ಮುಂದುವರೆದ ಅನಧಿಕೃತ ಪಂಪ್ ಸೆಟ್ ತೆರವು ಕಾರ್ಯಾಚರಣೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಫೆ.೨೫; ಭದ್ರಾ ಬಲದಂಡೆ ಕಾಲುವೆ ವ್ಯಾಪ್ತಿಯ ಕೊನೆ ಭಾಗದ ರೈತರಿಗೆ ನೀರು ಕೊಡುವ ಉದ್ದೇಶದಿಂದ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಅವರ ಆದೇಶದ ಮೇರೆಗೆ ಇಂದೂ ಕೂಡ ನಲ್ಲೂರು ವ್ಯಾಪ್ತಿಯ ಶಿವನಗರ, ಲಿಂಗದಹಳ್ಳಿ ಸಮೀಪ ಕಾಲುವೆಗೆ ಅನಧಿಕೃತವಾಗಿ ಅಳವಡಿಸಲಾಗಿದ್ದ  ಪಂಪ್ ಸೆಟ್ ತೆರವು ಕಾರ್ಯಚರಣೆಯನ್ನು ಹೊನ್ನಾಳಿ ಎಸಿ ಅಭಿಷೇಕ್ ರವರ ನೇತೃತ್ವದಲ್ಲಿ ತಹಶೀಲ್ದಾರರು, ನೀರಾವರಿ ಇಲಾಖೆ ಅಧಿಕಾರಿಗಳು ಪೊಲೀಸ್ ರಕ್ಷಣೆಯೊಂದಿಗೆ ತೆರವು ಮಾಡಿ ಪರಿಕರಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕೊನೆ ಭಾಗದ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ನೀರು ತಲುಪದ ಕಾರಣ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ. ಬಲದಂಡೆ ಕಾಲುವೆಗೆ  ಫೆಬ್ರವರಿ 28 ವರೆಗೆ ನೀರು ಹರಿಸಲಾಗುತ್ತಿದೆ.