ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕೆನ್ನುವದನ್ನು ಅರಿತರೆ ಸಮಾಜಕ್ಕೆ ಮಾದರಿಃ ಫಯಾಜ ಕಲಾದಗಿ

ವಿಜಯಪುರ, ಸೆ.8-ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕೆನ್ನುವು ಪ್ರತಿಯೊಬ್ಬ ಮನುಷ್ಯ ಅರಿತುಕೊಂಡರೇ ಸಮಾಜಕ್ಕೆ ಮಾದರಿಯಾಗುತ್ತಾನೆಂದು ಫಯಾಜ ಕಲಾದಗಿ ಹೇಳಿದರು.
ಅಂಬರಖಾನೆ ಸಮಾಜ ಸೇವಾ ಸಂಸ್ಥೆಯಿಂದ ನಗರದ ಝಂಡಾ ಕಟ್ಟಿ ಬಳಿ ಶಿಕ್ಷಕರ ದಿನಾಚಾರಣೆ ನಿಮಿತ್ಯವಾಗಿ ಗಣನೀಯವಾಗಿ ಶಿಕ್ಷಣದಲ್ಲಿ ಸೇವೆ ಗೈದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.
ಮನುಷ್ಯನಿಗೆ ಜನನಗೊಂಡ ಮೇಲೆ ತಾಯಿ ಗುರುವಾಗುತ್ತಾಳೆ ಮನುಷ್ಯನ ಜೀವನದುದ್ದುಕ್ಕೂ ಪ್ರತಿಯೊಬ್ಬ ಶಿಕ್ಷಕ ಬೇಕು. ಅಂದಾಗ ಸಮಾಜವು ಸುಂದರವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಅಬ್ಬುಬಕ್ಕರ ಅಂಬರಖಾನೆ ಅಧ್ಯಕ್ಷತೆ ವಹಿಸಿದ್ದರು. ಧರ್ಮಗುರುಗಳಾದ ಗಯಾಸಪಾಶಾ ಜಾಹಾಂಗೀರದಾರ ಸಾನಿಧ್ಯವಹಿಸಿದ್ದರು. ಇಬ್ರಾಹಿಂಸಾಬ ದರ್ಗಾ, ನಾಗಠಾಣ ಚಾಚಾ, ದಸ್ತಗೀರ ಸಾಲೋಟಗಿ, ಬಸವರಾಜ ಬಿ.ಕೆ. ಎ.ಎ. ಜಾಹಗೀರದಾರ, ಯೂನಸ ಅಂಬರಖಾನೆ, ಮಹ್ಮದಅಲಿ ಅಂಬರಖಾನೆ, ಅಲಿಶಾನ ಅಂಬರಖಾನೆ, ಸಮೀರ ಪಠಾಣ, ಮುಸ್ತಪ್ಪ ಅಂಬರಖಾನೆ, ಮಹಿಬೂಬ ದರ್ಗಾ, ಇಸಾಕ ದರ್ಗಾ, ಅಂಜುಮ ಕಾಠೆವಾಡೆ, ನಬಿಲಾಲ ಮಕಾನದಾರ, ಅಲ್ಲಾಭಕ್ಷ ಮನಿಯಾರ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಅಲಹಸನಾಥ ಶಾಲೆಯ ಮುಖ್ಯಗುರುಗಳಾದ ಅಬ್ದುಲನಬಿ ಜಮಾದಾರ, ಸಿಕ್ಯಾಬ್ ಹೈಸ್ಕೂಲ್ ತಿಕೋಟಾದ ಮುಖ್ಯ ಗುರುಗಳಾದ ಸಿರಾಜ ಜಮಖಂಡಿ, ಗುರುಗಳಾದ ಮುಜ್ಜಮ್ಮೀನ ಮುಲ್ಲಾ, ಯೂಸೂಪ್ ಇನಾಮದಾರ, ಪರೀಧ ಹರಿಯಾಲ, ಇಸ್ಮಾಯಿಲ್ ಉಕ್ಕಲಿ, ಜಾಕೀರ ಇಂಡಿಕರ, ಮೋಮಿನ್ ಬಿಜಾಪುರ, ನಿಜಾಮ್ ಅತ್ತಾರ, ಶಹಬಾಜ್ ಭಕ್ಷಿ, ಅದಿಬ ಇನಾಮದಾರ, ಮಸಕೂದ ಮುಲ್ಲಾ, ಮೈನುದ್ದೀನ ಬೂದಿಹಾಳ, ಇಲಿಯಾಸ ನಾಯಕ ಇದ್ದರು.