ಮುಂದುವರಿದ ಅಕಾಲಿಕ ವರ್ಷಧಾರೆ : ಜಲಾವೃತ ಕೃಷಿ ಜಮೀನು!

ಶಿವಮೊಗ್ಗ, ನ. 18: ಮಲೆನಾಡಲ್ಲಿ ಅಕಾಲಿಕ ವರ್ಷಧಾರೆ ಮುಂದುವರಿದಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಾಗೂ ಚಂಡಮಾರುತ ಕಾರಣದಿಂದ, ಕಳೆದ
ಕೆಲ ದಿನಗಳಿಂದ ಜಿಲ್ಲೆಯ ವಿವಿಧೆಡೆ ಬೀಳುತ್ತಿರುವ ಮಳೆ ಜನಜೀವನ
ಅಸ್ತವ್ಯಸ್ತವಗೊಳಿಸಿದೆ.
ಬುಧವಾರ ರಾತ್ರಿ ಕೂಡ ಶಿವಮೊಗ್ಗ ತಾಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ವ್ಯಾಪಕ
ಮಳೆಯಾಯಿತು. ಕೆರೆಕಟ್ಟೆಗಳು ಉಕ್ಕಿ ಹರಿಯುತ್ತಿರುವುದರಿಂದ, ತಗ್ಗು ಪ್ರದೇಶಗಳಲ್ಲಿ
ತಲೆದೋರಿರುವ ಜಲಾವೃತ ಸ್ಥಿತಿ ಮುಂದುವರಿದೆದೆ.
ಮುಂಗಾರು ಮಳೆ ಅವಧಿಯಲ್ಲಿಯೂ ಆಗದಷ್ಟು ಭಾರೀ ಮಳೆ ಹಲವೆಡೆಯಾಗುತ್ತಿದೆ. ಇದು ರೈತ
ಸಮೂಹದ ನಿದ್ದೆಗೆಡಿಸಿದೆ. ಪ್ರಸ್ತುತ ಕಟಾವಿಗೆ ಬಂದಿರುವ ಬೆಳೆ ನಷ್ಟದ ಭೀತಿ
ಎದುರಾಗಿಸಿದೆ.
ಈಗಾಗಲೇ ಜಿಲ್ಲೆಯಲ್ಲಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಮಳೆಗೆ ಸಿಲುಕಿ
ಹಾನಿಯಾಗಿದೆ. ಇದೇ ರೀತಿ ಮಳೆ ಮುಂದುವರಿದರೆ, ಮತ್ತಷ್ಟು ಬೆಳೆ ನಷ್ಟಕ್ಕೀಡಾಗುವ
ಆತಂಕದಲ್ಲಿ ರೈತ ಸಮೂಹವಿದೆ.
ಸಂಕಷ್ಟ: ಪ್ರಸ್ತುತ ಬೀಳುತ್ತಿರುವ ಅಕಾಲಿಕ ಮಳೆಯಿಂದ ಬೆಳೆ ಕಳೆದುಕೊಂಡ ರೈತರಿಗೆ,
ಕಾಲಮಿತಿಯೊಳಗೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ರೈತ ನಾಯಕರು ರಾಜ್ಯ ಸರ್ಕಾರಕ್ಕೆ
ಒತ್ತಾಯಿಸುತ್ತಿದ್ದಾರೆ. ಹಾಗೆಯೇ ಭತ್ತ ಮತ್ತು ಮೆಕ್ಕೆಜೋಳಕ್ಕೆ ವೈಜ್ಞಾನಿಕ ಬೆಂಬಲ
ಬೆಲೆ ನಿಗದಿಗೊಳಿಸಬೇಕು. ತತ್’ಕ್ಷಣವೇ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಬೇಕು.
ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.Attachments area