ಮುಂದುವರೆದ ಕೋವಿಡ್ ಜಾಗೃತಿಯ ಗೋಡೆ ಬರಹ

ಬಳ್ಳಾರಿ:ಮೇ-31-  ನಗರದ ಪ್ರಮುಖ ವೃತ್ತಗಳಲ್ಲಿ, ರಸ್ತೆ ಬದಿಯಲ್ಲಿ,  ಸ್ಥಳಗಳಲ್ಲಿ ಚಿತ್ರ ಕಲಾವಿದರಾದ ಮಲ್ಲಿಕಾರ್ಜುನ ಅಪಗುಂಡಿ, ನರಸಿಂಹಮೂರ್ತಿ, ಟ್ಯಾಟೂ ಮಂಜು, ಸುದರ್ಶನ, ನೇತೃತ್ವದಲ್ಲಿ ಹಲವಾರು ಚಿತ್ರಕಲಾವಿದರು ಮತ್ತು ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಸೇರಿ ಮಹಾಮಾರಿ ಕರೋನಾ ಬಗ್ಗೆ ಜಾಗೃತಿ ಮೂಡಿಸುವ ಚಿತ್ರಗಳನ್ನು ಗೋಡೆ ಬರಹಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಮುಂದುವರೆಸಿದ್ದಾರೆ.
ಈಗಾಗಲೇ ಘೋಷ ಆಸ್ಪತ್ರೆ, ರಾಯಲ್ ಥಿಯೇಟರ್, ಮೋತಿ ಥಿಯೇಟರ್ ಗೋಡೆಗಳಿಗೆ ಚಿತ್ರಗಳನ್ನು ಬರೆದಿದ್ದು, ಇಂದು ಒಪಿಡಿ ಗೋಡೆಗೆ ಬರಹಗಳನ್ನು ಬರೆದಿದ್ದಾರೆ.
ಹೋದ ವರ್ಷ ಇದೇ ಸಮಯದಲ್ಲಿ ಬಳ್ಳಾರಿಯ ಸುಮಾರು 12 ಪ್ರಮುಖ ರಸ್ತೆಗಳಲ್ಲಿ ಕರೋನಾ ಜಾಗೃತಿ ಮೂಡಿಸುವ ಚಿತ್ರ ಗಳನ್ನು ಬರೆದಿದ್ದರು.
ಈ ಕಾರ್ಯಕ್ರಮಕ್ಕೆ ಅಭಯ ಫೌಂಡೇಶನ್, ಸುವರ್ಣ ಕಲಾಪೋಷಕ ಸಂಘ, ಅಬ್ದುಲ್ ಆರ್ಟ್ಸ್, ಗೆಳೆಯರ ಬಳಗ, ಅಪ್ಪು ಸೇವಾ ಸಮಿತಿ, ಸ್ಮಿಯಾಕ್ ಟ್ರಸ್ಟ್ ಹಾಗೂ ಇತರ ಸಂಘ ಸಂಸ್ಥೆಗಳು ಸಹಕಾರ ನೀಡಿವೆ.
ಉಮೇಶ ಆರ್ಟ್ಸ್, ಬಾದಾಮಿ ಬಸವರಾಜ್, ದಾದಾ, ಉಗ್ರಂ ಪ್ರಭಾ,  ಯಶ್ಪಾಲ್, ಜಯಪ್ರಕಾಶ್, ಮೆಹಬೂಬ್ ಬಾಷ, ಭಾರತಿ, ಸಂಜೀವಿನಿ, ನಿಖಿತಾ, ಅಂಬಿಕಾ, ರೋಜಿ, ಅಂಕಿತ, ಅರಬಿಂದ, ರಂಜಿತ್, ಸೀನಾ, ಶಿವು,ಬಸವರಾಜ್ ಬಿಸಿಲಹಳ್ಳಿ ಮೊದಲಾದವರು ಈ ಕಾರ್ಯಕ್ರಮಕ್ಕೆ ಸಹಕರಿಸಿದ್ದಾರೆ.