ಮುಂಬೈ ರಣಜಿ ಕ್ರಿಕೆಟ್ ತಂಡಕ್ಕೆ ಹರಿಹರದ ಕೃತಿಕ್ ಆಯ್ಕೆ

ಹರಿಹರ.ಏ 17 ತಾಲ್ಲೂಕಿನ ಹನಗವಾಡಿ ಗ್ರಾಮದ ಪ್ರತಿಭೆಯೊಂದು ಮುಂಬೈಯಲ್ಲಿ ಮಿಂಚಲು ಸಜ್ಜಾಗಿದೆ. ಕೃತಿಕ್ ಹನಗವಾಡಿ ಮುಂಬೈನ ರಣಜಿ ತಂಡಕ್ಕೆ ಆಯ್ಕೆಯಾಗುವ ಮೂಲಕ ಎಲ್ಲರ ಗಮನವನ್ನು ಹರಿಹರದ ಕಡೆಗೆ ತಿರುಗುವಂತೆ ಮಾಡಿದ್ದಾರೆ. ದಾವಣಗೆರೆ ಎಂಬಿಎ ಮೈದಾನದಲ್ಲಿ ಹರಿಹರ ವಲಯ ಹಾಗೂ ಚಳಕೇರಿ ವಲಯದ ನಡುವೆ  ಪಂದ್ಯಾಕೂಟ ನಡೆಯುವ ಸಂದರ್ಭದಲ್ಲಿ ಭೇಟಿ ನೀಡಿದ ಕೃತಿಕ್ ಅವರಿಗೆ ಎರಡು ತಂಡದ ಸದಸ್ಯರು ಚಪ್ಪಾಳೆಯ ಮೂಲಕ ಸ್ವಾಗತಿಸಿದರು.ಹರಿಹರದ ಮಾಜಿ ಶಾಸಕರಾದ ಬಿ.ಪಿ.ಹರೀಶ್ ಮಾತನಾಡಿ ತಮ್ಮ ಜಿಲ್ಲೆಯ ಯುವಕ ವಿನಯಕುಮಾರ್ ಭಾರತವನ್ನು ಪ್ರತಿನಿಧಿಸಿದ್ದರು, ಅದೇ ರೀತಿಯಲ್ಲಿ ಮುಂಬೈ ರಣಜಿ ತಂಡಕ್ಕೆ ಆಯ್ಕೆಯಾದ ಕೃತಿಕ್ ಕೂಡ ಉತ್ತಮ ಹಂತವನ್ನು ತಲುಪಿ ನಮ್ಮ ಹರಿಹರ ತಾಲೂಕಿನ ಕೀರ್ತಿಯನ್ನು ಬೆಳಗಿಸಲಿ,ದಾವಣಗೆರೆ ಜಿಲ್ಲೆಯಿಂದ ಇದೆ ರೀತಿಯಲ್ಲಿ ಕ್ರೀಡಾಪಟುಗಳು ಬೆಳಕಿಗೆ ಬರಲಿ ಎಂದು ಹಾರೈಸಿ ಶುಭಕೋರಿದರು, ನಂತರ‌ ಕ್ರಿಕೆಟಿನ  ಎರಡು ತಂಡದ ಸದಸ್ಯರೊಂದಿಗೆ ತುಮಕೂರು ವಲಯದ ಕನ್ವಿನರ್ ಶಶಿಧರ್,ಗೋಪಾಲಕೃಷ್ಣ,ಹರಿಹರದ ನಾಮನಿರ್ದೇಶನ ನಗರಸಭೆ ಸದಸ್ಯ ಹೆಚ್.ಎಸ್.ರಾಘವೇಂದ್ರ, ಹರಿಹರ ನಗರಸಭೆಯ ರಜನಿಕಾಂತ್ ಎನ್ .ಹಾಗೂ  ಕ್ರೀಡಾಪಟುಗಳು,ಕ್ರೀಡಾ ಪ್ರೋತ್ಸಾಹಕರು  ಸೇರಿ ಕೃತಿಕ್ ಸನ್ಮಾನಿಸುವ ಮೂಲಕ ಶುಭ ಹಾರೈಸಿದರು.