ಮುಂದುವರಿದ ಶಾಸಕ ಶ್ರೀಮಂತ ಪಾಟೀಲ ಅಭಿವೃದ್ಧಿ ಪರ್ವ, ಒಂದೇ ದಿನ 22, 61ಕೋಟಿ ರೂ, ಕಾಮಗಾರಿಗೆ ಚಾಲನೆ

ಅಥಣಿ : ಮಾ.6:ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಅಭಿವೃದ್ಧಿ ಪರ್ವ ಮುಂದುವರೆದಿದ್ದು ಇದೇ ಮೊಟ್ಟ ಮೊದಲ ಬಾರಿಗೆ 22 ಕೋಟಿ 61 ಲಕ್ಷದ ಕಾಮಗಾರಿ ಒಂದೇ ದಿನ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅನಂತಪುರ ಗ್ರಾಮದಲ್ಲಿ ಚಾಲನೆ ನೀಡಿದರು.
ಈ ವೇಳೆ ಶಾಸಕ ಶ್ರೀಮಂತ ಪಾಟೀಲ ಮಾತನಾಡಿ, ಬರಗಾಲ ಪೀಡಿತ ಅನಂತಪುರ ಭಾಗದಲ್ಲಿ ನೀರಾವರಿ ಒದಗಿಸುವ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡುತ್ತಿರುವ, ಬಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ನಾನು ಸಾಕಷ್ಟು ಶ್ರಮಿಸಿರುವೆ ಆದರೂ ಕೆಲ ಅಡತಡೆಗಳ ಪರಿಣಾಮ ಹಿನ್ನಡ ಉಂಟಾಗಿತ್ತು. ಆದರೆ ಈ ಯೋಜನೆ ಪೂರ್ಣಗೊಳಿಸಲೇ ಬೇಕು ಎನ್ನುವ ನನ್ನ ದೃಢ ನಿರ್ಧಾರದ ಪರಿಣಾಮ ಈ ಯೋಜನ ಅಂತಿಮ ಹಂತ ತಲುಪಿದೆ ಎಂದರು,
ಕ್ಷೇತ್ರದಲ್ಲಿ ಮನೆ ಇಲ್ಲದವರಿಗೆ 1700 ಮನೆಗಳನ್ನು ಮಂಜೂರು ಮಾಡಿಸಿದ್ದು ಗ್ರಾಮ ಪಂಚಾಯತಿ ಮೂಲಕ ಬಡವರಿಗೆ ಮನೆ ಹಂಚಿಕೆ ಮಾಡಲಾಗುವುದು ಎಂದ ಅವರು ನನ್ನ ಮೇಲೆ ವಿಶ್ವಾಸ ಇಟ್ಟು ನನ್ನನ್ನು ಆಯ್ಕೆ ಮಾಡಿದ್ದಾರೆ ಇದಕ್ಕೆ ಪ್ರತಿಯಾಗಿ ನಾನು ಮತದಾರರ ವಿಶ್ವಾಸಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ ಎಂದರು.
