ಮುಂದಿನ ಸಿಎಂ ಹೈಕಮಾಂಡ್ ನಿರ್ಧಾರ

ಕಲಬುರಗಿ;ಅ25: ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಅನ್ನೋದನ್ನು ಹೈ ಕಮಾಂಡ್ ನಿರ್ಧರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಜನರು ಅಭಿಮಾನದಿಂದ ಸಿಎಂ ಆಗಲಿ ಅಂತ ಹೇಳ್ತಾರೆ ಎಂದರು.
ಉಪ ಚುನಾವಣೆಯ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ.ರಾಜ್ಯ ಸರ್ಕಾರ ಪ್ರವಾಹ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿಲ್ಲಾ
ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದರು.
ಪದೇ ಪದೇ ಕಾಂಗ್ರೆಸ್ ಶಾಸಕರು ಬಿಜೆಪಿ ಗೆ ಬರ್ತಾರಂತೆ ಸವದಿ ಹೇಳ್ತಿದ್ದಾರೆ ಎಂಬ ಪ್ರಶ್ನೆಗೆ
ರಾಜಕೀಯ ವಾಗಿ ಅವರು ಸುಮ್ಮನೆ ಹೇಳ್ತಾರೆ
ಪ್ರವಾಹ ಸಂತ್ರಸ್ಥರ ಬಗ್ಗೆ ಮಾತನಾಡುವದನ್ನು ಬಿಟ್ಟಿದ್ದಾರೆ
ಅದನ್ನು ಬಿಟ್ಟು ಶಾಸಕರು ಬರ್ತಾರಂತೆ ಹೇಳ್ತಿದ್ದಾರೆ ಎಂದು ಟೀಕಿಸಿದರು.