ಮುಂಬೈ ಇಂಡಿಯನ್ಸ್ ಗೆ ಮಣಿದ ಎಸ್ ಆರ್ ಎಚ್

ಚೆನ್ನೈ, ಏ. 17- ಇಲ್ಲಿನ‌ ಚಿದಂಬರಂ ಕ್ರೀಡಾಂಗಣ ದಲ್ಲಿ ನಡೆದ‌‌ ಐಪಿಎಲ್ ಪಂದ್ಯದಲ್ಲಿ ಎಸ್ ಆರ್ ಎಚ್ ವಿರುದ್ದ ಮುಂಬೈ ಇಂಡಿಯನ್ಸ್ 13 ರನ್ ಗಳಿಂದ ಗೆಲುವು ಸಾಧಿಸಿತು.
ಗೆಲುವಿನ ಸನಿಹಕ್ಕೆ ಬಂದು ವಾರ್ನರ್ ಪಡೆ ಮತ್ತೆ ಎಡವಿತು.


ಗೆಲುವಿಗೆ ಅಗತ್ಯವಿದ್ದ 151 ರನ್‌ಗಳ ಸವಾಲಿನ‌‌‌ ಬೆನ್ನಹತ್ತಿದ್ದ ಎಸ್ ಆರ್ ಎಚ್ ಪರ ಡೇವಿಡ್‌ ವಾರ್ನರ್ ಹಾಗೂ ಜಾನಿ ಬೈರ್ ಸ್ಟೋ ಉತ್ತಮ ಆರಂಭ ಒದಗಿಸಿದರು.
ಆದರೆ 22 ಎಸೆತಗಳಲ್ಲಿ 43 ರನ್ ಬಾರಿಸಿದ್ದ ಜಾನಿ ಹಿಟ್ ವಿಕೆಟ್ ಗೆ ಬಲಿಯಾದರು. ತಂಡದ ಮೊತ್ತ 71 ಆಗಿದ್ದಾಗ ಮನೀಶ್ ಪಾಂಡೆ ನಿರ್ಗಮಿಸಿದರು. ಇದರ ಬೆನ್ನಲ್ಲೇ ನಾಯಕ ಡೇವಿಡ್ ವಾರ್ನರ್ 36 ರನ್ ಗಳಿಸಿ ರನೌಟ್ ಬಲೆಗೆ ಬಿದ್ದರು.
ವಿರಾಟ್ ಸಿಂಗ್ 11 ಹಾಗೂ ಅಭಿಷೇಕ್‌ ಶರ್ಮಾ 2 ರನ್ ಗಳಿಸಿ ಔಟಾದಾಗ ಎಸ್ ಎಚ್ ಆರ್ ಸಂಕಷ್ಟಕ್ಕೆ ಸಿಲುಕಿತ್ತು. ಅಂತಿಮ ಹಂತದವರೆಗೂ ವಿಜಯ್ ಶಂಕರ್ ನಡೆಸಿದ ಹೋರಾಟ ವಿಫಲವಾಯಿತು ಶಂಕರ್ 28 ರನ್ ಗಳಿಸಿ ನಿರ್ಗಮಿಸಿದರು.
ಅಂತಿಮವಾಗಿ ಎಸ್ ಆರ್ ಎಚ್ 19.4 ಓವರ್ ಗಳಲ್ಲಿ 137ರನ್ ಗಳಿಗೆ ಸರ್ವಪತನ ಕಂಡು ಸೋಲಿಗೆ ಶರಣಾಯಿತು.
ಟ್ರೆಂಟ್ ಬೋಲ್ಟ್ ಮತ್ತು ರಾಹುಲ್ ಚಹರ್ ತಲಾ ಮೂರು ವಿಕೆಟ್ ಪಡೆದು ಎಸ್ ಆರ್ ಎಚ್ ತಂಡದ ಕುಸಿತಕ್ಕೆ ಪ್ರಮುಖ ಕಾಣಿಕೆ ನೀಡಿದರು.
ಮೊದಲು ಬ್ಯಾಟ್ ಮಾಡಿದ ಮುಂಬೈ 20 ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 150 ರನ್ ಗಳಿಸಿತು.
ಡೀ ಕಾಕ್ 40, ಕೀರನ್ ಪೊಲಾರ್ಡ್ 22 ಎಸೆತಗಳಲ್ಲಿ 35 ರನ್ ಬಾರಿಸಿದರು. ನಾಯಕ ರೋಹಿತ್ ಶರ್ಮಾ 25 ಎಸೆತಗಳಲ್ಲಿ 32 ರನ್ ಗಳಿಸಿದರು.
ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಲು ವಿಫಲರಾದರು. ಮುಜೀಬ್ ಮತ್ತು ವಿಜಯ್ ಶಂಕರ್ ತಲಾ ಎರಡು ವಿಕೆಟ್ ಗಳಿಸಿದರು.