ಮುಂಬೈ ಪೊಲೀಸರ ಸಮಾರಂಭವೊಂದರಲ್ಲಿ ಭಾಗವಹಿಸಿದ ಅಕ್ಷಯ್ ಕುಮಾರ

ನಟ ಅಕ್ಷಯ್ ಕುಮಾರ್ ಮುಂಬೈ ಪೊಲೀಸರು ಹಮ್ಮಿಕೊಂಡ ಸಮಾರಂಭದಲ್ಲಿ ಭಾಗವಹಿಸಿದರು. ಇದರ ಒಂದು ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ನಿನ್ನೆ ಶೇರ್ ಮಾಡಿದರು .
ಈ ಸಮಾರಂಭವನ್ನು ಶಹರದ ಪೊಲೀಸರಿಗೆ ನೀಡಲಾದ ಸೆಲ್ಫ್ ಬ್ಯಾಲೆನ್ಸಿಂಗ್ ವೆಹಿಕಲ್
ನ ಉದ್ಘಾಟನೆಗೆ ಆಯೋಜಿಸಲಾಗಿತ್ತು.


ಈ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ಜೊತೆ ಮಹಾರಾಷ್ಟ್ರದ ಹೋಂ ಮಿನಿಸ್ಟರ್ ಅನಿಲ್ ದೇಶಮುಖ್ ಮತ್ತು ಆದಿತ್ಯ ಠಾಕ್ರೆ ಉಪಸ್ಥಿತರಿದ್ದರು.
ವಿಡಿಯೋವನ್ನು ಶೇರ್ ಮಾಡಿದ ಅಕ್ಷಯ್ ಕುಮಾರ್ ಅದರಲ್ಲಿ ಬರೆಯುತ್ತಾ “ಮುಂಬೈ ಪೊಲೀಸರಿಗೆ ನೀಡಲಾದ ಸೆಲ್ಫ್ ಬ್ಯಾಲೆನ್ಸಿಂಗ್ ವೆಹಿಕಲ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ನನಗೆ ತುಂಬಾ ಖುಷಿಯಾಗಿದೆ .ಈ ವೆಹಿಕಲ್ಸ್ ನಿಂದ ಪೊಲೀಸ್ ಫೋರ್ಸ್ ಗೆ ಶಹರದಲ್ಲಿ ಗಸ್ತು ತಿರುಗಲು ಅನುಕೂಲವಾಗಿದೆ. ನನಗೆ ಖುಷಿಯೆಂದರೆ ನಮ್ಮ ಪೊಲೀಸ್ ಫೋರ್ಸ್ ಇಂದಿನ ಸಂದರ್ಭಕ್ಕೆ ಅನುಗುಣವಾಗಿ ಮಾಡರ್ನೈಸೇಶನ್ ಆಗುತ್ತಿದೆ.”
ಈ ವಿಡಿಯೋದಲ್ಲಿ ಅಕ್ಷಯ್ ಕುಮಾರ್ ವೇದಿಕೆಯಲ್ಲಿದ್ದು ಪೊಲೀಸ್ ಫೋರ್ಸ್ ಗೆ ಚಪ್ಪಾಳೆತಟ್ಟಿ ಸ್ವಾಗತಿಸಿದ್ದಾರೆ.

ಮುಂಬೈ ಪೊಲೀಸ್ ಕಮಿಷನರ್ ಪರಮ್ ವೀರ್ ಸಿಂಗ್ ಈ ವಿಡಿಯೋ ಶೇರ್ ಮಾಡಿ ಬರೆಯುತ್ತಾ “ಸುರಕ್ಷೆಗಾಗಿ ’ಸ್ಪೆಷಲ್ ೨೪’. ನಿಶ್ಚಿತ ರೂಪದಿಂದ ಸಮಯಕ್ಕೆ ಅನುಸಾರವಾಗಿ ಪೊಲೀಸ್ ಫೋರ್ಸ್ ಸಶಕ್ತಗೊಳಿಸುವುದು ಅಗತ್ಯವಿದೆ. ಇದು ಅನಾವಶ್ಯಕ ಸ್ಟಂಟ್ ಅಲ್ಲ, ಸೇಫ್ಟಿ ಮೊದಲಿಗೆ” ಎಂದಿದ್ದಾರೆ.
ಅಕ್ಷಯ್ ಕುಮಾರ್ “ಸೂರ್ಯವಂಶಿ” ಫಿಲ್ಮ್ ನಲ್ಲಿ ಪೊಲೀಸ್ ಪಾತ್ರದಲ್ಲಿ ಕಂಡು ಬರಲಿದ್ದಾರೆ.
ಅಕ್ಷಯ್ ಕುಮಾರ್ ಸದಾ ಸೈನಿಕರ ಪರಿವಾರಕ್ಕೆ ಆರ್ಥಿಕ ಸಹಾಯ ಮಾಡುವುದರಲ್ಲಿ ಮೊದಲ ಸಾಲಲ್ಲಿ ನಿಂತಿದ್ದಾರೆ. ಅಕ್ಷಯ್ ಅನೇಕ ಫಿಲ್ಮ್ ಗಳಲ್ಲಿ ಪೊಲೀಸ್ ಪಾತ್ರವನ್ನು ನಿರ್ವಹಿಸಿದವರು.


