ಮುಂದುವರೆದ ದಿಶಾ ಸಭೆ:ಬೆಳೆ ವಿಮೆ ಪರಿಹಾರಕ್ಕಾಗಿ ಮಧ್ಯಂತರ ಪರಿಹಾರ ನೀಡಿದೆ:ಸಂಸದ ಡಾ. ಉಮೇಶ ಜಾಧವ್

ಕಲಬುರಗಿ:ಫೆ.12: ಕಲಬುರಗಿ ಜಿಲ್ಲೆಗೆ ಮೊಟ್ಟ ಮೊದಲ ಬಾರಿಗೆ ರೂ 100 ಕೋಟಿ ಮಧ್ಯಂತರ ಬೆಳೆ ವಿಮೆ ಪರಿಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದು, ಹೆಸರು, ಉದ್ದು ಸೋಯಾಬೀನ್ ಸೇರಿದಂತೆ ಹೀಗೆ ಒಟ್ಟಾರೆ ರೂ. 98.15 ಕೋಟಿ ರೂ. ಪರಿಹಾರ 199940 ರೈತರ ಬ್ಯಾಂಕ್ ಖಾತೆಗೆ ಜಮೆಯಾಗಿರುತ್ತದೆ ಸಂಸದ ಡಾ.ಉಮೇಶ ಜಾಧವ ಸಭೆಯಲ್ಲಿ ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮುಂದುವರೆ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿ ಇಲಾಖೆ ಸಂಬಂಧಿಸಿದಂತೆ ಮಾಹಿತಿ ರೈತರಿಗೆ ಸಿಗುವಂತೆ ಸೌಲಭ್ಯ ತುರ್ತಾಗಿ ನೀಡಬೇಕು. ಅವರು ರೈತರ ಬ್ಯಾಂಕ ಖಾತೆಗೆ ಹಣ ಜಮೆಯಾಗಬೇಕೆಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸಮದ್ದ್ ಪಟೇಲ್ ಅವರು ಮಾತನಾಡಿ, ಈಗಾಗಲೆ ಬರಪರಿಸ್ಥಿತಿಯ ಹಿನ್ನಲೆಯಲ್ಲಿ ಸ್ಥಳೀಯ ವಿಕೋಪದಡಿಯಲ್ಲಿ ದೂರನ್ನು ಸಲ್ಲಿಸಿದ ರೈತರಿಗೆ. 47.173 ರೂ. 4.98 ಕೋಟಿ ಪರಿಹಾರ ರೈತರ ಜಮೆ ಮಾಡಲಾಗಿದೆ.
ಬೆಳೆ ಸ್ಥಿರೀಕರಣ ಯೋಜನೆಯಡಿ ತೂಗರಿ ಖರೀದಿ ಕೇಂದ್ರ ಇದೆ ಮೊದಲ ಬಾರಿಗೆ ಕೇಂದ್ರ ಸರ್ಕಾರದ ಬೆಲೆ ಸ್ಥಿರೀಕರಣ ಎಮ.ಎಸ್.ಪಿ. ನಿಧಿ ಯೋಜನೆ ಅಡಿಯಲ್ಲಿ ಮಾರುಕಟ್ಟೆ ದರಲ್ಲಿ ಕರ್ನಾಟಕ ರಾಜ್ಯದ ಸಹಾಕರ ಮಾರಾಟ ಮಹಾ ಮಂಡಳಿ ಕಲಬುರಗಿ ಅಢಿಯಲ್ಲಿ 127 ಹಾಗೂ ಕರ್ನಾಟಕ ರಾಜ್ಯ ದ್ವೀದಳ ಧಾನ್ಯ ಅಭಿವೃದ್ಧಿ ಮಂಡಳಿ ಕಲಬುರಗಿ ಅಢಿಯಲ್ಲಿ 62 ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಜಿಲ್ಲಾವರುಗೆ ಹೋಲಿಸಿ ಇದರಲ್ಲಿ ಯಾವ ದರವು ಹೆಚ್ಚಾಗಿರುತ್ತದೆಯೋ ಆ ದರದಲ್ಲಿ ರೈತರಿಂದ ಖರೀದಿಸಲಾಗುವುದು ಎಂದರು.
ಶೀತಲ ಶೇಖರಣ ಘಟಕ ಕಲಬುರಗಿ ಜಿಲ್ಲೆಯ ಕೋಟನೂರಿ (ಡಿ) ಯಲ್ಲಿ ಆರ್.ಐ.ಡಿ.ಎಫ್. ಯೋಜನೆಯಡಿ ರೂ. 9.15 ಕೋಟಿ ಅನುದಾನದಡಿಯಲ್ಲಿ 2500 ಎಂ.ಟಿ. ಸಾಮಥ್ರ್ಯವುಳ್ಳ ಬೃಹತ ಶೀತಲ ಶೇಖರಣಾ ಘಟಕವು 3 ತಿಂಗಳಿನೊಳಗಾಗಿ ಮುಕ್ತಾಯಗೊಳ್ಳುತ್ತದೆ ಎಂದರು.
