
ಇಂಡಿ :ಅ.1: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ, ಕರ್ನಾಟಕ ಸಂಘ ಅಂದೇರಿ, ಮುಂಬೈ ವಿವಿಧ ಕನ್ನಡ ಪರ ಸಂಘ ಸಂಸ್ಥೆಗಳ ಸಹಯೋಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರ ಸಹಕಾರದಲ್ಲಿ ಮುಂಬೈನಲ್ಲಿ ಭಾರತ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಹೊರನಾಡ ಕನ್ನಡ ಸಂಸ್ಕೃತಿ ಸಂಭ್ರಮ 2023 ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ತಂಗಡಗಿ ಉದ್ಘಾಟಿಸಿದರು
ನಂತರ ಮಾತನಡಿದ ಅವರು ಪ್ರತಿಭಾವಂತರು ಮತ್ತು ದೈರ್ಯಶಾಲಿಗಳಿಗೆ ಸಹಜವಾಗಿ ಜನ್ಮ ಭೂಮಿ ಮತ್ತು ಕರ್ಮಭೂಮಿ ಬೇರೆ ಬೇರೆಯಾಗಿರುತ್ತವೆ. ಅವರಿಗೆ ಎರಡು ಕಡೆಯೂ. ಸೌಹಾರ್ದತೆ ವಾತಾವರಣ ನಿರ್ಮಿಸುವ ಹೆಚ್ಚಿನ ಜವಾಬ್ದಾರಿ ಇರುತ್ತದೆ ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಯವರು ಮಾತನಾಡಿ ಕನ್ನಡದ ಕಾಳಜಿ ವ್ಯಕ್ತಿಪಡಿಸುತ್ತಿರುವ
ಮುಂಬೈನ ಕನ್ನಡಿಗರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ನಾವು ಎಲ್ಲೇ ಇದ್ದರೂ ಮಾತೃಭಾಷೆ ಹುಟ್ಟಿದ ಊರನ್ನು ಮೆರೆಯಬಾರದು. ಅನ್ನಕ್ಕಾಗಿ ಅನ್ಯ ಭಾಷೆ ಪ್ರೀತಿಸಿದರೂ ಸ್ವಾಭಿಮಾನಕ್ಕಗಿ ನಮ್ಮ ಮಾತೃಭಾಷೆಯನ್ನು ನಮ್ಮ ನೆಲ, ಜಲ ಮೂಲ ಸಂಸ್ಕೃತಿಯನ್ನು ಹಾಗೆಯೇ ಮನದಲ್ಲಿ ಇಟ್ಟುಕೊಳ್ಳಬೇಕು. ಗೌರವಿಸಬೇಕು ಈ ಪ್ರೀತಿಯೇ ಶಾಶ್ವತ ಖುಷಿ ಕೊಡುತ್ತವೆ ಎಂದರು.
ಅಂದೇರಿಯ ಕರ್ನಾಟಕ ಸಂಘದವರು ಇಲ್ಲಿನ ಕನ್ನಡಿಗರಿಗೆ ವಿಶೇಷವಾಗಿ 100ಕ್ಕೂ ಹೆಚ್ಚು ವಿಧವೆಯರಿಗೆ ಆರ್ಥಿಕ ಶಕ್ತಿ ತುಂಬುವ ಮೂಲಕ ಪವಿತ್ರ ಕೆಲಸದಲ್ಲಿ ತೊಡಗಿದ್ದು ಖುಷಿ ತಂದಿದೆ. ಪ್ರತಿಭಾವಂತ ಕನ್ನಡಿಗರ ಮಕ್ಕಳಿಗೆ ನೆರವು ನೀಡುವ ವಿಷಯವನ್ನು ಕೇಳಿದ್ದೇನೆ.