’ಸೂರ್ಯವಂಶಿ’ ಯಲ್ಲೂ ಅವರು ಪೊಲೀಸ್ ಪಾತ್ರದಲ್ಲಿ ಕಂಡು ಬರಲಿದ್ದಾರೆ. ಈ ಫಿಲ್ಮ್ ನ ನಿರ್ದೇಶಕರು ರೋಹಿತ್ ಶೆಟ್ಟಿ.
ಅಕ್ಷಯ್ ತನ್ನ ಅಪ್ ಕಮಿಂಗ್ ಫಿಲ್ಮ್ ಬೆಲ್ ಬಾಟಮಂ ನಲ್ಲಿ ರಾ ಏಜೆಂಟ್ ಪಾತ್ರದಲ್ಲಿ ಕಂಡು ಬರಲಿದ್ದಾರೆ. ಇದು ೨ ಏಪ್ರಿಲ್ ೨೦೨೧ ರಲ್ಲಿ ರಿಲೀಸ್ ಆಗಲಿದೆ.

ಪ್ರಮುಖ ಬಾಲಿವುಡ್ ನಟ-ನಟಿಯರು ಅರ್ಧದಲ್ಲೇ ಶಿಕ್ಷಣ ತ್ಯಜಿಸಿದ್ದು ಗೊತ್ತೇ?

ಬಾಲಿವುಡ್ ಇಂಡಸ್ಟ್ರಿಯಲ್ಲಿ ಹಲವು ನಟ ನಟಿಯರು ಉತ್ತಮ ಎಜುಕೇಶನ್ ಪಡೆದಿದ್ದರೆ, ಇನ್ನು ಕೆಲವರು ಅರ್ಧದಲ್ಲೇ ತಮ್ಮ ಓದಿಗೆ ತಿಲಾಂಜಲಿ ನೀಡಿದ ನಟನಟಿಯರೂ ಅನೇಕರಿದ್ದಾರೆ ಎನ್ನುವುದು ನಿಮಗೆ ಗೊತ್ತೇ?


ಬಾಲಿವುಡ್ ಫಿಲ್ಮ್ ಗಳಲ್ಲಿ ಡಾಕ್ಟರ್ ಪಾತ್ರದ ಅಭಿನಯ, ಇಂಜಿನಿಯರ್ ಪಾತ್ರದ ಅಭಿನಯ….. ಐಪಿಎಸ್ ಅಧಿಕಾರಿಗಳ ಅಭಿನಯ ….ಮಾಡಿದ ಕಲಾವಿದರು ತಮ್ಮ ಅಭಿನಯಕ್ಕಾಗಿ ಶಹಬ್ಬಾಸ್ ಪಡೆದುಕೊಂಡಿರಬಹುದು .

ಆದರೆ ನಿಜ ಜೀವನದಲ್ಲಿ ಅವರು ತಮ್ಮ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿದ ಸಂಗತಿ ಅನೇಕರಿಗೆ ತಿಳಿದಿರಲಾರದು!
ಈಗ ಅತಿ ಹೆಚ್ಚು ಸುದ್ದಿಯಲ್ಲಿರುವ ಕಂಗನಾ ರನಾವತ್ ಹಿಮಾಚಲ ಪ್ರದೇಶದವರು. ಆರಂಭದಿಂದಲೂ ಓದಿನಲ್ಲಿ ಹೆಚ್ಚು ಆಸಕ್ತಿ ಇರಲಿಲ್ಲ. ಕಂಗನಾ ಮಾಡಲಿಂಗ್ ನಲ್ಲಿ ಕೆರಿಯರ್ ಸ್ಥಾಪಿಸಲು ಇಚ್ಛಿಸಿದ್ದರು. ಆದರೆ ಕುಟುಂಬದ ಸಪೋರ್ಟು ಸಿಗಲಿಲ್ಲ. ೧೨ನೇ ತರಗತಿಯಲ್ಲಿ ಕೆಮಿಸ್ಟ್ರಿ ಯ ಪರೀಕ್ಷೆಯಲ್ಲಿ ಫೇಲ್ ಆದ ನಂತರ ಓದಿನಲ್ಲಿ ಆಸಕ್ತಿ ಬರಲಿಲ್ಲ .ಅರ್ಧದಲ್ಲಿ ಓದಿಗೆ ವಿದಾಯ ಹೇಳಿ ಮಾಡೆಲಿಂಗ್ ಗಾಗಿ ದೆಹಲಿಗೆ ಬಂದಿದ್ದರು .

