ಮುಂಬೈ ಪೊಲೀಸ್ ಅಧಿಕಾರಿ ದಿಢೀರ್ ಪ್ರತ್ಯಕ್ಷ

ಮುಂಬೈ, ನ.೨೫-ಅಕ್ಟೋಬರ್‌ನಿಂದ ನಾಪತ್ತೆಯಾಗಿ, ದೇಶದಿಂದ ಪಲಾಯನ ಮಾಡಿದ್ದಾರೆ ಎಂಬ ವದಂತಿಗಳಿಗೆ ಕಾರಣವಾಗಿದ್ದ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ದಿಢೀರ್ ಅಪರಾಧ ವಿಭಾಗದ ಕಚೇರಿಗಳಿಗೆ ಹಾಜರಾಗಿದ್ದಾರೆ.
ನಾಲ್ಕು ಸುಲಿಗೆ ಪ್ರಕರಣಗಳನ್ನು ಎದುರಿಸುತ್ತಿರುವ ಅವರು ಗುರುವಾರ ಮುಂಜಾನೆ ಚಂಡೀಗಢದಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಪರಾಧ ವಿಭಾಗದ ಕಚೇರಿಗೆ ತೆರಳಿದರು.
ಈ ಕುರಿತು ಪ್ರತಿಕ್ರಿಯಿಸಿದ ಅವರು, ನ್ಯಾಯಾಲಯದ ನಿರ್ದೇಶನದಂತೆ ನಾನು ತನಿಖೆಗೆ ಹಾಜರಾಗುತ್ತೇನೆ ಎಂದು ತಿಳಿಸಿದರು.
ತಮ್ಮ ಕಕ್ಷಿದಾರರು ತಲೆಮರೆಸಿಕೊಂಡಿಲ್ಲ. ಭಾರತದಲ್ಲಿದ್ದಾರೆ ಎಂದು ಮಾಜಿ ಮುಂಬೈ ಪೊಲೀಸ್ ಕಮೀಷನರ್ ಸಿಂಗ್ ಅವರ ವಕೀಲರು ಸುಪ್ರೀಂ ಕೋರ್ಟ್‌ಗೆ ಸೋಮವಾರ ತಿಳಿಸಿದ್ದರು.
ಸಿಂಗ್ ಅವರಿಗೆ ಬಂಧನದಿಂದ ರಕ್ಷಣೆ ಒದಗಿಸಿದ ಸುಪ್ರೀಂ ಕೋರ್ಟ್ ತಮ್ಮ ವಿರುದ್ಧದ ಸುಲಿಗೆ ಆರೋಪಗಳ ತನಿಖೆಗೆ ನೆರವಾಗುವಂತೆ ಸೂಚಿತ್ತು.