನಮ್ಮ ಕಿತ್ತೂರ, ಆ 5: ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಮಳೆ ಬೆಳೆ ಸಮೃದ್ಧಿ ಕಾಣಬಹುದು ಎಂದು ಮಾಜಿ ಶಾಸಕ ಸಂಜಯ ಪಾಟೀಲ ಹೇಳಿದರು.
ತಾಲೂಕಿನ ಸಮೀಪದ ಶ್ರೀ ಕ್ಷೇತ್ರ ಕಸಮಳಗಿಯ ಚಿಂತಾಮಣಿ 1008 ಶ್ರೀ ಭಗವಾನ ವರಸಿದ್ದಿ ಪಾಶ್ರ್ವನಾಥ ದಿಗಂಬರ ಮಂದಿರದಲ್ಲಿ ಮುಕುಟ ಸಪ್ತಮಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭರತೇಶ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಜು ದೊಡ್ಡಣ್ಣವರ ಮಾತನಾಡಿ ಕೋಲ್ಹಾಪುರದಲ್ಲಿ ಪಟ್ಟಾಭಿಷೇಕದ ಕಾರ್ಯಕ್ರಮ ಮುಕ್ತಾಯಗೊಳಿಸಿ ಹೊರಡುವ ಮಾರ್ಗದಲ್ಲಿ ಕಸಮಳಗಿ ಜಿನಮಂದಿರಕ್ಕೆ ಭೇಟಿ ನೀಡಿದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಜೀ ಅವರ ಮನದಲ್ಲಿ ಈ ಮಂದಿರದಲ್ಲಿ ಯಾವುದಾದರೊಂದು ವಿಧಾನ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂಬ ಬಯಕೆಯಿತ್ತು. ಅದನ್ನು ಬೆಳಗಾವಿ ಜೈನ ಧರ್ಮದ ಮುಖಂಡರುಗಳ ಗಮನ ಸೆಳೆದರು. ಅವರ ಮತ್ತು ಪದ್ಮವಿಭೂಷಣ ಡಾ. ವೀರೇಂದ್ರ ಹೆಗಡೆ ಮಾರ್ಗದರ್ಶದಲ್ಲಿ ಪಾಶ್ರ್ವನಾಥ ತೀರ್ಥಂಕರ ಮೋಕ್ಷ ಕಲ್ಯಾಣದ ನಿಮಿತ್ಯ ಅವರ ಮನದಾಸೆಯಂತೆ ಮುಕುಟ ಸಪ್ತಮಿ ವಿಧಾನ ಹಮ್ಮಿಕೊಂಡೆವು. ಇದು ಯಶಸ್ಸು ಕಂಡಿತು ಎಂದರು.
ಆರ್ಯಿಕಾರತ್ನ 105 ಶ್ರೀ ಜಿನವಾಣಿ ಮಾತಾಜಿ ಮಾತನಾಡಿ ಈ ಮುಕುಟ ಸಪ್ತಮಿ ವಿಧಾನ ಹಮ್ಮಿಕೊಂಡಿದ್ದು ಎಲ್ಲರಿಗೂ ಸಂತಸ ತಂದಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿರುವ ನೀವೆಲ್ಲಾ ಪುಣ್ಯಜೀವಿಗಳು. ಜೈನ ಶ್ರಾವಕ-ಶ್ರಾವಕಿಯರ ಇಂತ ಕಾರ್ಯಕ್ರಮದಲ್ಲಿ ದಾನ ಮಾಡಿದರೆ ಮುಂದಿನ ಭವದಲ್ಲಿ ಚಕ್ರವರ್ತಿಯಾಗುತ್ತಾರೆ. ಧರ್ಮ ಉಳಿದರೆ ಎಲ್ಲ ಜೀವಿಗಳು ಬದುಕಲು ಸಾಧ್ಯ. ದಾನ ಮಾಡಿ ಮಂದಿರಗಳ ಜೀಣೋದ್ದಾರ ಮಾಡಿ ಅಂದಾಗ ಮಾತ್ರ ನಮ್ಮ ಗಳಿಕೆ ಮತ್ತು ಹುಟ್ಟಿದ್ದು ಸಾರ್ಥಕವಾಗುತ್ತದೆ. ನಮ್ಮ ಮಕ್ಕಳಿಗೆ ದಾನ ಮಾಡುವ ಸಂಪ್ರದಾಯ ಬೆಳಸಬೇಕೆಂದರು.
ಪ್ರಾಸ್ತಾವಿಕವಾಗಿ ಉದ್ಯಮಿ ವಿನೋದ ದೊಡ್ಡಣ್ಣವರ, ಬೆಳಗಾವಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಮೋದ ಕೊಚೇರಿ, ಜೈನ ಧರ್ಮದ ಮುಖಂಡ ದೇವುಗೌಡ ಪಾಟೀಲ ಮಾತನಾಡಿದರು. ವಾದ್ಯಮೇಳದೊಂದಿಗೆ ಕುಂಬಮೇಳ ಜರುಗಿತು.
ದೀಪಕ ಉಪಾಧ್ಯಾಯ, ಶಾಂತಿನಾಥ ಉಪಾಧ್ಯಾಯ, ಶ್ರವಣಬೆಗೋಳದ ಆಚಾರ್ಯರರು ಹಾಗೂ ಅಭಯ ಅವಲಕ್ಕಿ ಸೇರಿದಂತೆ ಹಲವರು ಜೊತೆಗೂಡಿ ಪೂಜೆ ನೇರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಸುನೀಲ ಮಡ್ಡಿಮನಿ, ಮಹಾವೀರ ಗೌಡ್ರ, ಶಾಂತಗೌಡ ಸಾವಂತನವರ, ಜಿನ್ನಪ್ಪ ಗೌಡ್ರ, ಸಂತೋಷ ಗೌಡ್ರ, ತವನಪ್ಪ ಗೌಡ್ರ, ಪಾರೀಸ್ ಗೌಡ್ರ, ಉದಯ ಸಾವಂತ, ಡಿ.ಡಿ. ಪಾಟೀಲ, ಜೆ.ಡಿ. ಪಾಟೀಲ, ಸೋಮಣ್ಣಾ ಹೀರೆಕರ, ರವೀಂದ್ರ ಬೆಕಣಿ, ರಾಜೇಂದ್ರ ಕಟಗಿ, ಬಾಬು ಮಡಾಕರ, ಈರಪ್ಪಾ ಹುಬ್ಬಳ್ಳಿ, ಸಾವಂತ ತೇಗೂರ, ಸೋಮಣ್ಣಾ ತೇಗೂರ, ಜಗದೀಶ ಪಾಟೀಲ, ಪ್ರಮೋದ ಪಾಟೀಲ, ವೈಭವ ಬಡಾಳೆ, ಅನಿಲ್ ಕಬ್ಬೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜೈನ ಶ್ರಾವಕ-ಶ್ರಾವಕಿಯರು ಭಾಗಿಯಾಗಿದ್ದರು.