ಮುಂಬೈಗೆ ಜಯ; ಹಾಲಿ ಚಾಂಪಿಯನ್‌ ಚೆನ್ನೈ ಪ್ಲೇ ಆಫ್ ಕನಸು ಭಗ್ನ

ಮುಂಬೈ, ಮೇ.12- ಐಪಿಎಲ್ ಬಾರಿ ಟೂರ್ನಿಯಲ್ಲಿ ಇಂದು 59 ನೇ ಪಂದ್ಯದಲ್ಲಿ ಚೆನ್ನೈ ವಿರುದ್ಧ ಮುಂಬೈ ಇಂಡಿಯನ್ಸ್ ಐದು ವಿಕೆಟ್ ಗಳಿಂದ ಜಯಗಳಿಸಿತು.


ಈ ಸೋಲಿನಿಂದಾಗಿ ಹಾಲಿ ಚಾಂಪಿಯನ್‌ ಚೆನ್ನೈ ಪ್ಲೇ ಆಫ್‌ ನಿಂದ ಹೊರಬಿದ್ದಿದೆ. ಈಗಾಗಲೇ ಮುಂಬೈ ಇಂಡಿಯನ್ಸ್ ಟೂರ್ನಿಯಿಂದ ಹೊರಬಿದ್ದಿದೆ.
ಐಪಿಎಲ್ ನಲ್ಲಿ ಮುಂಬೈ ಐದು ಬಾರಿ ಹಾಗೂ ಚೆನ್ನೈ ನಾಲ್ಕು ಬಾರಿ ಪ್ರಶಸ್ತಿ ಗೆದ್ದುಕೊಂಡಿತ್ತು.
ಅಲ್ಪ ಮೊತ್ತದ ಸವಾಲನ್ನು ಬೆನ್ನಹತ್ತಿದ ಮುಂಬೈ 14.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 103 ರನ್ ಗಳಿಸಿ ಜಯಭೇರಿ ಬಾರಿಸಿತು.
33 ರನ್ ಗಳಿಸುವಷ್ಟರಲ್ಲಿ ‌ಮುಂಬೈ ನಾಲ್ಕು ವಿಕೆಟ್ ಕಳೆದುಕೊಂಡಿತು. ಇಶಾನ್ ಕಿಶನ್ 6, ನಾಯಕ ರೋಹಿತ್ ಶರ್ಮಾ 18, ಡೇನಿಯಲ್ ಸ್ಯಾಮ್ಸ್ 1 ಹಾಗೂ ಟ್ರಸ್ಟನ್ ಸ್ಟಬ್ಸ್ ಶೂನ್ಯಕ್ಕೆ ನಿರ್ಗಮಿಸಿದರು. ಬಳಿಕ ತಿಲಕ್ ವರ್ಮಾ ಹೃತಿಕ್ ಶೋಕೀನ್ ತಂಡದ ಮೊತ್ತವನ್ನು 81ರನ್ ವರೆಗೂ ಕೊಂಡೊಯ್ದರು. ಈ ಹಂತದಲ್ಲಿ ಹೃತಿಕ್18 ರನ್ ಗಳಿಸಿ ನಿರ್ಗಮಿಸಿದರು. ತಿಲಕ್ ವರ್ಮಾ 34 ಹಾಗೂ ಟಿಮ್ ಡೇವಿಡ್ 16 ರನ್ ಗಳಿಸಿ ಔಟಾಗದೆ ಉಳಿದರು. ಚೆನ್ನೈ ಪರ ಮುಖೇಶ್ ಚೌಧರಿ ಮೂರು ವಿಕೆಟ್ ಪಡೆದರು.
ಇದಕ್ಕೂ ಮುನ್ನ, ಮುಂಬೈ ಬೌಲಿಂಗ್ ದಾಳಿಗೆ ದೂಳಿಪಟವಾದ ಚೆನ್ನೈ ಸೂಪರ್ ಕಿಂಗ್ಸ್ 15.5 ಓವರ್ ಗಳಲ್ಲಿ 97 ರನ್ ಗಳಿಗೆ ಸರ್ವಪತನ ಕಂಡಿತು.
ಮೊದಲ ಓವರ್ ನಲ್ಲಿ ಡ್ಯಾನಿಯಲ್ ಸ್ಯಾಮ್ಸ್ ಆಘಾತ ನೀಡಿದರು. ಡೆವೂನ್ ಕಾನ್ವೆ ಮೂರು ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದರು.ಇಂದಿನ ಪಂದ್ಯದಲ್ಲಿ ಶೂನ್ಯಕ್ಕೆ ನಿರ್ಗಮಿಸಿದರು. ಆದರೆ ವಿದ್ಯುತ್ ಅಡಚಣೆಯಿಂದಾಗಿ ಡಿಆರ್ ಎಸ್ ಅಲಭ್ಯದಿಂದಾಗಿ ವಿವಾದಾತ್ಮಕ ತೀರ್ಪಿಗೆ ಬಲಿಯಾದರು.
ಮೊಯಿನ್‌ ಅಲಿ 0, ಗ ಗಾಯಕ್ವಾಡ್ 7, ರಾಬಿನ್ ಉತ್ತಪ್ಪ1ಹಾಗೂ ಅಂಬಟಿ ರಾಯುಡು 10 ರನ್ ಗಳಿಸಿ ನಿರಾಸೆ ಮೂಡಿಸಿದರು. ಹೀಗೆ ಒಬ್ಬೊಬ್ಬರಾಗಿ ಔಟಾದ ಬೆನ್ನಲ್ಲೇ ಶಿವಂ ದುಬೆ 10 ಹಾಗೂ ಬ್ರಾವೋ 12 ರನ್ ಗಳಿಸಿದರು.
ಅಂತಿಮವಾಗಿ ನಾಯಕ ಧೋನಿ 33 ಎಸೆತಗಳಲ್ಲಿ 36 ರನ್ ಗಳಿಸಿ ಔಟಾಗದೆ ಉಳಿದರು. ಮುಂಬೈ ಪರ ಡೇನಿಯಲ್ 3, ರೈಲಿ ಮೆರ್ಡಿತ್ ಹಾಗೂ ಕಾರ್ತಿಕೇಯ ತಲಾ ಎರಡು ವಿಕೆಟ್ ಪಡೆದರು.