ಮುಂಬಾಗಿಲು ಮೀಟಿ ಕಳ್ಳತನ

ಮೈಸೂರು,ಏ.7:- ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಮುಂಬಾಗಿಲು ಮೀಟಿ ಒಳನುಗ್ಗಿದ ಕಳ್ಳರು ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿ ಪರಾರಿಯಾದ ಘಟನೆ ಚಾಮುಂಡೇಶ್ವರಿ ರೈಲ್ವೆ ಬಡಾವಣೆಯಲ್ಲಿ ನಡೆದಿದೆ.
ಮೇಟಗಳ್ಳಿ ಶಾದನಹಳ್ಳಿ ಸಮೀಪದ ಚಾಮುಂಡೇಶ್ವರಿ ರೈಲ್ವೆ ಬಡಾವಣೆಯ ನಿವಾಸಿ ಡಿ.ರಾಘವೇಂದ್ರ ಎಂಬವರ ಮನೆಯ ಮುಂಬಾಗಿಲನ್ನು ಮೀಟಿದ ಕಳ್ಳರು 80ಸಾವಿರ ರೂ.ನಗದು, 170ಗ್ರಾಂ ತೂಕದ ಚಿನ್ನಾಭರಣವನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ಡಿ.ರಾಘವೇಂದ್ರ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು ಏ.2ರಂದು ಮನೆಗೆ ಬೀಗ ಹಾಕಿ ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ್ದರು. ಏ.3ರಂದು ರಾತ್ರಿ ಮನೆಗೆ ಮರಳಿ ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.