ಮುಂಬೈ ವಿರುದ್ದ ಡೆಲ್ಲಿಗೆ ಆರು ವಿಕೆಟ್ ಜಯ

ಮುಂಬೈ, ಏ, 20- ಐಪಿಎಲ್ ಟೂರ್ನಿಯ 13ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಆರು ವಿಕೆಟ್ ಗಳಿಂದ ಗೆಲುವು ದಾಖಲಿಸಿತು.


ವಾಖೆಂಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 138 ರನ್ ಗಳ ಸವಾಲಿನ ಬೆನ್ನಹತ್ತಿದ ರಿಷಬ್ ಪಂತ್ ಪಡೆ, ಆರಂಭದಲ್ಲೇ ಪೃಥ್ವಿ ಶಾ ವಿಕೆಟ್ ಕಳೆದುಕೊಂಡಿತು..
ನಂತರ ಧವನ್ ಹಾಗೂ ಸ್ಟೀವನ್ ಸ್ಮಿತ್ ರನ್ ಕಲೆಹಾಕಿದರು. ಚೆನ್ನಾಗಿ ಆಡುತ್ತಿದ್ದ ಸ್ಮಿತ್ 33 ರನ್ ಗಳಿಸಿ‌‌ ಪೊಲಾರ್ಡ್ ಗೆ ವಿಕೆಟ್ ಒಪ್ಪಿಸಿದರು. ಶಿಖರ್ ಧವನ್ ಉಪಯುಕ್ತ 45 ರನ್ ಗಳಿಸಿ ಕೃನಾಲ್ ಬೌಲಿಂಗ್ ನಲ್ಲಿ ಔಟಾದರು.
ನಾಯಕ ರಿಷಬ್ ಪಂತ್ ಕೇವಲ ಏಳು ರನ್ ಗಳಿಸಿ ನಿರಾಸೆ ಮೂಡಿಸಿದರು. ಬಳಿಕ ಲಲಿತ್ ಹಾಗೂ ಶಿಮ್ರೊನ್ ಇನ್ನೂ ಐದು ಎಸೆತಗಳು ಬಾಕಿಯಿರುವಾಗಲೇ ನಾಲ್ಕು ವಿಕೆಟ್ ಕಳೆದುಕೊಂಡು 138 ರನ್ ಗಳಿಸಿ ಗೆಲುವಿನ ನಗೆ ಬೀರಿದರು.ಲಲಿತ್ 22 ಹಾಗೂ ಶಿಮ್ರೊನ್ 14 ರನ್ ಗಳಿಸಿ ಔಟಾಗದೆ ಉಳಿದರು.
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು.
ನಾಯಕ ರೋಹಿತ್ ಶರ್ಮಾ 44 ರನ್ ಗಳಿಸಿದರು.ಇಶಾನ್ ಕಿಶನ್ 26, ಸೂರ್ಯಕುಮಾರ್ ಯಾದವ್ 15 ಎಸೆತಗಳಲ್ಲಿ 24 ಹಾಗೂ ಜಯಂತ್ ಯಾದವ್ 23 ರನ್ ಗಳಿಸಿದರು. ಹಾರ್ದಿಕ್ ಮತ್ತು ಕೃನಾಲ್ ಉತ್ತಮ ಆಟ ಪ್ರದರ್ಶಿಸಲು ವಿಫಲರಾದರು. ಎ.ಮಿಶ್ರಾ 4 ಹಾಗೂ ಅವೇಶ್ ಖಾನ್ ಎರಡು ವಿಕೆಟ್ ಗಳಿಸಿದರು.