ಮುಕುಟಸಪ್ತಮಿ ಕಾರ್ಯಕ್ರಮ

(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರ,ಆ22: ಕರ್ಮಯೋಗಿ ದಿ.ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜೀ ಆಜ್ಞೆ ಮತ್ತು ಅಭಿನವ ಭಟ್ಟಾರಕ ಹಾಗೂ ಎಲ್ಲಾ ಭಟ್ಟಾರಕರ ಮತ್ತು ಗಣನೀಯ ಆರ್ಯಿಕಾರತ್ನ ಪ.ಪೂ. ಜಿನವಾಣಿ ಮಾತಾಜೀ ಕಠೀಣ ಉಪವಾಸದ ಪರಿಶ್ರಮದಿಂದ, ಪದ್ಮಭೂಷಣ ಡಾ. ವೀರೇಂದ್ರ ಹೆಗಡೆಯವರ ಮಾರ್ಗದರ್ಶದಲ್ಲಿ ಸಮೀಪದ ಖಾನಾಪೂರ ತಾಲೂಕಿನ ಕಸಮಳಗಿಯಲ್ಲಿರುವ ಶ್ರೀ 1008 ವರಸಿದ್ಧಿ ಪಾಶ್ರ್ವನಾಥ ದಿಗಂಬರ ಜೈನ ಮಂದಿರದಲ್ಲಿ ಪಾಶ್ರ್ವನಾಥರ ಮೋಕ್ಷ ಕಲ್ಯಾಣದ ನಿಮಿತ್ಯ ಭವ್ಯವಾದ ಮುಕುಟಸಪ್ತಮಿ ಮಹೋತ್ಸವವನ್ನು ಬುಧವಾರ 23 ರಂದು ಆಯೋಜಿಸಲಾಗಿದೆ. ಕಾರಣ ಸುತ್ತಮುತ್ತಲಿನ ಗ್ರಾಮದ ಶ್ರಾವಕ-ಶ್ರಾವಕೀಯರು ತಮ್ಮ ಗ್ರಾಮಗಳಿಂದ ಪಾದಯಾತ್ರೆಯ ಮೂಲಕ ವಾದ್ಯಮೇಳದೊಂದಿಗೆ ಪ್ರವೇಶಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕೋರಲಾಗಿದೆ.
ಮುಂಜಾನೆ 9.00 ಗಂಟೆಗೆ ಮೆರವಣಿಗೆ, 10 ಗಂಟೆಗೆ ಸವಾಲು, 11 ರಿಂದ ಪಂಚಾಮೃತ ಅಭಿಷೇಕ ನಿರ್ವಾಣ ಲುಡ್ಡು ಸಮರ್ಪಣೆ, ಬೆಳಗಿನ ಉಪಹಾರ ಮಧ್ಯಾಹ್ನ ಮಹಾಪ್ರಸಾದ ಇರುತ್ತದೆ ಎಂದು ಜೈನ ಅಭಿವೃದ್ಧಿ ಕಮೀಟಿ ಟ್ರಸ್ಟ ಕಸಮಳಗಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.