ಮುಂದುವರೆದ ಹೋರಾಟ: ಶಿರಶ್ಯಾಡ ಶ್ರೀಗಳ ಬೆಂಬಲ

ಇಂಡಿ:ಸೆ.24: ತಾಲೂಕು ಸಮಗ್ರ ನೀರಾವರಿ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಪಟ್ಟಣದ ಮಿನಿ ವಿಧಾನಸೌಧ ಎದುರು ನಡೆಯುತ್ತಿರುವ ಧರಣಿ 23 ನೇ ದಿನಕ್ಕೆ ಮುಂದುವರೆದಿದೆ.
ಸ್ಥಳಕ್ಕೆ ಭೇಟಿ ನೀಡಿ ತಮ್ಮ ಬೆಂಬಲ ವ್ಯಕ್ತ ಪಡಿಸಿ ಮಾತನಾಡಿದ ಶಿರಶ್ಯಾಡದ ಪೂಜ್ಯ ಶ್ರೀ ಅಭಿನವ ಮುರಗೇಂದ್ರ ಶಿವಾಚಾರ್ಯರು ಪ್ರಕೃತಿ ಎಲ್ಲರಿಗೂ ಚಳಿಗಾಲ, ಮಳೆಗಾಲ ಮತ್ತು ಬೇಸಿಗೆ ಕಾಲ ಕೊಟ್ಟರೆ ನಮಗೆ ಬರಗಾಲ ಎಂಬ ಶಾಶ್ವತ ಹಣೆ ಪಟ್ಟಿ ಕೊಟ್ಟಿದೆ. ಅದರಿಂದ ಮುಕ್ತರಾಗಬೇಕಾದರೆ ಹೊಲಗಳಿಗೆ ನೀರಾವರಿ ಯೋಜನೆ ಬೇಕೇ ಬೇಕು. ನೀರಿಗಾಗಿ ನಡೆಯುತ್ತಿರುವ ಹೋರಾಟ ನ್ಯಾಯಯುತವಾಗಿದೆ ಎಂದರು.
ಸರಕಾರದ ಮೇಲೆ ಒತ್ತಡ ತರಲು ಹೋರಾಟಗಾರರು ಸಂಘಟಿತ ಹೋರಾಟದ ಅನಿವಾರ್ಯತೆಯನ್ನು ಮನಗಾಣಬೇಕು. ಶಾಸ್ವತ ನೀರಾವರಿಯ ಯೋಜನೆ ಅನುಷ್ಠಾನದ ಜೊತೆಗೆ ಕೆರೆ ಕಟ್ಟೆಗಳ ಪುನಚ್ಛೇತನ, ಅಂತರ್ಜಲ ಮರಪೂರಣಕ್ಕೆ ಪೂರಕವಾದ ಕಾರ್ಯಕ್ರಮಗಳ ಜಾರಿಗೂ ಹೋರಾಟ ನಡೆಸಬೇಕು. ಹನಿ ಗೂಡಿದರೆ ಹಳ್ಳ, ತೆನೆ ಗೂಡಿದರೆ ಬಳ್ಳ ಎನ್ನುವಂತೆ ಸಂಘಟಿಕ ಹೋರಾಟ ಮಾಡಿದರೆ ಸರಕಾರ ಯೋಜನೆ ಕಾರ್ಯಗತಕ್ಕೆ ಒತ್ತು ನೀಡ ಬಹುದೆನ್ನುವ ಆಶಾಭಾವನೆ ಇದೆ ಎಂದರು.
ಸರಕಾರ ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಯಶಸ್ವಿಯಾಗದು. ನೀರಿನ ಸದ್ಭಳಕೆಯಾಗಬೇಕು. ಕೆಲ ವರ್ಷಗಳ ಹಿಂದೆ ವಿಜಯಪೂರ ಜಿಲ್ಲೆಗೆ 371 ಸ್ಥಾನಮಾನ ನೀಡಬೇಕು ಎಂದು ಹೋರಾಟವಾಗಿತ್ತು. ಆದರೆ ಯಶಸ್ವಿಯಾಗಲಿಲ್ಲ. ನಾವು ಹೊಲಗಳಿಗೆ ನೀರು ಪಡೆಯಲಾದರೂ ಹೋರಾಟ ಶಾಂತಿಯುತವಾಗಿ ಯಶಸ್ವಿಗೊಳಿಸಬೇಕಾಗಿದೆ ಎಂದರು.ಜೆ.ಡಿ. ಎಸ್ ಮುಖಂಡ ಬಿ.ಡಿ.ಪಾಟೀಲ ಹಂಜಗಿ, ಶ್ರೀಶೈಲಗೌಡ ಪಾಟಿಲ, ಮಂಜುನಾಥ ಕಾಮಗೊಂಡ ಮಾತನಾಡಿದರು.
ಸಿದ್ದು ಡಂಗಾ, ಮಹಿಬೂಬ ಬೇವನೂರ, ಬಸವರಾಜ ಹಂಜಗಿ, ವಿಜಯಕುಮಾರ ಭೋಸಲೆ,
ರಾಜು ಮುಲ್ಲಾ, ಮಹಮ್ಮದ ಬಾಗವಾನ, ನಿಯಾಝ ಅಗರಖೇಡ, ಇರ್ಪಾನ ಅಗರಖೇಡ, ತಮ್ಮನಗೌಡ ಬಿರಾದಾರ, ಮಾಳು ಮ್ಯಾಕೇರಿ, ತಾನಾಜಿ ಪವಾರ, ಮಹೇಶ ಬಸೆ, ರೇವಣಸಿದ್ಧ ಹುಸುರ, ಬಾಬು ಮೇತ್ರಿ ಮತ್ತಿತರಿದ್ದರು.