ಮುಂಬೈನಲ್ಲಿ ಹವಾ ಮಲ್ಲಿನಾಥರ ಸಾನಿಧ್ಯದಲ್ಲಿ ಶ್ರದ್ದಾ- ಭಕ್ತಿಯಿಂದ ನಾಗ ಪಂಚಮಿ ಆಚರಿಸಿದ ಭಕ್ತಸಾಗರ

ಕಲಬುರಗಿ:ಆ.23: ಮುಂಬೈ ನ ವಿರಾರ ಫಾಟದಲ್ಲಿರುವ ಶಿವಮಂದಿರ ಹವಾ ಮಲ್ಲಿನಾಥ ಮಾಹರಾಜನಿರಗುಡಿ ಅವರ ಆಶ್ರಮದಲ್ಲಿ ಆಯೋಜಿನ ಲಾಗಿದ್ದ ನಾಗರಪಂಚಮಿ ಹಬ್ಬದಂದು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಹಸ್ರಾರು ಸಂಖ್ಯೆಯಲ್ಲಿ ಭಕಸಾಗರ ಶ್ರಧಾ- ಭಕ್ತಿಯಿಂದ ಬೆಳೆಗ್ಗೆ ನಸುಕಿನ ಜಾವ 4 ಗಂಟೆಯಿಂದ ರಾತ್ರಿ 11 ಗಂಟೆ ವರೆಗೆ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಪರಮ ಪೂಜ್ಯರ ದರ್ಶನ – ಆಶಿರ್ವಾದ ಪಡೆದರು, ಪರಮ ಪೂಜ್ಯ ಶ್ರೀ ಹವಾಮಲ್ಲಿನಾಥ ಮಾಹರಾಜ ನಿರಗುಡಿ ಅವರು ದಣಿವರಿಯದೆ ಬಂದ ಎಲ್ಲಾ ಭಕ್ತರ ಕೈಗೆ ರಾಖಿ ಕಟ್ಟಿ ದರ್ಶನ್ – ಆಶಿರ್ವಾದ ನೀಡಿದರು,

ನಾಗ ಪಂಚಮಿ ಉತ್ಸವದಲ್ಲಿ ಮಾರಾಷ್ಟ್ರ, ಗುಜರಾತ, ರಾಜಸ್ತಾನ,ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಆಶ್ರಮದಲ್ಲಿ ಅಚ್ಚುಕಟ್ಟಾದ ಪ್ರಸಾದದ ವ್ಯವಸ್ಥೆ, ಶುಧ ಕುಡಿಯುವ ನೀರಿನ ವ್ಯವಸ್ಥೆ, ವಸತಿ ಹಾಗು ವಾಹನ ನಿಲುಗಡೆ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿತ್ತು ಹಾಗೂ ಈ ಉತ್ಸವದಲ್ಲಿ ಸುಮಾರು 50 ಸಾವಿರಕ್ಕು ಅಧಿಕ ಸಂಖ್ಯೆಯ ಭಕ್ತರು ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥರ ದರ್ಶನ ಪಡೆದರು ಎ0ದು ಜೈ ಭಾರತ ಮಾತಾ ಸೇವಾ ಸಮಿತಿ (ರಿ) ನವದೆಹಲಿಯ ರಾಷ್ಟ್ರೀಯ ವಕ್ತಾರರಾದ ವೈಜನಾಥ ಝಳಕಿ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.