ಮುಂದುವರೆದ ರೈತರ ಪ್ರತಿಭಟನೆ

ಶಿರಹಟ್ಟಿ,ಸೆ.17: ಬಗರಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಬೇಕು. ಅರಣ್ಯ ಜಮೀನಿನಲ್ಲಿ ಸಾಗುವಳಿ ಮಾಡುತತಿರುವ ರೈತರಿಗೆ ಅರಣ್ಯ ಅಧಿಕಾರಿಗಳು ನೀಡುತ್ತಿರುವ ಕಿರಕುಳವನ್ನು ತಪ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ನಡೆಸುತ್ತಿರುವ ಅನಿರ್ಧಿಷ್ಟ ಪ್ರತಿಭಟನಾ ಸತ್ಯಾಗ್ರಹ ಇಂದು ಸತತ ನಾಲ್ನನೇ ಕಾಲಿಟ್ಟಿದೆ.
ಬಗರಹುಕುಂ ಸಾಗುವಳಿದಾರರ ರೈತ ಮುಖಂಡ ಎನ್.ಟಿ ಪೂಜಾರ ಮಾತನಾಡಿ, ನಮ್ಮ ನ್ಯಾಯಯುತ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳು ಈಡೇರಿಸುವರೆಗೂ ಪ್ರತಿಭಟನಾ ಸ್ಥಳದಿಂದ ಕದಲುವದಿಲ್ಲ. ನಮ್ಮ ಜೀವ ಹೋದರೂ ಸರಿ. ಹ್ಕಕುಪತ್ರ ನೀಡುವವರೆಗೂ ನಮ್ಮ ನಿರ್ಧಾರ ಅಚಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾಧಿಕಾರಿಗಳು ದಿ. 16 ರಂದು ಚರ್ಚೇ ಮಾಡುವದಾಗಿ ಭರವಸೆ ನೀಡಿದ್ದಾರೆ. ಅವರ ಮೇಲೆ ನಮಗೆ ನಂಬಿಕೆಯಿದೆ. ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸುವ ಆಶಾಭಾವನೆ ನಮಗಿದೆ. ಅಲ್ಲಿಯವರೆಗೂ ನಾವು ಯಾವದೇ ನಿರ್ಧಾರವನ್ನು ತಗೆದುಕೊಳ್ಳುವದಿಲ್ಲ. ಹಲವು ದಶಕಗಳ ಸಮಸ್ಯೆಗೆ ಜಿಲ್ಲಾಧಿಕಾರಿಗಳು ತಕ್ಷಣ ಸ್ಪಂದಿಸಬೇಕು ಎಂದು ಹೇಳಿದರು
ಬಂಜಾರ ಸಮಾಜದ ತಾಲೂಕ ಅಧ್ಯಕ್ಷ ಶಿವಣ್ಣ ಅಂಗಡಿ, ಪರಮೇಶ ಲಮಾಣಿ, ದೇವಪ್ಪ ಲಮಾಣಿ, ಈರಣ್ಣ ಚಹ್ವಾಣ, ಶ್ರೀನಿವಾಸ ಬಾರಬರ, ನಾಮದೇವ ಮಾಂಡ್ರೆ, ಹನುಮಂತ ತಳವಾರ ಸೇರಿ ಅನೇಕರು ಇದ್ದರು.