೯೦ರ ದಶಕದ ಪಾಪುಲರ್ ನಟಿ ಕರಿಷ್ಮಾ ಕಪೂರ್ ಕೆಥಡ್ರಲ್ ಅಂಡ್ ಜಾನ್ ಕ್ಯಾನನ್ ಸ್ಕೂಲ್ ನಲ್ಲಿ ಓದುತ್ತಿದ್ದರು. ೧೯೮೮ ರಲ್ಲಿ ತಂದೆ-ತಾಯಿ ಬೇರೆಬೇರೆಯಾದ ನಂತರ ಓದಿಗೆ ವಿರಾಮ ಹೇಳಿ ಬಾಲಿವುಡ್ ಗೆ ಎಂಟ್ರಿ ಆದರು .೧೯೯೧ ರಲ್ಲಿ ಬಂದ ಪ್ರೇಮ್ ಖೈದಿ ಮೂಲಕ ಕರಿಷ್ಮಾ ಗೆ ಬಾಲಿವುಡ್ ನಲ್ಲಿ ದೊಡ್ಡ ಬ್ರೇಕ್ ಸಿಕ್ಕಿತು.ನಂತರ ಕರಿಷ್ಮಾ ಸೋಫಿಯಾ ಕಾಲೇಜಿನಲ್ಲಿ ಅಡ್ಮಿಶನ್ ಪಡೆದರೂ ಸಹ ಕಾಲೇಜನ್ನು ಅರ್ಧದಲ್ಲಿ ತ್ಯಜಿಸಿದರು.

ಕತ್ರಿನಾ ಕೈಫ್ ತಂದೆ-ತಾಯಿ ಚಿಕ್ಕಪ್ರಾಯದಲ್ಲಿ ಬೇರೆಬೇರೆಯಾಗಿದ್ದರೂ ಕತ್ರಿನಾರ ತಾಯಿಯೇ ಏಳು ಜನ ಸಹೋದರ ಸಹೋದರಿಯರನ್ನು ಸಾಕಿದರು. ಕತ್ರಿನಾ ಹಾಂಕಾಂಗ್ ಚೈನಾ ಜಪಾನ್ ಫ್ರಾನ್ಸ್ ಲಂಡನ್… ಅನೇಕಕಡೆ ತಾಯಿಯ ಜೊತೆ ಓಡಾಡಿದವರು .ಆಗಾಗ ದೇಶಗಳನ್ನು ಬದಲಾಯಿಸಿದ ಕಾರಣ ಓದು ಪೂರ್ಣಗೊಳಿಸಲಾಗಲಿಲ್ಲ .ಇವರ ತಾಯಿ ಮನೆಯಲ್ಲಿಯೇ ಟ್ಯೂಷನ್ ಟೀಚರ್ ರನ್ನು ಕರೆಸಿ ಮಕ್ಕಳಿಗೆ ಶಿಕ್ಷಣ ನೀಡಿದರು. ಕಿರು ಪ್ರಾಯದಲ್ಲಿ ಮಾಡೆಲಿಂಗ್ ಜಗತ್ತಿಗೆ ಬಂದು ಅಲ್ಲಿಂದ ಕತ್ರಿನಾ ಬಾಲಿವುಡ್ ಗೆ ಎಂಟ್ರಿ ಆದರು.

