ಕಲಬುರಗಿ:ಜೂ.15: ಮುಂಬೈನ ಜಿಯೋ ವಲ್ರ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ಜೂ.15ರಿಂದ 17ರವರೆಗೆ ರಾಷ್ಟ್ರೀಯ ಶಾಸನಸಭೆ ಸದಸ್ಯರ ಸಮ್ಮೇಳನ ಆಯೋಜಿಸಲಾಗಿದೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಈ ಸಮ್ಮೇಳನಕ್ಕೆ ಆಹ್ವಾನಿಸಲಾಗಿದೆ. ಮೊದಲ ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಶಾಸನಸಭೆಯ ಅತಿ ದೊಡ್ಡ ಸಮ್ಮೇಳನ ನಡೆಯುತ್ತಿದೆ. ಇದರಲ್ಲಿ ಪಾಲ್ಗೊಳ್ಳಲು ವಿಧಾನ ಪರಿಷತ್ ಹಿರಿಯ ಸದಸ್ಯರಾದ ಡಾ.ಬಿ.ಜಿ.ಪಾಟೀಲ್ ಅವರು ಬುಧವಾರ ಇಲ್ಲಿಂದ ಮುಂಬೈಗೆ ತೆರಳಿದರು. ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾದ ರಚನಾತ್ಮಕ ಕಾರ್ಯಕ್ರಮ, ರಾಷ್ಟ್ರ ನಿರ್ಮಾಣದ ಧ್ಯೇಯದಿಂದ ಈ ಸಮ್ಮೇಳನ ನಡೆಯುತ್ತಿದೆ. ಎನ್ ಎಲ್ ಸಿ ಭಾರತ ಸಂಘಟನೆ ಆಹ್ವಾನದ ಮೇರೆಗೆ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದು, ಅಲ್ಲಿ ಪರಿಣತರಿಂದ ಸಿಗುವ ನಾನಾ ಮಾಹಿತಿ ಬಗ್ಗೆ ಸಾಕಷ್ಟು ಉತ್ಸುಕತೆಯೂ ಹೊಂದಿದ್ದಾಗಿ ಡಾ.ಬಿ.ಜಿ.ಪಾಟೀಲ್ ತಿಳಿಸಿದ್ದಾರೆ.
ದೇಶದ ವಿವಿಧ ರಾಜ್ಯಗಳ ಶಾಸನ ಸಭೆ ಸದಸ್ಯರು ಸಮ್ಮೇಳನಕ್ಕೆ ಆಗಮಿಸುತ್ತಿದ್ದಾರೆ. ಎಕ್ಸಪ??9ಗಳಿಂದ ಪ್ರಮುಖ ಭಾಷಣ, ಪೆನಲ್ ಡಿಸ್ಕಶನ್ ಸೇರಿ ವಿವಿಧ ಚಿಂತನ-ಮಂಥನ ಇಲ್ಲಿ ನಡೆಯಲಿದೆ. ತಮ್ಮ ಕ್ಷೇತ್ರದಲ್ಲಿ ಮಾಡಿದ ಸೇವಾಕಾರ್ಯ, ಹೊಸ ಯೋಜನೆ ಜಾರಿ ಇತರ ಕುರಿತು ಶಾಸಕರಿಗೂ ಅನುಭವ ಹಂಚಿಕೊಳ್ಳಲು ಈ ವೇದಿಕೆಯಲ್ಲಿ ಅವಕಾಶ ಕಲ್ಪಿಸಿರುವುದು ವಿಶೇಷ. ರಾಜ್ಯದ ನೂರಕ್ಕೂ ಅಧಿಕ ಶಾಸಕರು ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಮುಂಬೈನತ್ತ ಮುಖ ಮಾಡಿದ್ದಾರೆ.