ಮುಂದಿನ ವಾರ ಸ್ಪುಟ್ನಿಕ್ – 5 ಲಸಿಕೆ ಭಾರತಕ್ಕೆ ಪ್ರವೇಶ

ಕಾನ್ಪುರ 15- ರಷ್ಯಾ ಅಭಿವೃದ್ಧಿ ಪಡಿಸಿರುವ ಸ್ಪುಟ್ನಿಕ್ -ವಿ ಲಸಿಕೆ ಮೊದಲ ಹಂತದ ಲಸಿಕೆಯು ಮುಂದಿನವಾರ ವೇಳೆಗೆ ಗಣೇಶ ಶಂಕರ ವಿದ್ಯಾರ್ಥಿ ವೈದ್ಯಕೀಯ ಕಾಲೇಜಿಗೆ ಬರಲಿದೆ.
ಈ ಲಸಿಕೆಯ ಎರಡು‌ ಹಾಗೂ ಮೂರನೇ ಹಂತದ ಮಾನವನ ಮೇಲೆ ಪ್ರಯೋಗ ನಡೆಯಲಿದೆ.
ಡಾ. ರೆಡ್ಡೀಸ್ ಪ್ರಯೋಗಾಲಯವು ಈ ಲಸಿಕೆಯನ್ನು ಮಾನವನ ಮೇಲೆ ಪ್ರಯೀಗಕ್ಕೆ ಭಾರತೀಯ ನಿಯಂತ್ರಣ ಮಹಾ ನಿರ್ದೇಶಕರು ಅನುಮತಿ ಪಡೆದಿತ್ತು ಎಂದು‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂದಿನನ ವಾರದಿಂದ ಲಸಿಕೆಯು ಮಾನವನ ಮೇಲೆ ಪ್ರಯೋಗ ಆರಂಭವಾಗಲಿದೆ ಎಂದು ಗಣೇಶ ಶಂಕರ ಬೈದ್ಯಕೀಯ
ಪ್ರಾಚಾರ್ಯ, ಆರ್ ಬಿ.ಕಮಲ್ ತಿಳಿಸಿದ್ದಾರೆ.
ಈಗಾಗಲೇ 180 ಮಂದಿ ಸ್ವಯಂ ಪ್ರೇರಿತವಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಸಂಶೋಧನಾ ವಿಭಾಗದ ಮುಖ್ಯಸ್ಥ ಸೌರಭ್‌ ಅಗರವಾಲ್‌ ಅವರು ಯಾರಿಗೆ ಎಷ್ಟು ಪ್ರಮಾಣದ ಲಸಿಕೆ ನೀಡಬೇಕೆಂಬುದನ್ನು ನಿರ್ಧರಿಸಲಿದ್ದಾರೆ. ಒಬ್ಬರಿಗೆ ಒಂದು ಡೋಸ್‌ ನೀಡಿ ಅವರ ಮೇಲೆ ನಿಗಾ ಇಡಲಾಗುತ್ತದೆ. ಅವಶ್ಯವಿದ್ದವರಿಗೆ ಮತ್ತೆ ಲಸಿಕೆ ಕೊಡಲಾಗುತ್ತದೆ. ರೋಗಿಗಳ ಪರಿಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತದೆ. ಸಂಗ್ರಹಿಸಿದ ದತ್ತಾಂಶಗಳಿಂದ ಲಸಿಕೆಯು ಯಶಸ್ವಿಯಾಗಿದೆಯೇ ಇಲ್ಲವೇ ಎಂಬುದನ್ನು ನಿರ್ಧರಿಸಲಾಗುತ್ತದೆ’ ಎಂದು ಅವರು ನುಡಿದಿದ್ದಾರೆ.

‘20 ರಿಂದ 70 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ಲಸಿಕೆಯನ್ನು ಸಂರಕ್ಷಿಸಲಾಗುತ್ತದೆ. ಕಾಲೇಜಿನ ಎಥಿಕ್‌ ಸಮಿತಿಯೂ ಲಸಿಕೆಯ ಪ್ರಯೋಗಕ್ಕೆ ಅನುಮತಿ ಕೊಟ್ಟಿದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.