ಬಾಲಿವುಡ್ ನ ಇನ್ನೋರ್ವ ಅತಿ ಪಾಪುಲರ್ ನಟಿ ಕಾಜೋಲ್ ಗೂ ತನ್ನ ಶಾಲಾ ಜೀವನವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಆರಂಭದ ಓದು ಪಂಚಗಣಿಯಲ್ಲಿ ಆಗಿತ್ತು. ಶಾಲಾದಿನಗಳಲ್ಲಿ ಫಿಲ್ಮ್ ಬೇಖುದೀ ಗೆ ಆಫರ್ ಬಂದಿತ್ತು. ಆಗ ಕಾಜೊಲ್ ಗೆ ೧೬ವರ್ಷ . ಕಾಜೊಲ್ ಫಿಲ್ಮ್ ಗೆ ಹಾಂ ಎಂದಳು.
ಈ ಫಿಲ್ಮಿನ ನಂತರ ಮತ್ತೆ ಓದು ಮುಂದುವರಿಸಬೇಕೆಂದರೆ ಆಗಲೇ ಇಲ್ಲ. ಬೇಖುದೀ ನಂತರ ಹಲವಾರು ದೊಡ್ಡ ಫಿಲ್ಮ್ ಗಳ ಆಫರ್ ಬಂದಿತ್ತು.
ಅರ್ಜುನ್ ಕಪೂರ್ ಕತೆಯೂ ಹೀಗೇನೆ. ಇಶ್ಕ್ ಜಾದೇ ಫಿಲ್ಮ್ ನಿಂದ ಎಂಟ್ರಿಯಾದ ಅರ್ಜುನ್ ಕಪೂರ್ ಗೆ ಕೂಡ ಓದಿನಲ್ಲಿ ಆಸಕ್ತಿ ಇರಲಿಲ್ಲ .ಅರ್ಜುನ್ ಹಾಯರ್ ಸೆಕೆಂಡರಿ ಎಕ್ಸಾಮ್ ನಲ್ಲಿ ಫೇಲಾದರು. ಅಲ್ಲಿಂದ ಮುಂದಿನ ಓದಿಗೆ ಪೂರ್ಣವಾಗಿ ತಿಲಾಂಜಲಿ ಇತ್ತರು. ಓದು ನಿಲ್ಲಿಸಿದ ನಂತರ ಅಸಿಸ್ಟೆಂಟ್ ಡೈರೆಕ್ಟರ್ ಮತ್ತು ಅಸಿಸ್ಟೆಂಟ್ ಪ್ರೊಡ್ಯೂಸರ್ ಕೆಲಸ ಮಾಡಿದರು.

ಇನ್ನು ಸಲ್ಮಾನ್ ಖಾನ್ ಏನು ಕಡಿಮೆಯೇ. ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಹೈಸ್ಕೂಲ್ ಮುಗಿಸಿದ ನಂತರ ಸೈಂಟ್ ಜೇವಿಯರ್ ಕಾಲೇಜ್ ಗೆ ಸೇರಿದರು.ಆದರೆ ಅರ್ಧದಲ್ಲೇ ಕಾಲೇಜ್ ತ್ಯಜಿಸಿದರು.
ನಟ ಅಮೀರ್ ಖಾನ್ ಈಡಿಯಟ್ಸ್ ನಲ್ಲಿ ಇಂಜಿನಿಯರ್ ಮತ್ತು ತಾರೆ ಜಮೀನ್ ಪರ್ ಫಿಲ್ಮ್ ನಲ್ಲಿ ಟೀಚರ್ ಪಾತ್ರ ನಿರ್ವಹಿಸಿದ್ದರು. ಆದರೆ ಕಾಲೇಜನ್ನು ಅರ್ಧದಲ್ಲಿ ತ್ಯಜಿಸಿದವರು. ಅಮೀರ್ ಖಾನ್ ನರ್ಸಿ ಮೋಂಜಿ ಕಾಲೇಜಿನಲ್ಲಿ ೧೨ರ ತನಕ ಓದಿದವರು. ಅಮೀರ್ ಖಾನ್ ರನ್ನು ಪಾಲಕರು ಇಂಜಿನಿಯರ್ ಓದಿಸಬೇಕೆಂದು ಇಚ್ಛಿಸಿದ್ದರು. ಆದರೆ ಪರಿವಾರದ ವಿರುದ್ಧ ಅವರು ಥಿಯೇಟರ್ ಗ್ರೂಪಿಗೆ ಸೇರಿಕೊಂಡರು.

ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಹತ್ತನೇ ತರಗತಿಯ ನಂತರ ಓದಿನಿಂದ ದೂರ ಹೋದವರು. ಮುಂಬೈಗೆ ಬಂದ ನಂತರ ಖಾಲ್ಸಾ ಕಾಲೇಜಿನಲ್ಲಿ ಮುಂದಿನ ಓದಿಗಾಗಿ ಅಡ್ಮಿಶನ್ ಪಡೆದಿದ್ದರು. ಆದರೆ ನಂತರ ಅವರು ಮಾರ್ಷಲ್ ಆರ್ಟ್ಸ್ ಟ್ರೈನಿಂಗ್ ಪಡೆಯಲು ಹಾಂಕಾಂಗ್ ಗೆ ತೆರಳಿದರು. ಭಾರತಕ್ಕೆ ಮರಳಿದ ನಂತರ ಮಾರ್ಷಲ್ ಆರ್ಟ್ಸ್ ಟ್ರೈನರ್ ಕೂಡ ಆಗಿ ನೌಕರಿ ಮಾಡಿದ್ದಿದೆ.