ಮುಂದಿನ 5 ವರ್ಷಗಳಲ್ಲಿ ಪ್ರತಿದಿನ 1 ಶತಕೋಟಿ ಯುಪಿಐ ವಹಿವಾಟು ಗುರಿ: ನಿರ್ಮಲ

ನವದೆಹಲಿ,ಸೆ.20-ದೇಶದಲ್ಲಿ ಮುಂದಿನ 5 ವರ್ಷಗಳಲ್ಲಿ ಪ್ರತಿದಿನ ಒಂದು ಶತಕೋಟಿ ರೂಪಾಯಿ ಯುಪಿಐ ವಹಿವಾಟು ನಡೆಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಹೇಳಿದ್ದಾರೆ.

ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ -ಯುಪಿಐ ಈ ವರ್ಷದ ಜುಲೈನಲ್ಲಿ 10.62 ಟ್ರಿಲಿಯನ್ ರೂಪಾಯಿ ಮೌಲ್ಯದ 6.28 ಶತಕೋಟಿ ವಹಿವಾಟು ದಾಖಲಿಸಿದೆ ಎಂದು ಹೇಳಿದ್ದಾರೆ.

ಫಿಕ್ಕಿ ಆಯೋಜಿಸಿದ್ದ ಕೀಡ್ಸ್ ಕಾರ್ಯಕ್ರಮದ 3ನೇ ಆವೃತ್ತಿಯ ವಿಷಯ- ಹಣಕಾಸು ಭವಿಷ್ಯದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು
ಕಳೆದ ತಿಂಗಳಿಗಿಂತ ಶೇಕಡಾ 7 ರಷ್ಟು ಬೆಳವಣಿಗೆ ದಾಖಲಿಸಿದೆ. ಮಾಸಿಕ ಆಧಾರದ ಮೇಲೆ, ಯುಪಿಐ ವಹಿವಾಟುಗಳಲ್ಲಿ ದೇಶ ಗಣನೀಯ ಬೆಳವಣಿಗೆ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.

ಫಿನ್‌ಟೆಕ್ ಅಳವಡಿಕೆಯ ಜಾಗತಿಕ ಸರಾಸರಿ 64 ಪ್ರತಿಶತದಷ್ಟಿದ್ದರೆ ಅದು ಭಾರತದಲ್ಲಿ 87 ಪ್ರತಿಶತ ಎಂದು ಅವರು ಉಲ್ಲೇಖಿಸಿದ್ದಾರೆ.

ಡಿಜಿಟಲೀಕರಣದಿಂದ ಅಭಿವೃದ್ದಿ;

ಬ್ಯಾಂಕಿಂಗ್ ಮತ್ತು ಸಂಬಂಧಿತ ಸೇವೆಗಳ ಡಿಜಿಟಲೀಕರಣದಿಂದ ಭಾರತದಲ್ಲಿ ಹಣಕಾಸು ಭವಿಷ್ಯವು ಹೆಚ್ಚು ಹೆಚ್ಚು ಚಾಲನೆಯಾಗಲಿದೆ ಎಂದು ಹೇಳಿದ್ದಾರೆ.

ಡಿಜಿಟಲೀಕರಣ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಮತ್ತು ಗ್ರಾಹಕರ ವಿಷಯದಲ್ಲಿ ಹೆಚ್ಚಿನ ಆರ್ಥಿಕ ಸೇವೆಗಳನ್ನು ತರಲು ಸಹಾಯ ಮಾಡಿದೆ ಮತ್ತು ಮುಂದಿನ 25 ವರ್ಷಗಳಲ್ಲಿ ಇದು ಮತ್ತಷ್ಟು ಬಲಗೊಳ್ಳಲಿದೆ ಎಂದು ಅವರು ಹೇಳಿದರು