ಮುಂಬೈ ಮೇಲೆ ಸವಾರಿ ಮಾಡಿದ ಚೆನ್ನೈ

ಮುಂಬೈ:ವೇಗಿ ಮಥಿಶ ಪತಿರನ ದಾಳಿಯ ನೆರವಿನಿಂದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ವಿರುದ್ಧ
20 ರನ್ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಮುಂಬೈ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ.
ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ 20 ಓವರ್ ಗಳಲ್ಲಿ
4 ವಿಕೆಟ್ ನಷ್ಟಕ್ಕೆ 206 ರನ್ ಕಲೆ ಹಾಕಿತು. ಮುಂಬೈ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು.
207 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ ಮುಂಬೈಗೆ ಆರಂಭಿಕರಾದ ರೋಹಿತ್ ಶರ್ಮಾ (105 ರನ್) ಮತ್ತು ಇಶಾನ್ ಕಿಶನ್ (23 ರನ್) ಮೊದಲ ವಿಕೆಟ್ಗೆ 70 ರನ್ ಸೇರಿಸಿದರು. ಈ ವೇಳೆ ದಾಳಿಗಿಳಿದ ಪತಿರನ ಇಶಾನ್ ಕಿಶನ್ ಮತ್ತು ಸೂರ್ಯ ಕುಮಾರ್ ಗೆ (0 ರನ್) ಪೆವಿಲಿಯನ್ ದಾರಿ ತೋರಿಸಿದರು.ನಂತರ ಪತರಿನ ತಿಲಕ್ ವರ್ಮಾ (31 ರನ್) ಅವರನ್ನು ಬಲಿತೆಗೆದುಕೊಂಡರು.
ನಾಯಕ ಹಾರ್ದಿಕ್ 2, ಟಿಮ್ ಡೇವಿಡ್ 13 ರನ್, ರೊಮೆರಿಯೊ ಶೆಫಾರ್ಡ್ 1, ಮೊಹ್ಮದ್ ನಬಿ ಅಜೇಯ 4 ರನ್ ಗಳಿಸಿದರು.
ಚೆನ್ನೈ ಪರ ಮತೀಶ ಪತಿರನ 28ಕ್ಕೆ 4, ಮುಸ್ತಾಫಿಜುರ್ 55ಕ್ಕೆ 1, ತುಷಾರ್ 29ಕ್ಕೆ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಪರ ಅಜಿಂಕ್ಯ ರಹಾನೆ 5, ರಚಿನ್ 21, ನಾಯಕ ಋತುರಾಜ್ ಗಾಯಕ್ವಾಡ್ 69 ರನ್, ಶಿವಂ ದುಬೆ 66 ರನ್, ಡ್ಯಾರಿಲ್ ಮಿಚೆಲ್ 17, ಧೋನಿ ಅಜೇಯ 20 ರನ್ ಗಳಿಸಿದರು.
ಮುಂಬೈ ಪರ ಹಾರ್ದಿಕ್ 43 ಕ್ಕೆ 2, ಗೋಪಾಲ್ 9ಕ್ಕೆ 1, ಕೋಟ್ಜೆ 35ಕ್ಕೆ 1 ವಿಕೆಟ್ ಪಡೆದರು.