
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.28: ಕಳೆದ ಮೂರು ದಿನಗಳ ಹಿಂದೆ ಬೊಂಗಾ ಬಿದ್ದು ಒಡೆದ ಹೆಚ್.ಎಲ್.ಸಿ. ಕಾಲುವೆಯ ದುರಸ್ಥಿ ಕಾರ್ಯ ಮುಂದುವರೆದಿದೆ.
ಬೊಂಗಾ ಬಿದ್ದ ಸ್ಥಳದಲ್ಲಿ ವೀಕ್ ಇದ್ದ ಮತ್ತಷ್ಟು ಪ್ರದೇಶವನ್ನು ವಿಸ್ಥರಿಸಿ, ಗರಸು ಹಾಕಿ ಕಾಲುವೆ ದಂಡೆಯನ್ನು ಪುನರ್ ರಚಿಸಲಾಗಿದೆ.
ಇದಕ್ಕೆ ಕಾಂಕ್ರೀಟ್ ಲೈನಿಂಗ್ ಕಾರಗಯ ಮಾಡಬೇಕಿದೆ. ಸ್ಥಳದಲ್ಲಿ ತುಂಗಭದ್ರ ಮಡಳಿಯ ಇಂಜಿನೀಯರ್ ಗಳಿದ್ದು ಇದ್ದು ಕಾಮಗಾರಿ ಪರಿಶೀಲನೆ ನಡೆಸಿದ್ದಾರೆ.
ಕಾಂಕ್ರೀಟ್ ಹಾಕಿ ಅದು ಒಂದಿಷ್ಟು ಡ್ರೈ ಆದ ಮೇಲೆ ನೀರು ಬಿಡಬೇಕಿದ್ದು ಬಹುತೇಕ ನಾಡಿದ್ದು ಕಾಲುವೆಗೆ ನೀರುಬಿಡುವ ಸಾಧ್ಯತೆ ಇದೆ.
ಇದರಿಂದಾಗಿ ಕಾಲುವೆಯ ಕೆಳ ಭಾಗದ ರೈತರು ನಾಟಿ ಮಾಡಿರುವ ಮೆಣಸಿನಕಾಯಿಮೊದಲಾದ ಬೆಳೆಗೆ ನೀರಿನ ಸಮಸ್ಯೆ ಉಂಟಾಗಿದ್ದು. ಕಾಮಗಾರಿ ತ್ವರಿತಗತೊಯಲ್ಲಿ ಮುಗಿದಷ್ಟು ರೈತರ ಆತಂಕದೂರ ಆಗಲಿದೆ.