ಮುಂದುವರೆದ ಕಾಂಗ್ರೆಸ್ ಮುಖಂಡರ ಹೋರಾಟಅಹೋರಾತ್ರಿ ಧರಣಿಯಲ್ಲಿ ಮಹಿಳೆಯರು

ಧಾರವಾಡ,ಜ11 : ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರವಿವಾರದಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಬುಧವಾರ ಕೂಡ ಮುಂದುವರೆದಿದೆ.
ಜಲಮಂಡಳಿ ಗುತ್ತಿಗೆ ಕಾರ್ಮಿಕರ ವೇತನ ಬಿಡುಗಡೆ ಹಾಗೂ ಕವಿವಿ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸದ ಸರಕಾರದ ಕ್ರಮವನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹದಲ್ಲಿ ಕಾಂಗ್ರೆಸ್ ಮುಖಂಡರಾದ ಕೀರ್ತಿ ಮೋರೆ, ಬಸವರಾಜ ಮಲಕಾರಿ, ವಸಂತ ಅರ್ಕಾಚಾರ, ಸತೀಶ ತುರಮರಿ, ಆನಂದ ಸಿಂಗನಾಥ, ತಾನಾಜಿ ಪುಂಡೆ. ಮಹೇಶ ಹುಲ್ಲೆನ್ನವರ, ಜಲಮಂಡಳಿ ನೌಕರರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಧರಣಿಗೆ ಸರಕಾರ ಸ್ಪಂದಿಸದ ಹಿನ್ನಲೆಯಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಮುಖಂಡರು ತೀರ್ಮಾನಿಸಿದ್ದಾರೆ. ಇದರ ಭಾಗವಾಗಿ ಇಂದು ಅಹೋರಾತ್ರಿ ಧರಣಿಯಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ಮುಖಂಡರು, ಕಾರ್ಯಕರ್ತರು, ನೌಕರರು ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ದೀಪಕ ಚಿಂಚೋರೆ ತಿಳಿಸಿದ್ದಾರೆ.