ಮುಂಬೈ ಎದುರು ರಾಜಸ್ಥಾನಕ್ಕೆ ಯಶಸ್ವಿ ಗೆಲುವು

ಜೈಪುರ: ಯಶಸ್ವಿ ಜೈಸ್ವಾಲ್ ಅವರ ಶತಕ ಮತ್ತು ಸಂದೀಪ್ ಅವರ ಮಾರಕ ದಾಳಿಯ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಮುಂಬೈ ವಿರುದ್ಧ ,9 ವಿಕೆಟ್ಗಳ ಗೆಲವು ದಾಖಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು.ರಾಜಸ್ಥಾನ 18.4 ಓವರ್ಗಳಲ್ಕಿ 1 ವಿಕೆಟ್ ನಷ್ಟಕ್ಕೆ 183 ರನ್ ಪೇರಿಸಿತು.
ರಾಜಸ್ಥಾನ ಪರ ರಾಜಸ್ಥಾನ ಪರ ಯಶಸ್ವಿ ಜೈಸ್ವಾಲ್ 104 ರನ್, ಜೋಸ್ ಬಟ್ಲರ್ 35, ಸಂಜು ಸ್ಯಾಮ್ಸನ್ 38 ರನ್ ಹೊಡೆದರು.
ಸವಾಲಿನ ಗುರಿ ನೀಡಿದ ಮುಂಬೈ ಇಂಡಿಯನ್ಸ್

ಇದಕ್ಕೂ ಮುನ್ನ ಯುವ ಬ್ಯಾಟರ್ ತಿಲಕ್ ವರ್ಮಾ ಅವರ ಅರ್ಧ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ಆತಿಥೇಯ ರಾಜಸ್ಥಾನ ತಂಡಕ್ಕೆ 180 ರನ್‍ಗಳ ಗೆಲುವಿನ ಗುರಿ ನೀಡಿತು.

ಇಲ್ಲಿನ ಸವಾಯಿ ಮಾನ್ ಸಿಂಗ್ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದು ಒದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು.

ಮುಂಬೈ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ವೇಗಿ ಸಂದೀಪ್ ಶರ್ಮಾ ಮುಂಬೈಗೆ ಆರಂಭಿಕ ಆಘಾತ ನೀಡಿದರು. ರೋಹಿತ್ (6ರನ್) ಅವರು ಬೌಲ್ಟ್‍ಗೆ ವಿಕೆಟ್ ಒಪ್ಪಿಸಿದರು. ಇಶಾನ್ ಕಿಶನ್ (0ರನ್), ಸೂರ್ಯಕುಮಾರ್ (10ರನ್) ಮತ್ತು ತಿಲಕ್ ವರ್ಮಾ ಅವರನ್ನು ವೇಗಿ ಸಂದೀಪ್ ಶರ್ಮಾ ಬಲಿತೆಗೆದುಕೊಂಡರು. ತಿಲಕ್ ವರ್ಮಾ 38 ಎಸೆತದಲ್ಲಿ ಅರ್ಧ ಶತಕ ಹೊಡೆದರು. ತಿಲಕ್ ವರ್ಮಾ ಒಟ್ಟು 45 ಎಸೆತ, 5 ಬೌಂಡರಿ, 3 ಸಿಕ್ಸರ್ ಸೇರಿ 65 ರನ್ ಹೊಡೆದರು. ನೆಹಾಲ್ ವಾದೇರಾ 24 ಎಸೆತದಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ಹೊಡೆದರು. ನಾಯಕ ಹಾರ್ದಿಕ್ ಪಾಂಡ್ಯ 10, ಟಿಮ್ ಡೇವಿಡ್ 3 ರನ್ ಹೊಡೆದರು.

ರಾಜಸ್ಥಾನ ಪರ 18ಕ್ಕೆ 5 ವಿಕೆಟ್, ಟ್ರೆಂಟ್ ಬೌಲ್ಟ್ 32ಕ್ಕೆ 2, ಆವೇಶ್ ಖಾನ್ ಮತ್ತು ಯಜ್ವಿಂದರ್ ಚಾಹಲ್ ತಲಾ 1 ವಿಕೆಟ್ ಪಡೆದರು.