ಮುಂದುವರಿದ ಕೊರೊನಾ ಏರಿಕೆ,ಇಂದು 4553 ಜನರಿಗೆ ಸೋಂಕು,15 ಸಾವು

ಬೆಂಗಳೂರು, ಏ. 4- ರಾಜ್ಯದಲ್ಲಿ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ರಾಜಧಾನಿ ಬೆಂಗಳೂರಿನಲ್ಲೂ ಸೋಂಕು ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿದೆ ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ2787 ಸೋಂಕು ಪ್ರಕರಣ ಸೇರಿದಂತೆ ರಾಜ್ಯದಲ್ಲಿ, ಇಂದು ಹೊಸದಾಗಿ 4,553 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 10,15,155ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ 15 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 12,625ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರಿನಲ್ಲಿ 8 ಮಂದಿ
ಕಲ್ಬುರ್ಗಿಯಲ್ಲಿ ಮೂವರು ಧಾರವಾಡದಲ್ಲಿ ಇಬ್ಬರು ಹಾಸನದಲ್ಲಿ ಹಾಗು ತುಮಕೂರಿನಲ್ಲಿ ಒಬ್ಬ ಸೋಂಕಿತ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಸಾವು ಸಂಭವಿಸಿಲ್ಲ.
ರಾಜ್ಯದಲ್ಲಿ ಇಂದು 2,060ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 9,63,419ಕ್ಕೆ ಏರಿಕೆಯಾಗಿದೆ. ಇನ್ನು ರಾಜ್ಯದಲ್ಲಿ 39,092 ಸಕ್ರೀಯ ಪ್ರಕರಣಗಳಿದ್ದು, ಈ ಪೈಕಿ 331 ಮಂದಿ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಇಂದು 2,787 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 4,47,031ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಸೋಂಕಿಗೆ 8 ಮಂದಿ ಬಲಿಯಾಗಿದ್ದಾರೆ.ಬೆಂಗಳೂರಿನಲ್ಲಿ ಒಟ್ಟಾರೆ ಸಾವಿನ ಸಂಖ್ಯೆ4649ಕ್ಕೆ ಏರಿಕೆಯಾಗಿದೆ.
ಇಂದು1225 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರಿನಲ್ಲಿ ಇದುವರೆಗೂ414283 ಸೋಂಕಿತರು ಗುಣಮುಖರಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು28098 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 20,ಬಳ್ಳಾರಿ 93, ಬೆಳಗಾವಿ52,,ಬೆಂಗಳೂರು ಗ್ರಾಮಾಂತರ155,, ಬೀದರ್147, ಚಾಮರಾಜನಗರ 15, ಚಿಕ್ಕಬಳ್ಳಾಪುರ10,,ಚಿಕ್ಕಮಗಳೂರು 17,,ಚಿತ್ರದುರ್ಗ 29,,ದಕ್ಷಿಣ ಕನ್ನಡ 83,ದಾವಣಗೆರೆ 23,ಧಾರವಾಡ 100, ಗದಗ18,,ಹಾಸನ 104,,ಹಾವೇರಿ 07, ಕಲಬುರಗಿ 170,,ಕೊಡಗು 14,ಕೋಲಾರ 20,ಕೊಪ್ಪಳ 10,ಮಂಡ್ಯ 79,,ಮೈಸೂರ216,,ರಾಯಚೂರು 23,,,ರಾಮನಗರ 18,ಶಿವಮೊಗ್ಗ 36,ತುಮಕೂರು 107,ಉಡುಪಿ73,ಉತ್ತರ ಕನ್ನಡ 49,ವಿಜಯಪುರ 16,ಯಾದಗಿರಿ 18,