ಇಂದು ಬೇವನೂರ ಗ್ರಾಮದಿಂದ 1 ಕೋಟಿ ವೆಚ್ಚದ ಅನಂತಪುರ ರಸ್ತೆ ಕಾಮಗಾರಿಗೆ ಅನಂತಪುರ ನ್ಯಾಯಾ ತೇವರಟ್ಟಿ, ಶಿವನೂರ, ಕಲ್ಲೂತಿ, ತಾವಂಶಿ 10 ಕೋಟಿ ವೆಚ್ಚದ 18 ಕಿಮೀ. ರಸ್ತೆ ಕಾಮಗಾರಿಗೆ ಅನಂತಪುರ ಗ್ರಾಮದಿಂದ ಶಿಗಣಾಪುರ 2 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ, ಅನಂತಪೂರ ಗ್ರಾಮದಿಂದ ಕೊಕ್ಕರೆ ವರೆಗಿನ 90 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ, ಅನಂತಪುರ ಗ್ರಾಮದ ಅನಂತಪುರ – ಅಥಣಿ ರಸ್ತೆಯಿಂದ ಔರಗಾಳಿ ತೋಟದ 15 ಲಕ್ಷ ವೆಚ್ಚದ ರಸ್ತೆ ಸುಧಾರಣೆ ಕಾಮಗಾರಿಗೆ, ಅನಂತಪುರ ಗ್ರಾಮದಲ್ಲಿ 4 ಕೋಟಿ ವೆಚ್ಚದ ಜಲಜೀವನ ಮಿಷನ್, ಕಾಮಗಾರಿಗೆ, ಅನಂತಪೂರ ಗ್ರಾಮದ ದ್ರವ ತ್ಯಾಜ್ಯ ನಿರ್ವಹಣೆ 60 ಲಕ್ಷದ ವೆಚ್ಚದ ಕಾಮಗಾರಿಗೆ, ಅನಂತಪೂರ ಗ್ರಾಮದ ಶಿಂದೆ ತೋಟದಲ್ಲಿ 10 ಲಕ್ಷ 80 ಸಾವಿರ ವೆಚ್ಚದ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿ ಅನಂತಪುರ ಗ್ರಾಮದ ಸರಕಾರಿ ಹಿರಿದ ಪ್ರಾಥಮಿಕ ಶಾಲೆಯ ಕೊಠಡಿ 14 ಲಕ್ಷ ವೆಚ್ಚದ ನಿರ್ಮಾಣ ಕಾಮಗಾರಿಗೆ, ಮಲಾಬಾದ ಗ್ರಾಮದಲ್ಲಿ 3.22 ಕೋಟಿ ವೆಚ್ಚದ ಜಲಜೀವನ ಮಿಷನ್ ಕಾಮಗಾರಿಗೆ, ಮಲಾಬಾದ ಗ್ರಾಮದಲ್ಲಿ ಮಲಾಬಾದ – ವಜ್ರವಾಡ 60 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಪಂಚಾಯತ ಅಧ್ಯಕ್ಷ ಕುಮಾರ ಹಬಗುಂಡ, ದಾದಾ ಸಿಂದೆ, ಗುತ್ತಿಗೆದಾರರಾದ ನಾನಾಸಾಬ ಅವತಾಡೆ, ಸಂತೋಷ, ಕಕಮರಿ, ಗ್ರಾ.ಪಂ ಸದಸ್ಯರಾದ ಮಲ್ಲೇಶ ಮೇತ್ರಿ, ಶೇಖರ ತೇಲಿ, ಅಶೋಕ ಮಾಡಿದ್ದಾಳೆ, ನೇತಾಜಿ ಜಾಧವ, ರೇವಣಸಿದ್ದ ಮೊಕಾಶಿ, ಸಿದರಾಯ ಕರೋಲಿ, ಓಂಪ್ರಕಾರ ಡೊಳ್ಳಿ ರಾಜು ಮಾಲಗಾಂವಿ, ಸುನೀಲ ಹೊನಕಾಂಡ, ವಿಠಲ್ ನಾಯಕ, ನಾನಾ ಡಾಂಗೆ, ದೊಂಡಿಬಾ ಸಿಂದೆ ಗುತ್ತಿಗೆದಾರರಾದ, ಡಿ.ಸಿ.ನಾಯಿಕ, ರಮೇಶ ನೀವಲಗಿ, ಮಲ್ಲಿಕಾರ್ಜುನ ಕುಂಬಾರ, ಐನಗೌಡ ಪಾಟೀಲ, ಶಿವಾಜಿ ಗಾಡಿವಡ್ಡರ್ , ಧುರೀಣರಾದ ಈಶ್ವರ ಕುಂಬಾರೆ, ಆರ್.ಎಮ್.ಪಾಟೀಲ, ಮಹಾದೇವ ಕೋರೆ, ನಿಂಗಪ್ಪ ಯೋಕಲೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.