ನಾನು ಸಹ ನಮ್ಮ ಅವ್ವ ಸೇವಾ ಟ್ರಸ್ಟ್ ಪರವಾಗಿ ರೂ 5 ಲಕ್ಷ ಧನ ಸಹಾಯ ದತ್ತಿ ನಿಧಿಗಾಗಿ ನೀಡುತಿದ್ದೇನೆ, ಅದರಿಂದ ಬರುವ ಬಡ್ಡಿ ಹಣಜiಟಿಜ ಇಲ್ಲಿನ ಕನ್ನಡಿಗರ ಬಡಮಕ್ಕಳಿಗೆ ನೆರವು ನೀಡುವ ಮೂಲಕ ಅಂಧೇರಿ ಕರ್ನಾಟಕ ಸಂಘದವರ ಕೈಂಕರ್ಯಕ್ಕೆ ನಾನು ಕೈ ಜೋಡಿಸುವೆ ಎಂದು ಹೇಳಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷ. ಡಾ. ಸಿ. ಸೋಮಶೇಖರ್, ಸಹಕಾರಿ ಧುರೀಣ ಡಾ. ರಾಜೇಂದ್ರ ಕುಮಾರ್, ವಿದ್ವಾಂಸ ಹಾಗು ಚಿಂತಕ ಪೆÇ್ರಫೆಸರ್ ರಾಧಾಕೃಷ್ಣ, ಗ್ರಂಥಾಲಯ ಇಲಾಖೆ ನಿರ್ದೇಶಕ. ಡಾ. ಸತೀಶ್ ಕುಮಾರ್ ಹೊಸಮನಿ, ಅಮರನಾಥ್ ಶೆಟ್ಟಿ ತುಮಕೂರು ಇವರುಗಳಿಗೆ ಗೌರವ ಪ್ರಶಸ್ತಿ ಪ್ರದಾನಿಸಲಾಯಿತು.
ಗಣ್ಯರಾದ ಶಿವಗಂಗಾ ಮೇಗಣ ಗವಿಮಠದ ಶಾಂತವೀರ ಸ್ವಾಮೀಜಿ,
ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಸ್ಥಾಪಕ ಅಧ್ಯಕ್ಷ ಕೆ ಪಿ ಮಂಜುನಾಥ್ ಸಾಗರ್, ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ವಿಶ್ವನಾಥ್ ಹಿರೇಮಠ್ ಮತ್ತು ನವೀನ್ ಗೌಡ ಮುಂತಾದವರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಮತ್ತು ಸಾಹಿತ್ಯ ಕಾರ್ಯಕ್ರಮದ ಅಂಗವಾಗಿ ಅಂತರಾಷ್ಟ್ರೀಯ ಖ್ಯಾತಿಯ ಜಾನಪದ ಕಲಾವಿದ ಗೋ ನಾ ಸ್ವಾಮಿ ತಂಡದಿಂದ ಜಾನಪದ ಸಂಗೀತ, ಕವಿಗೋಷ್ಠಿ, ವಿವಿಧ ಮಹಿಳಾ ಸಂಘಟನೆಗಳಿಂದ ನಡೆದ ನೃತ್ಯ ವೈವಿಧ್ಯ ಮನಸೂರೆಗೊಂಡವು.
ಕರ್ನಾಟಕ ಸಂಘ ಅಂಧೇರಿ ಅಧ್ಯಕ್ಷ ಅಧ್ಯಕ್ಷ ಭಾಸ್ಕರ ಸುವರ್ಣ ಸಸಿ ಹಿತ್ಲು, ಪದಾಧಿಕಾರಿಗಳಾದ ಉದಯ ಕೇರಗಲ್ಲ, ಜಗಜೀವನ ಪೂಜಾರಿ, ಸತೀಶ ಕಲಕೇರಾ, ಕೃಷ್ಣ ಶೆಟ್ಟಿ, ರವೀಂದ್ರ ಶೆಟ್ಟಿ ,ದಿನೇಶ ಆರ್. ಕೆ. ಸೇರಿದಂತೆ ಮುಂತಾದವರಿದ್ದರು