ಮುಂದುವರೆದ ಸಾರಿಗೆ ಮುಷ್ಕರ

ಗಂಗಾವತಿ ಏ 10 : ರಾಜ್ಯ ರಸ್ತೆ ಸಾರಿಗೆ ೪ ನಿಗಮಗಳ ನೌಕರರು ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಪರಿಷ್ಕರಣೆ ಮಾಡಬೇಕೆಂದು ಬುಧವಾರದಿಂದ ಮುಷ್ಕರ ಆರಂಭಿಸಿದ್ದಾರೆ.ಆದರೆ ರಾಜ್ಯ ಸರ್ಕಾರ ಕರ್ತವ್ಯಕ್ಕೆ ಹಾಜರಾಗದಿದ್ದರೆ ಅಗತ್ಯ ಸೇವಾ ನಿರ್ವಹಣಾ ಕಾಯ್ದೆ( ಎಸ್ಮಾ) ಜಾರಿಗೆ ತರುತ್ತೇವೆ ಎಂದು ಎಚ್ಚರಿಕೆ ನೀಡಿದೆ,ಸಾರಿಗೆ ಸಂಸ್ಥೆಗಳ ತರಬೇತಿ ಅವಧಿಯಲ್ಲಿರುವ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗದಿದ್ದರೆ ಕೆಲಸದಿಂದ ವಜಾಗೊಳಿಸುವ ಎಚ್ಚರಿಕೆ ನೀಡಿದೆ, ಮುಷ್ಕರ ನಿರತ ನೌಕರರ ಮೇಲೆ ದೂರು ದಾಖಲಿಸಲಾಗಿದೆ ಕರ್ತವ್ಯಲೋಪದಿಂದ ಅಮಾನತಿಗೊಳಗಾದ ನೌಕರನಿಗೆ ಅಮಾನತು ರದ್ದು ಮಾಡಿ ಸನ್ಮಾನಿಸಿ ಕರ್ತವ್ಯಕ್ಕೆ ನಿಯೋಜಿ ಸಿರುವುದು ಸರಕಾರದ ಮನಸ್ಥಿತಿ ಹೇಗಿದೆ ಎನ್ನುವುದನ್ನು ಸಾಬೀತುಪಡಿಸಿದೆ. ಮುಷ್ಕರ ನಿರತ ನೌಕರರ ಜೊತೆ ಮಾತುಕತೆ ನಡೆಸುವ ಉತ್ಸುಕತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗಿಲ್ಲ, ಜವಾಬ್ದಾರಿಯುತ ಸ್ಥಾನದಲ್ಲಿರುವ ಮಂತ್ರಿಗಳು ಮತ್ತು ಶಾಸಕರು ಭಿನ್ನ ವಿಭಿನ್ನ ಹೇಳಿಕೆಗಳನ್ನು ನೀಡುತ್ತಿರುವುದು ವಿಷಾದನೀಯ. ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಿ ರುವುದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಬಹಳ ತೊಂದರೆಯಾಗಿದೆ.ಚುನಾವಣೆಗಳು ಬಂದಾಗ ರಾಜ್ಯ ಸರ್ಕಾರ ಮತದಾರರ ಓಲೈಕೆಗಾಗಿ ನಾನಾ ಯೋಜನೆಗಳನ್ನು ಮತ್ತು ಅನುದಾನವನ್ನು ಘೋಷಣೆ ಮಾಡುತ್ತದೆ ಬದಲಾಗಿ ಸರ್ಕಾರಿ ನೌಕರರ ಸಮಸ್ಯೆಗೆ ಸ್ಪಂದಿಸಬೇಕು. ನೌಕರರನ್ನು ಸಂಪೂರ್ಣ ವಜಾಮಾಡಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಹುನ್ನಾರವನ್ನು ನಡೆಸಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ವಿಶ್ವನಾಥ್ ಮಾಲಿ ಪಾಟೀಲ್ ರಾಜ್ಯ ಸರ್ಕಾರದ ನೀತಿಯನ್ನು ಖಂಡಿಸಿ ದ್ದಾರೆ.