ಮುಂಬಯಿ ಲಾಕ್‌ಡೌನ್ ಮೇಯರ್ ಸೂಚನೆ

ಮುಂಬೈ, ಏ. ೧೭- ಮಹಾರಾಷ್ಟ್ರ ರಾಜ್ಯದಾದ್ಯಂತ ಕೊರೊನಾ ಸೋಂಕು ಪ್ರಮಾಣ ಹೆಚ್ಚಳಗೊಂಡಿರುವ ಹಿನ್ನೆಲೆ ಸಂಪೂರ್ಣ ಲಾಕ್‌ಡೌನ್ ಮಾಡಲು ಮೇಯರ್ ಕಿಶೋರಿ ಪೆಡ್ನೆಕರ್ ಸೂಚಿಸಿದ್ದಾರೆ.
ಭಾರತದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ನಿರ್ಬಂಧ ವಿಧಿಸಲಾಗಿದೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ನಡುವೆ ಮುಂಬೈ ಮೇಯರ್ ಸೋಂಕು ತಡೆಗೆ ಸಂಪೂರ್ಣ ಲಾಕ್‌ಡೌನ್ ಅನಿವಾರ್ಯ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಮುಂಬೈನ ಶೇ. ೯೫ ರಷ್ಟು ಜನ ಕೋವಿಡ್ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಉಳಿದ ಶೇ. ೫ ರಷ್ಟು ಜನ ನಿರ್ಬಂಧಗಳನ್ನು ಉಲ್ಲಂಘಿಸುತ್ತಿದ್ದಾರೆ. ಇತರರಿಗೂ ಸಮಸ್ಯೆ ಸೃಷ್ಟಿಸಿದ್ದಾರೆ. ಪ್ರಸ್ತುತ ಕೊರೊನಾ ಸೋಂಕು ಗಮನದಲ್ಲಿಟ್ಟುಕೊಂಡು ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಬೇಕು ಅವರು ಸಲಹೆ ನೀಡಿದ್ದಾರೆ.
ಲಸಿಕೆ ಹಾಕಲು ಹಲವು ಪ್ರಯತ್ನಗಳು ಮುಂದುವರೆದಿರುವ ನಡುವೆಯೇ ಸೋಂಕು ಪ್ರಮಾಣ ಸಾವಿನ ಸಂಖ್ಯೆ ಹೆಚ್ಚಳಗೊಂಡಿದೆ. ಕೊರೊನಾ ಸೋಂಕಿನಿಂದ ಜಾಗತಿಕ ಮಟ್ಟದಲ್ಲಿ ಸಾವಿನ ಸಂಖ್ಯೆ ೩ ದಶಲಕ್ಷ ತಲುಪಿದೆ.
ವಿಶ್ವದಾದ್ಯಂತ ಒಟ್ಟು ೧೩೯.೫ ಮಿಲಿಯನ್‌ಗೂ ಅಧಿಕ ಸೋಂಕು ವರದಿಯಾಗಿದೆ. ಇದುವರೆಗೂ ವಿಶ್ವದಾದ್ಯಂತ ೮೬೯ ದಶಲಕ್ಷ ಕೊರೊನಾ ಲಸಿಕೆ ನೀಡಿರುವುದಾಗಿ ವಿಶ್ವಸಂಸ್ಥೆ ವರದಿ ಮಾಡಿದೆ.
ಅಮೆರಿಕಾದಲ್ಲಿ ಅಧಿಕಾರಿಗಳು ೨೦೦ ಮಿಲಿಯನ್ ಲಸಿಕೆ ನೀಡಿರುವುದಾಗಿ ತಿಳಿಸಿದ್ದಾರೆ. ವೈರಸ್ ಸೋಂಕು ದೇಶದಲ್ಲಿ ದಿನನಿತ್ಯ ಹೆಚ್ಚಳಗೊಳ್ಳುತ್ತಿದೆ. ನ್ಯೂಯಾರ್ಕ್ ನಗರದ ಬಿಲ್ ಡಿಬ್ಲಾಸಿಯೋ ಅವರು ಮೇ ೩ ರಂದು ಸಿಬ್ಬಂದಿಯನ್ನು ಮತ್ತೇ ಕಛೇರಿಗೆ ಕರೆ ತರುವ ಪ್ರಯತ್ನವನ್ನು ಮುಂದುವರಿಸಿದ್ದಾರೆ.