ಮುಂದುವರಿದ ಸೋಂಕು ಇಳಿಕೆ


ಬೆಂಗಳೂರು ನ.13-ರಾಜ್ಯದಲ್ಲಿ ಸತತವಾಗಿ ಕೊರೊನಾ ಸೋಂಕು ಪ್ರಕರಣಗಳ ಇಳಿಕೆ ಮುಂದುವರೆದಿದ್ದು ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಸೋಂಕು ಇಳಿಕೆ ಜೊತೆಗೆ ಸೋಂಕಿನಿಂದ ಗುಣಮುಖರಾಗುವ ಸಂಖ್ಯೆಯು ಹೆಚ್ಚಾಗಿದ್ದು ಹಾಗೆಯೇ ಸಾವಿನ ಪ್ರಮಾಣವುಇಳಿಕೆಯಾಗುತ್ತಿರುವುದು ಜನರ ಆತಂಕವನ್ನು ಕಡಿಮೆ ಮಾಡಿದೆ.


ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 2016 ಪ್ರಕರಣಗಳು ಧೃಡಪಟ್ಟಿದೆ ಹಾಗೆಯೇ ಸೋಂಕಿನಿಂದ3443ಮಂದಿ ಗುಣಮುಖರಾಗಿದ್ದಾರೆ, ಸೋಂಕಿಗೆ 17ಸೋಂಕಿತರು ಮೃತಪಟ್ಟಿದ್ದಾರೆ
ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 857928ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 818392ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 28026 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 11491 ಜನ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ781 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 1030ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 355245ಕ್ಕೆ ಏರಿಕೆಯಾಗಿದೆ.
ನಗರದಲ್ಲುಕಳೆದ24ಗಂಟೆಗಳಲ್ಲಿ ಸೊಂಕಿಗೆ 03ಮಂದಿಬಲಿಯಾಗಿದ್ದು , ಒಟ್ಟಾರೆ ಸಾವಿನ ಸಂಖ್ಯೆ 3988ಕ್ಕೆ ಏರಿಕೆಯಾಗಿದೆ. ಇಂದು1200 ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು17769ಸಕ್ರಿಯ ಪ್ರಕರಣಗಳಿವೆ.


ಜಿಲ್ಲಾ ವಾರು ಸೊಂಕಿತರ ವಿವರ
ಬಾಗಲಕೋಟೆ 09ಬಳ್ಳಾರಿ 28 ಬೆಳಗಾವಿ52ಬೆಂಗಳೂರು ಗ್ರಾಮಾಂತರ 50ಬೀದರ್02 ಚಾಮರಾಜನಗರ 03 ಚಿಕ್ಕಬಳ್ಳಾಪುರ 45ಚಿಕ್ಕಮಗಳೂರು 37ಚಿತ್ರದುರ್ಗ33ದಕ್ಷಿಣ ಕನ್ನಡ 67ದಾವಣಗೆರೆ 28ಧಾರವಾಡ 16 ಗದಗ 03ಹಾಸನ 60ಹಾವೇರಿ 03ಕಲಬುರಗಿ 27ಕೊಡಗು 22ಕೋಲಾರ 22ಕೊಪ್ಪಳ 04ಮಂಡ್ಯ 69ಮೈಸೂರು 64ರಾಯಚೂರು 22 ರಾಮನಗರ 14ಶಿವಮೊಗ್ಗ 41ತುಮಕೂರು 184ಉಡುಪಿ 19ಉತ್ತರ ಕನ್ನಡ 23ವಿಜಯಪುರ 33ಯಾದಗಿರಿ 06