ಯಾರದ್ದೇ ಹಸ್ತಕ್ಷೇಪ ಹಾಗೂ ಪ್ರಭಾವಕ್ಕೆ ಒಳಗಾಗದೇ ಪಾರದರ್ಶಕ ದಿಂದ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಂತೆ ಸಂಸದ ಡಾ. ಉಮೇಶ ಜಾಧವ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ತಟಸ್ಥವಾಗಿ ಕೆಲಸ ಮಾಡಿದರೆ ಎಲ್ಲ ಯೋಜನೆಗಳು ಸಮರ್ಪಕವಾಗಿ ಜಾರಿಯಾಗಲು ಸಾಧ್ಯವಾಗುತ್ತವೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಹಲವಾರು ಯೋಜನೆಗಳಿದ್ದು, ಅವುಗಳ ಕುರಿತಾಗಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಬರೀ ಕಾಗದಲ್ಲೇ ಯೋಜನೆಗಳನ್ನು ಮುಗಿಸಬೇಡಿ, ಕೊನೆ ಹಂತದ ಫಲಾನುಭವಿಗಳಿಗೆ ತಲುಪಿಸಿ ಎಂದು ಅಧಿಕಾರಿಗಳಿಗೆ ಖಡಕ್ ಆಗಿ ಎಚ್ಚರಿಕೆ ನೀಡಿದರು.
ವಿಮಾನ ನಿಲ್ದಾಣದಲ್ಲಿಮೂಲ ಸೌಕರ್ಯ ಕೈಗೊಳ್ಳಿ ಇಲ್ಲಿನ ಕಲಬುರಗಿ ವಿಮಾನ ನಿಲ್ದಾಣ ದಲ್ಲಿ ಬರುವವರಿಗೆ ಹೊರಗಡೆ ಶೌಚಾಲಯ ವ್ಯವಸ್ಥೆ ಇಲ್ಲ. ಜತೆಗೆ ಟೀ ಸಹ ಕುಡಿಯುವ ಉಪಹಾರ ಗೃಹ ಇಲ್ಲದಿರುವುದು ತೊಂದರೆಯಾಗುತ್ತಿದೆ. ಹೀಗಾಗಿ ಮೂಲ ಸೌಕರ್ಯಗಳ ಗಮನ ಹರಿಸಿ ಎಂದು ಇಲ್ಲಿನ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಸಂಸದರು ಸೂಚನೆ ನೀಡಿದರು.
ರಾಷ್ಟ್ರೀಯ ಆಹಾರ ಭದ್ರತಾ ಹಾಗೂ ಅನ್ನಭಾಗ್ಯ ಯೋಜನೆಯಡಿ ಮಂಜೂರಾದ ಅನುದಾನ 184.70 ಖರ್ಚಾದ ಅನುದಾನ 177.16 ಪ್ರತಿಶತ ಖರ್ಚಾದ ಅನುದಾನ 95.86 ಖರ್ಚಗಿರುತ್ತದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಶಾಂತಗೌಡ ಗುಣಕಿ ಸಭೆಯ ಗಮನಕ್ಕೆ ತಂದರು. ಪ್ರಧಾನ ಮಂತ್ರಿ ಉಜ್ವಲ ಯೋಜನೆ ಜಾರಿಯಿದ್ದು, ಫಲಾನುಭವಿಗಳ ಸಂಖ್ಯೆಯ ಮಾಹಿತಿ ನೀಡಿದರು.
ಪಿಕೆಪಿಎಸ್ ಬಲವರ್ಧನೆ ಗೊಳಿಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಫ್ಯಾಕ್ಸ್ ಗಳಿಗೆ ಕಂಪ್ಯೂಟರ್ ಹಾಗೂ ಇತರ ಸೌಲಭ್ಯಗಳನ್ನು ಕಲ್ಪಿಸಬೇಕು. ಇದರಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ಸಹಕಾರಿ ಕ್ಷೇತ್ರದ ಅಧಿಕಾರಿಗಳು ಹಾಗೂ ಡಿಸಿಸಿ ಬ್ಯಾಂಕ್ ನ ಅಧಿಕಾರಿಗಳಿಗೆ ಸಂಸದರು ನಿರ್ದೇಶನ ನೀಡಿದರು.
ಬಿ.ಎಸ್.ಎನ್.ಎಲ್. ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸಬೇಕು ನಾವು ಅನೇಕ ಬಿ.ಎಸ್.ಎನ್.ಎಲ್. ಟವರ್‍ಗಳನ್ನು ನಿರ್ಮಿಸಿದ್ದೇನೆ. ಸರಕಾರಿ ಹಾಸ್ಟೆಲ್‍ಗಳಿಗೆ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗಕೂಡದು ಅವರಿಗೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ನೀಡಬೇಕು. ಅನೇಕ ವಿದ್ಯಾರ್ಥಿಗಳು ನನಗೆ ಪೋನ್ ಮಾಡುತ್ತಾರೆ ನಮಗೆ ಹಾಸ್ಟೆಲ್‍ಗಳಲ್ಲಿ ಸೇರಿಸಿ ಎಂದು ಹೇಳುತ್ತಾರೆ. ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.