ಮುಂದುವರೆದ ಹೋರಾಟ: ಇಂಡಿ ಬಂದಗೆ ಕರೆ

ಇಂಡಿ:ಸೆ.25: ತಾಲೂಕು ಸಮಗ್ರ ನೀರಾವರಿ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಪಟ್ಟಣದ ಮಿನಿ ವಿಧಾನಸೌಧ ಎದುರು ನಡೆಯುತ್ತಿರುವ ಧರಣಿ 23 ನೇ ದಿನಕ್ಕೆ ಮುಂದುವರೆದಿದೆ.
ಇಂದು ಹೋರಾಟ ಸ್ಥಳಕ್ಕೆ ಜೆ.ಡಿ.ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದನಗೌಡ ಪಾಟಿಲ, ಸಿಂದಗಿ ತಾಲೂಕಿನ ಜೆ.ಡಿ.ಎಸ್ ಅಧ್ಯಕ್ಷ ಮಲ್ಲಣ್ಣಾ ಬಿದರಿ, ಅರವಿಂದ ಹಂಗರಗಿ
ಭೇಟಿ ನೀಡಿ ತಮ್ಮ ಬೆಂಬಲ ವ್ಯಕ್ತ ಪಡಿಸಿ ಮಾತನಾಡಿದರು.
ಮುಖಂಡ ಬಿ.ಡಿ.ಪಾಟೀಲ ಹಂಜಗಿ ಮಾತನಾಡಿ ಶನಿವಾರ ಸ.25 ರಂದು ಇಂಡಿ ಬಂದಗೆ ಕರೆ ನೀಡಿದೆ. ಅವಶ್ಯಕ ವಸ್ತುಗಳು, ಆಸ್ಪತ್ರೆ ಮತ್ತು ಔಷದ ಮಳಿಗೆ ಸೇರಿದಂತೆ ರಾಣಿ ಚೆನ್ನಮ್ಮ ವಿವಿ ಪರೀಕ್ಷೆ ಹೊರತು ಪಡಿಸಿ ಬಂದಗೆ ಕರೆ ನೀಡಲಾಗಿದೆ.
ಬಂದ ಕರೆಗೆ ಇಂಡಿಯ ವಕೀಲರ ಸಂಘ, ಸಂಘದ ಅಧ್ಯಕ್ಷ ಪಿ.ಬಿ.ಪಾಟೀಲ,ಕಾರ್ಯದರ್ಶಿ ಎಸ್.ಆರ್.ಬಿರಾದಾರ, ಸದಸ್ಯರಾದ ಎಸ್. ಬಿ.ಬೂದಿಹಾಳ,ಎಸ್.ಕೆ.ನಾಡಪುರೋಹಿತ್ ಮತ್ತಿತರರು,ರಿಪಬ್ಲಿಕ ಪಾರ್ಟಿ ಆಫ್ ಇಂಡಿಯಾ, ರಾಜ್ಯ ರೈತ ಸಂಘ, ಅಖಂಡ ಕರ್ನಾಟಕ ರೈತ ಸಂಘ, ತಾಲೂಕಾ ಅಂಗವೀಕಲರ ಕ್ಷೇಮಾಭಿವೃದ್ಧಿ ಸಂಘ, ಬಿಸಿಯೂಟ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಕನಕಸೇನೆ, ಸಂಗೋಳ್ಳಿ ರಾಯಣ್ಣ ಸೇನೆ, ಎಸ್.ಎಫ್.ಐ ವಿದ್ಯಾರ್ಥಿ ಘಟಕ, ಟಂ.ಟಂ. ಚಾಲಕರ ಸಂಘ, ಕೆ.ಎಸ್.ಆರ್.ಟಿ.ಸಿ. ನೌಕರರ ಸಂಘ, ಗ್ರಾ.ಪಂ ನೌಕರರ ಸಂಘ, ಜನವಾದಿ ಮಹಿಳಾ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ,ನಿವೃತ್ ಯೋಧರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಅಧ್ಯಕ್ಷ ಬಾಳು ಮುಳಜಿ, ಪ್ರವೀಣ ಶೆಟ್ಟಿ ಬಣದ ಕರವೇ ಯ ರಾಜ್ಯ ಸಂಚಾಲಕ ಶ್ರೀಶೈಲ ಮುಳಜಿ, ತಾ.ಪಂ ಮಾಜಿ ಸದಸ್ಯ ಬಿಜೆಪಿಯ ಬಾಪುರಾಯ ಲೋಣಿ, ದ.ಸಂ.ಸ ನಾಗೇಶ ತಳಕೇರಿ, ವಿನಾಯಕ ಗುಣಸಾಗರ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ತಮ್ಮ ಬೆಂಬಲ ಸೂಚಿಸಿವೆ ಎಂದು ಬಿ.ಡಿ.ಪಾಟೀಲ ತಿಳಿಸಿದ್ದಾರೆ.
ಮಂಜುನಾಥ ಕಾಮಗೊಂಡ ಮಾತನಾಡಿ ಆಲಮಟ್ಟಿ ಆಣೆಕಟ್ಟು ಎತ್ತರ 524 ಮೀ ಆಗಬೇಕು. ಕೃಷ್ಣಾ ಯೋಜನೆಯ ಮಹಾತ್ಕಾಂಕ್ಷೆಯ ಗುತ್ತಿ ಬಸವಣ್ಣ, ಚಿಮ್ಮಲಗಿ,ಶ್ರೀ ರೇವಣಸಿದ್ದೇಶ್ವರ ಮತ್ತು ಮುಳವಾಡ ಏತ ನೀರಾವರಿಯ ಕಾಲುವೆಗಳಲ್ಲಿ ನೀರು ಹರಿಸಬೇಕು ಎಂಬ ಬೇಡಿಕೆ ಮತ್ತು ಸಚಿವರು ಹೋರಾಟ ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡಬೇಕು ಬೇಡಿಕೆ ಮಾತ್ರ ಹೋರಾಟ ಸಾರ್ವಜನಿಕರಿಗೆ ತೊಂದರೆ ಕೊಡಲು ಅಲ್ಲ ಎಂದು ಹೇಳಿದರು.ರಾಣಿ ಚೆನ್ನಮ್ಮ ವಿವಿ ಪರೀಕ್ಷೆ ಸೇರಿದಂತೆ ಔಷದ, ಆಸ್ಪತ್ರೆಗಳಿಗೆ ತೊಂದರೆ ನೀಡುವದಿಲ್ಲ ಎಂದರು.
ಹೋರಾಟದಲ್ಲಿ ಮಹಿಬೂಬ ಬೇವನೂರ, ಬಸವರಾಜ ಹಂಜಗಿ, ರಾಜು ಮುಲ್ಲಾ, ಮಹಮ್ಮದ ಬಾಗವಾನ, ನಿಯಾಝ ಅಗರಖೇಡ, ಇರ್ಪಾನ ಅಗರಖೇಡ, ಮಾಳು ಮ್ಯಾಕೇರಿ, ರೇವಣಸಿದ್ಧ ಹುಸುರ, ಬಾಬು ಮೇತ್ರಿ ಮತ್ತಿತರಿದ್ದರು.