ಮುಂಬರುವ ಪಾಲಿಕೆ ಚುನಾವಣೆಯಲ್ಲಿ 35 ವಾರ್ಡ್‍ಗಲ್ಲೂ ಗೆಲುವಿನ ಹೋರಾಟಃ ಶಾಸಕ ದೇವಾನಂದ ಚವ್ಹಾಣ

ವಿಜಯಪುರ, ನ.16- ವಿಜಯಪುರ ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಜೆ.ಡಿ.ಎಸ್. ಪಕ್ಷದ ಕಾರ್ಯಕರ್ತರ ಸಭೆ ಜರುಗಿತು.
ಜಾತ್ಯಾತೀತ ಜನತಾದಳ ಪಕ್ಷದ ಸಂಘಟನೆ ಭೂಮಟ್ಟದಲ್ಲಿ ಸಂಘಟಿಸಿ ಮುಂಬರುವ ಮಹಾ£ಗರ ಪಾಲಿಕೆ ಚುನಾವಣೆಯಲ್ಲಿ 35 ವಾರ್ಡಗಳಿಗೂ ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಹೋರಾಟ ಮಾಡೋದು ಖಚಿತವೆಂದು ನಾಗಠಾಣ ಮತಕ್ಷೇತ್ರದ ಜನಪ್ರೀಯ ಶಾಸಕರಾದ ಡಾ. ದೇವಾನಂದ ಚವ್ಹಾಣ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಕಾರ್ಯಕರ್ತರು ಹೋಂದಾಣಿಕೆಯಿಂದ ಸದಸ್ಯತ್ವ ಅಭಿಯಾನ ಕೈಗೊಂಡರೆ ಮುಂಬರುವ ಮಹಾನಗರ ಪಾಲಿಕೆ ಜೆ.ಡಿ.ಎಸ್. ಪಾಲಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾರ್ಯಾಧ್ಯಕ್ಷರಾದ ದಿಲಾವರ ಖಾಜಿ ಮಾತನಾಡಿ, ಪಕ್ಷದ ಪ್ರಮಾಣಿಕ ಕಾರ್ಯಕರ್ತರಿಗೆ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಲು ಶ್ರಮಿಸುವೆ ಎಂದರು.
ಹುಸೇನ ಬಾಗಾಯತ, ದಸ್ತಗೀರ ಸಾಲೋಟಗಿ, ಇಜಾಜ ಮುಕ್ಬಿಲ್ ಮಾತನಾಡಿದರು. ರಾಜು ಹಿಪ್ಪರಗಿ, ಸ್ನೇಹಾ ಶೆಟ್ಟಿ ಜಿಲ್ಲಾ ಅಧ್ಯಕ್ಷರು ಮಹಿಳಾ ಘಟಕ, ಅನ್ವರ ಮಕಾಂದಾರ, ಕೌಸರ ಶೇಖ, ಸುಭಾಸ ನಾಯಕ, ಚಂದ್ರಕಾಂತ ತಾರನಾಳ, ಮನೋಜ ಬಿರಾದಾರ, ನಿಂಗನಗೌಡ ಸೋಲಾಪೂರ, ರೂಪಾ ಕುಂಬಾರ, ಮಹಾದೇವಿ ತಳಕೇರಿ, ರಾಜು ಹಿರೇಮಠ, ಜಾಫರ ರೂಡಗಿ, ಶಿವಾನಂದ ಹಿರೇಕುರುಬರ, ಅರುಣ ತಳಕೇರಿ, ಗೋವಿಂದ ಜೋಶಿ, ಮುಕದಸ್ ಇನಾಮದಾರ, ಶಕೀಲ ನದಾಫ್, ಸದ್ದಾಂ ಪಾಂಡು ಉಪಸ್ಥಿತರಿದ್ದರು. ಸಾಜೀದ ರಿಸಾಲ್ದಾರ ಸ್ವಾಗತಿಸಿದರು. ಡಾ. ಶಮಶರಅಲಿ ಮುಲ್ಲಾ ವಂದಿಸಿದರು.